ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಮೊದಲ ಎಲೆಕ್ಟ್ರಾನಿಕ್ ಟೂತ್‌ಬ್ರಷ್

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಲಂಡನ್(ಪಿಟಿಐ): ಗ್ರಹಣಾತೀತ (ಅಲ್ಟ್ರಾಸೌಂಡ್ ವೇವ್ಸ್) ಶಬ್ದವನ್ನು ಬಳಸಿಕೊಂಡು ಹಲ್ಲು ಸ್ವಚ್ಚಗೊಳಿಸುವಂತಹ ಎಲೆಕ್ಟ್ರಾನಿಕ್ ಟೂತ್‌ಬ್ರಷ್ ಅಭಿವೃದ್ಧಿಪಡಿಸಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಈ ತಂತ್ರಜ್ಞಾನದ ಬ್ರಷ್ ಅನ್ನು ಬ್ರಿಟನ್‌ನಲ್ಲಿ ಕಳೆದ ವಾರ ಬಿಡುಗಡೆ ಮಾಡಲಾಗಿದೆ ಎಂದು ಡೈಲಿ ಮೈಲ್ ವರದಿ ಮಾಡಿದೆ.ಎಮ್ಮಿಡೆಂಟ್ ಎಂಬ ಈ ಹೊಸ ಟೂತ್‌ಬ್ರಷ್‌ನಿಂದ ಒಂದು ನಿಮಿಷಕ್ಕೆ 8.6 ಕೋಟಿ ಗ್ರಹಣಾತೀತ ಶಬ್ದದ ಅಲೆಗಳು ಹೊರಹೊಮ್ಮುತ್ತವೆ.

ಇದರ ಜತೆ ಒಂದು ವಿಶಿಷ್ಟ ಟೂತ್‌ಪೇಸ್ಟ್ ಬಳಸಬೇಕಾಗುತ್ತದೆ.  ಟೂತ್‌ಬ್ರಷ್‌ನಿಂದ ಹೊರಡುವ ಶಬ್ದದ ಅಲೆಗಳು ಈ ಪೇಸ್ಟ್‌ನಲ್ಲಿ ಲಕ್ಷಾಂತರ ಸಣ್ಣ ಗುಳ್ಳೆಗಳನ್ನು ಹೊರಡಿಸುತ್ತವೆ. ಈ ಸಣ್ಣ ಗುಳ್ಳೆಗಳು ಹಲ್ಲು, ವಸಡುಗಳು ನಡುವೆ ತೂರಿಕೊಂಡು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಆಹಾರದ ಕೊಳೆಯನ್ನು ನಾಶಪಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT