ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿದ ಜಾತೀಯತೆ

Last Updated 8 ಸೆಪ್ಟೆಂಬರ್ 2013, 19:50 IST
ಅಕ್ಷರ ಗಾತ್ರ

ಬೆಂಗಳೂರು: `ವಿಶ್ವವಿದ್ಯಾಲಯಗಳಲ್ಲಿ ಜ್ಞಾನ ಪ್ರಸಾರ ಹಾಗೂ ಸಮಾಜ ಕಟ್ಟುವ ಕೆಲಸ ಕಡಿಮೆಯಾಗಿ, ಜಾತೀಯತೆ ಹೆಚ್ಚಾಗಿದೆ' ಎಂದು ಕವಿ ಎಲ್.ಎನ್.ಮುಕುಂದರಾಜ್ ವಿಷಾದಿಸಿದರು.,ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕರ್ನಾಟಕ ಪ್ರತಿಭಾ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಲೇಖಕ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಅವರ ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ವಿಶ್ವವಿದ್ಯಾಲಯಗಳು ಸಮಾಜ ಕಟ್ಟುವ ಕೆಲಸ ಮಾಡಬೇಕು. ಆದರೆ, ಇಂದು ಆ ಕೆಲಸದ ಬದಲಿಗೆ ವಿಶ್ವವಿದ್ಯಾಲಯಗಳಲ್ಲಿ ಜಾತೀಯತೆ ಹೆಚ್ಚಾಗಿದೆ. ಕೋಮು ಸಾಮರಸ್ಯ ಕೆಡಿಸುವ ಕಾರ್ಯವನ್ನು ಸಂಘ ಪರಿವಾರದವರು ಹಿಂದಿನಿಂದಲೂ ಮಾಡುತ್ತಲೇ ಬರುತ್ತಿದ್ದಾರೆ. ಹಿಂದೂ ಧರ್ಮ ಎಂದರೆ ಮುಸ್ಲಿಂ ವಿರೋಧಿ ಎಂಬಂತೆ ಬಿಂಬಿಸಿದ್ದು ಸಂಘ ಪರಿವಾರ. ಅದು ಇಂದಿಗೂ ಮುಂದುವರಿದಿದೆ' ಎಂದರು.

`ಕಾ.ವೆಂ.ಶ್ರೀನಿವಾಸಮೂರ್ತಿ ಅವರ ಬರಹದಲ್ಲಿ ಪ್ರಾಮಾಣಿಕತೆ ಇದೆ. ವಿಷಯದ ಆಳಕ್ಕೆ ಇಳಿದು ಅದನ್ನು ವಿಶ್ಲೇಷಿಸುವ ಮೂಲಕ ಅವರು ಭಿನ್ನವಾಗಿ ಕಾಣುತ್ತಾರೆ. ವಿಶ್ವವಿದ್ಯಾಲಯಗಳಲ್ಲಿ ಜಾತೀಯತೆ ಮೀರಿದ ಕೆಲಸವನ್ನು ಮಾಡುತ್ತಿರುವ ಕೆಲವೇ ಜನರಲ್ಲಿ ಕಾ.ವೆಂ.ಶ್ರೀನಿವಾಸಮೂರ್ತಿ ಅವರೂ ಒಬ್ಬರು' ಎಂದು ಹೇಳಿದರು.

`ಬರೆದಂತೆ ಹರಿದ ಚಿತ್ತ' (ರೂ70) ಮತ್ತು `ಕೋಮು ಸೌಹಾರ್ದತೆ ಮತ್ತು ಸಮಕಾಲೀನತೆ' (ರೂ150) ಪುಸ್ತಕಗಳನ್ನು ಸಿವಿಜಿ ಪ್ರಕಾಶನ ಹೊರತಂದಿದೆ. `ಕುವೆಂಪು ನಾಟಕಗಳು ಮತ್ತು ಸಮಕಾಲೀನತೆ'( ರೂ 30) ಪುಸ್ತಕವನ್ನು ಜನಕಲಾ ಪ್ರಕಾಶನ ಹಾಗೂ `ಕನ್ನಡ ಎಂದರೆ ಬರಿ ನುಡಿ ಅಲ್ಲ'( ರೂ110) ಪುಸ್ತಕವನ್ನು ಪ್ರಿಯದರ್ಶಿನಿ ಪ್ರಕಾಶನ ಹೊರತಂದಿದೆ. ಕಾರ್ಯಕ್ರಮದಲ್ಲಿ ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌ನ ಅಧ್ಯಕ್ಷ ಎಸ್.ರಾಮಲಿಂಗೇಶ್ವರ ಮತ್ತು ಕರ್ನಾಟಕ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಪಾನ್ಯಂ ನಟರಾಜ್ ಮಾಗಡಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT