ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಹಿರಿಯಜ್ಜಿ ಬಿಸ್ಸೆ ಕೂಪರ್ ನಿಧನ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಮೊನ್ರೊ (ಅಮೆರಿಕ) (ಎಪಿ): ವಿಶ್ವದ ಅತ್ಯಂತ ಹಿರಿಯರ ಪಟ್ಟಿಯಲ್ಲಿ ದಾಖಲಾಗಿದ್ದ 116 ವರ್ಷ ವಯಸ್ಸಿನ ಬಿಸ್ಸೆ ಕೂಪರ್, ಜಾರ್ಜಿಯಾದ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.

`ಅಮ್ಮನಿಗೆ ಇತ್ತೀಚೆಗೆ ಉದರ ಸೋಂಕು ಉಂಟಾಗಿತ್ತು. ಸೋಮವಾರ ಚೇತರಿಸಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಅವರಿಗೆ ಆಮ್ಲಜನಕ ನೀಡಲಾಯಿತಾದರೂ ಮಂಗಳವಾರ  ಮಧ್ಯಾಹ್ನ 2ಗಂಟೆಯ ಹೊತ್ತಿಗೆ ಸಾವನ್ನಪ್ಪಿದರು' ಎಂದು ಬಿಸ್ಸೆ ಕೂಪರ್ ಅವರ ಮಗ ಸಿಡ್ನಿ ಕೂಪರ್ ತಿಳಿಸಿದ್ದಾರೆ.

2011ರ ಜನವರಿಯಲ್ಲಿ ಬಿಸ್ಸೆ ಕೂಪರ್ ಅವರನ್ನು ವಿಶ್ವದ ಅತ್ಯಂತ ಹಿರಿಯ ಅಜ್ಜಿ ಎಂದು ಘೋಷಿಸಲಾಗಿತ್ತು. ಆದರೆ, `ಗಿನ್ನೆಸ್ ವರ್ಲ್ಡ್ ರೆರ್ಕಾಡ್' ಬ್ರೆಜಿಲ್‌ನ ಮರಿಯಾ ಗೋಮ್ಸ ವ್ಯಾಲೆನ್‌ಟಿನ್ ಅವರು ಬಿಸ್ಸೆ ಕೂಪರ್ ಅವರಿಗಿಂತ 48 ದಿವಸ ಹಿರಿಯರು ಎಂದು ತಿಳಿದಿತ್ತು. ವ್ಯಾಲೆನ್‌ಟಿನ್ ಅವರು  2011ರ ಜೂನ್‌ನಲ್ಲಿ ನಿಧನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT