ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯಲ್ಲಿ ಮೊಳಗಿದ ಕನ್ನಡ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಸಂಸತ್‌ನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತಕುಮಾರ್ ಅವರು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಸೋಮವಾರ ಕನ್ನಡದಲ್ಲಿಯೇ ತಮ್ಮ  ಭಾಷಣ ಆರಂಭಿಸಿ ಮಾತೃಭಾಷಾ ಪ್ರೇಮ ಮೆರೆದರು.

ವಿಶ್ವಸಂಸ್ಥೆಗೆ ತೆರಳಿರುವ ನಿಯೋಗದಲ್ಲಿರುವ ಅವರು, `ನರಮೇಧ ಮತ್ತು ಇನ್ನಿತರ ಹೇಯ ಅಪರಾಧ ಕುರಿತ ಅಂತರರಾಷ್ಟ್ರೀಯ ನ್ಯಾಯಮಂಡಳಿಯ ವರದಿ~ ಬಗ್ಗೆ ಮಾತನಾಡಿದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಅನಂತಕುಮಾರ್, ಸಭಿಕರಿಗೆ ಶುಭ ಕೋರಿದರು. ವಿಶ್ವಸಂಸ್ಥೆಯ ವೇದಿಕೆ ಮೇಲೆಯೂ ಕನ್ನಡಾಭಿಮಾನ ಮೆರೆದ ಅನಂತ್‌ಕುಮಾರ್, ತಮ್ಮ ಭಾಷಣದ ಆರಂಭದ ಸಾಲುಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT