ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಮರುಭೂಮಿಗಳಲ್ಲಿ ಶೇ 11ರಷ್ಟು ಹಸಿರು?

ಇಂಗಾಲ ಪ್ರಮಾಣ ಏರಿಕೆ: ಹೊಸ ವಾದ
Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಇಂಗಾಲ ಡೈಆಕ್ಸೈಡ್ ಪ್ರಮಾಣ ಹೆಚ್ಚಳದಿಂದ ವಿಶ್ವದ ಮರುಭೂಮಿಗಳಲ್ಲಿ  ಹಸಿರು ಚಿಗುರುತ್ತಿದೆ' ಎಂದು ಹೊಸ ಅಧ್ಯಯನ ಹೇಳಿದೆ.

ಇಂಗಾಲ ಹೊರಸೂಸುವಿಕೆ  ಪ್ರಮಾಣ ಏರಿಕೆಯಿಂದ ಭೂಮಿಗೆ ಅಪಾಯ ಉಂಟಾಗುತ್ತಿದೆ ಎಂದು ಎಲ್ಲೆಡೆ ಆತಂಕ ವ್ಯಕ್ತವಾಗಿರುವ ಸಂದರ್ಭದಲ್ಲಿಯೇ ವಿಜ್ಞಾನಿಗಳು ಈ ಹೊಸ ವಾದ ಮುಂದಿಟ್ಟಿದ್ದಾರೆ.

`ಇಂಗಾಲ ಡೈಆಕ್ಸೈಡ್ ಪ್ರಮಾಣ ಏರಿಕೆಯಿಂದ 30 ವರ್ಷಗಳಲ್ಲಿ (1982-2010) ಬಂಜರು ಭೂಮಿಯಲ್ಲಿ ಶೇ11ರಷ್ಟು ಹಸಿರು ವೃದ್ಧಿಸಿದಿದೆ' ಎಂದು ಉಪಗ್ರಹ ಮಾಹಿತಿಯನ್ನು ಆಧರಿಸಿ ತಜ್ಞರು ಹೇಳಿದ್ದಾರೆ.

`ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾದ ಮರುಭೂಮಿಗಳಲ್ಲಿ ಈ ಸಂಬಂಧ ನಡೆಸಿದ ಅಧ್ಯಯನದಿಂದ ಈ ಅಂಶ ತಿಳಿದು ಬಂದಿದೆ' ಎಂದು ಕಾಮನ್‌ವೆಲ್ತ್ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿಎಸ್‌ಐಆರ್‌ಒ) ಸಂಶೋಧನಾ  ವಿಜ್ಞಾನಿ ಡಾ. ರಾಂದಲ್ ಡೊನ್ಯು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT