ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಿರಣಗಳ ಉಗಮ ಬೇಧಿಸುವ ಸನಿಹಕ್ಕೆ ವಿಜ್ಞಾನಿಗಳು

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಭೂಮಿಯ ಮೇಲಿನ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯುಂಟು ಮಾಡುವ ಮತ್ತು ಬಾಹ್ಯಾಕಾಶದಲ್ಲಿ ಗಗನಯಾನಿಗಳ ಜೀವಕ್ಕೆ ಸಂಚಕಾರ ತಂದೊಡ್ಡುವ ಅಪಾಯಕಾರಿ ವಿಶ್ವಕಿರಣಗಳ (ಕಾಸ್ಮಿಕ್ ರೇಸ್) ಉಗಮದ ರಹಸ್ಯ ಬೇಧಿಸುವ ಸನಿಹಕ್ಕೆ ವಿಜ್ಞಾನಿಗಳು ಬಂದಿದ್ದಾರೆ.

ಶಕ್ತಿಶಾಲಿ ಕಣಗಳನ್ನು ಹೊರಸೂಸುವ ವಿಶ್ವಕಿರಣದ ಉಗಮವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಹಲವು ದಶಕಗಳಿಂದ ವಿಜ್ಞಾನಿಗಳು ತೊಡಗಿಸಿಕೊಂಡಿದ್ದಾರೆ. ಆದರೆ, ದಕ್ಷಿಣ ಧ್ರುವದ ಐಸ್‌ಕ್ಯೂಬ್ ನ್ಯೂಟ್ರಿನೊ ನಿಗಾ ಕೇಂದ್ರದಿಂದ ಪಡೆದಿರುವ ಮಾಹಿತಿ ಮತ್ತು ಅಂಕಿ ಅಂಶಗಳ ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳು, ವಿಶ್ವಕಿರಣಗಳು ಹೇಗೆ, ಎಲ್ಲಿಂದ ಹೊರಹೊಮ್ಮುತ್ತವೆ ಎಂಬುದನ್ನು ಶೀಘ್ರದಲ್ಲೇ ಕಂಡುಕೊಳ್ಳಲಿದ್ದಾರೆ.

`ಆಕಾಶಗಂಗೆಯಲ್ಲಿ ನಕ್ಷತ್ರಗಳ ಸ್ಫೋಟದಿಂದ ಉಂಟಾಗುವ ಸೂಪರ್‌ನೋವಾ, ವಿಶ್ವಕಿರಣಗಳಿಗೆ ಮೂಲಾಧಾರವಾಗಿವೆ. ಇವುಗಳ ಮೂಲಕವೇ ಅತ್ಯಂತ ಶಕ್ತಿಶಾಲಿ ಕಣಗಳು ಹೊರಹೊಮ್ಮುತ್ತವೆ' ಎಂಬುದನ್ನು ಆರಂಭಿಕ ಹಂತದಲ್ಲಿ ಕಂಡುಕೊಳ್ಳಲಾಗಿದೆ' ಎಂದು ವಿಜ್ಞಾನಿಗಳನ್ನು ಉಲ್ಲೇಖಿಸಿ ಸ್ಥಳೀಯ ಜರ್ನಲ್ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT