ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ಘಟಿಕೋತ್ಸವ 5ರಂದು

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಇದೇ 5ರಂದು ನಡೆಯಲಿದೆ. `ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಡಾ. ಎಂ.ಆರ್. ಶ್ರೀನಿವಾಸನ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಕುಲಪತಿ ಡಾ. ಎಚ್. ಮಹೇಶಪ್ಪ ಸೋಮವಾರ ತಿಳಿಸಿದರು.

`ಎಂಜಿನಿಯರಿಂಗ್ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ. ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಪದವಿ ಪ್ರದಾನ ಮಾಡಲಿದ್ದಾರೆ.' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಬಿ.ಇ ಹಾಗೂ ಬಿ.ಟೆಕ್ ವಿಭಾಗದಲ್ಲಿ 48,468 ವಿದ್ಯಾರ್ಥಿಗಳಿಗೆ, ಬಿ.ಆರ್ಕ್‌ನಲ್ಲಿ 143, ಎಂಬಿಎ 4,113, ಎಂಸಿಎಯಲ್ಲಿ 1,870, ಎಂಟೆಕ್‌ನಲ್ಲಿ 2,932, ಎಂ.ಆರ್ಕ್‌ನಲ್ಲಿ 8, ಎಂಎಸ್ಸಿ ಎಂಜಿನಿಯರಿಂಗ್‌ನಲ್ಲಿ 14 ಹಾಗೂ  95 ವಿದ್ಯಾರ್ಥಿಗಳಿಗೆ ಪಿ.ಎಚ್‌ಡಿ ಪದವಿಗಳನ್ನು ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು' ಎಂದು ಅವರು ವಿವರ ನೀಡಿದರು.
ಚಿನ್ನದ ಪದಕ: ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಅಭಿನವ್ ವಿ. ರಾವ್ ಏಳು ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಆರ್‌ಎನ್‌ಎಸ್‌ಐಟಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿದ್ಯಾರ್ಥಿ ಪಿ.ಫಾಲ್ಗುಣ  ಹಾಗೂ ಬೆಂಗಳೂರಿನ ಎಂ.ವಿ.ಜೆ. ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಶಂತನು ಚಕ್ರವರ್ತಿ ಅವರು ತಲಾ ಆರು ಚಿನ್ನದ ಪದಕ ಪಡೆದಿದ್ದಾರೆ.

ಬಿ.ಜಿಎಸ್. ಇನ್‌ಸ್ಟಿಟ್ಯೂಟ್ ಆಫ್ ಟಕ್ನಾಲಜಿಯ ವಿದ್ಯಾರ್ಥಿ ಸಿ.ಎಸ್.ಉಮೇಶ  ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಷಯದಲ್ಲಿ ಐದು ಚಿನ್ನದ ಪದಕ ಗಳಿಸಿದ್ದಾರೆ. ಬೆಂಗಳೂರಿನ ಡಿ.ಎಸ್.ಸಿ.ಇ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರತೀಕ್ ಸಂಗಲ್ ಹಾಗೂ ಬಿಐಟಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರದೀಪ ವೈಜನಾಥ ಬಿರಾದಾರ ತಲಾ ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ.

ಮೂಡುಬಿದರಿಯ ಎಂಐಟಿಇಯ ದೀಕ್ಷಾ ಎಂಬಿಎ ವಿಷಯದಲ್ಲಿ  ನಾಲ್ಕು ಚಿನ್ನದ ಪದಕ ಗಳಿಸಿದ್ದಾರೆ. ಬೆಂಗಳೂರಿನ ಬಿಎಂಎಸ್‌ಸಿಇ ಕಾಲೇಜಿನ ಎಂಸಿಎ ವಿದ್ಯಾರ್ಥಿ ಆರ್.ಶಿವಾನಂದ ಸಾಗರ ಹಾಗೂ ರಾಮನಗರ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಎಂಟೆಕ್‌ನ ಪವರ್ ಸಿಸ್ಟಮ್ ಎಂಜಿನಿಯರಿಂಗ್ ವಿಷಯದಲ್ಲಿ ತಲಾ ಮೂರು ಚಿನ್ನದ ಪದಕ ಗಳಿಸಿದ್ದಾರೆ.

ಪ್ರಥಮ ರ್‍ಯಾಂಕ್ ಪಡೆದವರ ವಿವರ: ಬಿಇ- ಬಿಟೆಕ್ ವಿಭಾಗ: ಏರೊನಾಟಿಕಲ್ ಎಂಜಿನಿಯರಿಂಗ್- ಜೆ.ಚೇತನ (ಶೇ 85.42- ಎಂವಿಜೆ, ಬೆಂಗಳೂರು); ಅಟೊಮೊಬೈಲ್ ಎಂಜಿನಿಯರಿಂಗ್- ಜೊಗಾನಂದ ಬೊರಾಹ್ (ಶೇ 79.59- ಜಿಎನ್‌ಡಿ, ಬೀದರ್); ಬಯೊ ಮೆಡಿಕಲ್ ಎಂಜಿನಿಯರಿಂಗ್- ಗ್ಲಾರಿ ಪ್ಲಾಸಿದ್ ಫರ್ನಾಂಡಿಸ್ (ಶೇ 85.28- ಬಿಐಇಟಿ, ದಾವಣಗೆರೆ); ಬಯೊ ಟೆಕ್ನಾಲಜಿ- ಜಿ.ಜೆ.ನಿಷಾ (ಶೇ 86.52, ಡಿಎಸ್‌ಸಿಇ, ಬೆಂಗಳೂರು); ಕೆಮಿಕಲ್ ಎಂಜಿನಿಯರಿಂಗ್- ಮೌಸಾಮಿ ನಾಥ್ (ಶೇ 84.83, ಬಿಐಇಟಿ,ದಾವಣಗೆರೆ); ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್- ಸಿ.ಎಸ್.ಉಮೇಶ (ಶೇ 88.84, ಬಿಜಿಎಸ್‌ಟಿ); ಸಿವಿಲ್ ಎಂಜಿನಿಯರಿಂಗ್- ಶಂತನು ಚಕ್ರವರ್ತಿ (ಶೇ 86.49, ಎಂ ವಿಜೆ, ಬೆಂಗಳೂರು); ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್: ಪಿ.ಫಾಲ್ಗುಣ (ಶೇ 88.49, ಆರ್.ಎನ್. ಎಸ್. ಇನ್‌ಸ್ಟಿಟ್ಯೂಟ್, ಬೆಂಗಳೂರು); 

ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್: ಅಭಿನವ್ ವಿ. ರಾವ್ (ಶೇ 86.87, ಬಿಐಟಿ, ಬೆಂಗಳೂರು); ಪರಿಸರ ಎಂಜಿನಿಯರಿಂಗ್: ವಿ.ಮನೋಜ್ (ಶೇ 86.38, ಎಐಟಿ, ಚಿಕ್ಕಮಗಳೂರು); ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್: ಅನುರಾಧಾ ಮಹಾದೇವನ್ (ಶೇ 86.38, ಎಸ್.ಎಂ.ವಿ.ಐಟಿ, ಬೆಂಗಳೂರು); ಇಂಡಸ್ಟ್ರಿಯಲ್ ಆ್ಯಂಡ್ ಪ್ರೊಡಕ್ಷನ್ ಎಂಜಿನಿಯರಿಂಗ್: ರೋಷನ್ ತಾನಾಜಿ ಪಾಸ್ತೆ (ಶೇ 85.25, ಜಿಐಟಿ, ಬೆಳಗಾವಿ); ಇನ್‌ಫಾರ್ಮೇಶನ್ ಸೈನ್ಸ್: ಅಂಕಿತಾ ಅಗರವಾಲ್ (ಶೇ 83.94, ಆರ್‌ಎನ್‌ಎಸ್ ಇನ್‌ಸ್ಟಿಟ್ಯೂಟ್, ಬೆಂಗಳೂರು); ಇನ್‌ಸ್ಟ್ರುಮೆಂಟೇಷನ್ ಟೆಕ್ನಾಲಜಿ- ಆಶ್ರಿತ್ ತ್ರಯಂಬಕ (ಶೇ 83.42, ಜೆಎಸ್‌ಎಸ್‌ಎಟಿಇ, ಬೆಂಗಳೂರು); ಮೆಕ್ಯಾನಿಕಲ್

ಎಂಜಿನಿಯರಿಂಗ್: ಪ್ರದೀಪ ವೈದ್ಯನಾಥ್ ಬಿರಾದಾರ (ಶೇ. 86.52, ಬಿಐಟಿ, ಬೆಂಗಳೂರು); ಮೈನಿಂಗ್ ಎಂಜಿನಿಯರಿಂಗ್: ಚಂದ್ರವರ್ಧನ ಮೊದುಪಾ (ಶೇ 79.42, ಜಿವಿಐಟಿ, ಕೆಜಿಎಫ್); ಮೆಡಿಕಲ್ ಎಲೆಕ್ಟ್ರಾನಿಕ್ಸ್: ರತ್ನಮಂಜರಿ ದೇವಿ (ಶೇ 88.32, ಡಿಎಸ್‌ಸಿಇ, ಬೆಂಗಳೂರು); ಸಿಲ್ಕ್ ಟೆಕ್ನಾಲಜಿ- ಎಸ್.ಶ್ವೇತಾ (ಶೇ 73.88, ಸರ್ಕಾರಿ ಎಸ್‌ಕೆಎಸ್‌ಜೆಟಿ, ಬೆಂಗಳೂರು); ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್: ಎಂ.ಆರ್.ಹರ್ಷಿತಾ (ಶೇ 85.48, ಬಿಐಟಿ, ಬೆಂಗಳೂರು); ಟೆಕ್‌ಸ್ಟೈಲ್ ಟೆಕ್ನಾಲಜಿ- ಎನ್.ಸಹನಾ (ಶೇ 84.09, ಬಿಐಇಟಿ, ದಾವಣಗೆರೆ); ಬಿ.ಆರ್ಕ್: ಎಸ್.ಸಹನಾ (ಶೇ 79.26, ಬಿಎಂಎಸ್‌ಸಿಇ, ಬೆಂಗಳೂರು); ಎಂಬಿಎ: ದೀಕ್ಷಾ (ಶೇ 79.22, ಎಂಐಟಿಇ, ಮೂಡುಬಿದರೆ); ಎಂಬಿಎ (ಕ್ರೆಡಿಟ್ ಸಿಸ್ಟಮ್)- ವೀಣಾ ಉಸುಳಕರ (ಪಿ.ಜಿ. ಸ್ಟ್ರಡೀಸ್, ಬೆಳಗಾವಿ); ಎಂಸಿಎ- ಆರ್.ಶಿವಾನಂದ ಸಾಗರ  (ಶೇ 89, ಬಿಎಂಎಸ್‌ಸಿಇ, ಬೆಂಗಳೂರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT