ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮರ ಸಮಾವೇಶ ಸೆ.17ರಂದು

Last Updated 5 ಆಗಸ್ಟ್ 2013, 10:39 IST
ಅಕ್ಷರ ಗಾತ್ರ

ಯಾದಗಿರಿ: ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ವಿಶ್ವಕರ್ಮ ಜನಾಂಗದ ಸಮಾವೇಶವನ್ನು ಬರುವ ಸೆ.17ರಂದು ಹಮ್ಮಿಕೊಂಡಿದ್ದು, ಸಮಾವೇಶದಲ್ಲಿ ಜನಾಂಗಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಹಾಗೂ ರಾಜ್ಯದಲ್ಲಿ ಮಹಿಳೆಯರಿಗೆ ತರಬೇತಿ, ಶಿಷ್ಯ ವೇತನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉತ್ತರ ಕರ್ನಾಟಕ ಸಂಚಾಲಕ ವೀರೇಂದ್ರ ಇನಾಮದಾರ ಹೇಳಿದರು.

ನಗರದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ವಿಶ್ವಕರ್ಮ ಜಯಂತ್ಯುತ್ಸವ ಪೂರ್ವಭಾವಿ ಸಭೆಯಲ್ಲಿ  ಮಾತನಾಡಿದರು. ರಾಜ್ಯದಲ್ಲಿ ವಿಶ್ವಕರ್ಮ ಜನಾಂಗದವರು ಅಧಿಕ ಸಂಖ್ಯೆಯಲ್ಲಿದ್ದು, ಅವರಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾಗದೇ ಇರುವುದರಿಂದ ಇಲ್ಲಿಯವರೆಗಿನ ಸರ್ಕಾರಗಳು ಕಣ್ತೆರೆಯುತ್ತಿಲ್ಲ.

ಜನಾಂಗದ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ಬೆಂಗಳೂರಿನಲ್ಲಿ ವಿಶ್ವಕರ್ಮ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮಗಳಿಂದ ಜನಾಂಗದವರು ಅಧಿಕ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕು ಎಂದರು.

ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು, ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಮತ್ತಿತರರು ಪಾಲ್ಗೊಳ್ಳುವರು ಎಂದರು. ವಿಶ್ವಕರ್ಮ ಜನಾಂಗಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ, ಪಂಚ ಕಸುಬುಗಳ ಉತ್ತೇಜನಕ್ಕಾಗಿ ಅಭಿವೃದ್ಧಿ ನಿಗಮ ಸ್ಥಾಪನೆ. ವಿಶ್ವಕರ್ಮ ಮಕ್ಕಳಿಗೆ ಶಿಷ್ಯವೇತನ ಹಾಗೂ ಪ್ರತಿ ಜಿಲ್ಲಾ ಕೇಂದ್ರದಲ್ಲಿ ವಸತಿ ನಿಲಯ ಸ್ಥಾಪಿನೆ, ತಿಂಥಣಿ ಮೌನೇಶ್ವರ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸಮಾವೇಶದಲ್ಲಿ ಇಡಲಾಗುವುದು ಎಂದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನಗರ ಘಟಕದ ಪದಾಧಿಕಾರಿಗಳಾಗಿ ಶಿವಣ್ಣ ವಿಶ್ವಕರ್ಮ(ಅಧ್ಯಕ್ಷ), ಮನೋಹರ್, ಮನಮೋಹನ ಪಂಚಾರ, ರಾಜಶೇಖರ ವಿಶ್ವಕರ್ಮ, ಮನೋಹರ್ ವಿಶ್ವಕರ್ಮ (ಉಪಾಧ್ಯಕ್ಷರು) ಅವರನ್ನು ಆಯ್ಕೆ ಮಾಡಲಾಯಿತು. ಹೋಬಳಿ ಘಟಕಗಳ ಅಧ್ಯಕ್ಷರಾಗಿ ಮೌನಪ್ಪ ವಿಶ್ವಕರ್ಮ (ಹಯ್ಯೊಳ), ದೇವಿಂದ್ರ ವಿಶ್ವಕರ್ಮ (ವಡಗೇರಾ), ಬಸವರಾಜ ನಾಯ್ಕಲ್(ದೋರನಹಳ್ಳಿ), ತಿಪ್ಪಣ್ಣ ವಿಶ್ವಕರ್ಮ (ರಾಮಸಮುದ್ರ), ರಮೇಶ ಕಂಬಾರ ವಿಶ್ವಕರ್ಮ(ಹತ್ತಿಕುಣಿ), ಹಣಮಂತರಾಯ ವಿಶ್ವಕರ್ಮ (ಬಳಿಚಕ್ರ), ಶಿವಶರಣಪ್ಪ ವಿಶ್ವಕರ್ಮ (ಕೊಂಕಲ್), ನಾರಾಯಣ ಪಂಚಾಳ (ಪುಟ್‌ಪಾಕ್) ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ವಿಶ್ವಕರ್ಮ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ವಿಶ್ವಕರ್ಮ, ಅಶೋಕ ಚಂಡರಕಿ, ನಾಗು ಅಂಕಲಿಗಿ, ಭೀಮಣ್ಣ ವಿಶ್ವಕರ್ಮ ಹೆಡಗಿಮದ್ರಿ, ಮರೆಪ್ಪ ಚಟಿಗೇರಿ, ಬಸವರಾಜ ,ಶಿವಾನಂದ, ವೀರಣ್ಣ ನಾಯ್ಕಲ್, ಕಾಂತಪ್ಪ ಮಹಾಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT