ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಕಾರಿ ಅನಿಲ: ಸಂಕಷ್ಟದಲ್ಲಿ ಜನತೆ:ಕಾರ್ಖಾನೆ ಮುಚ್ಚಲು ಆದೇಶ

Last Updated 3 ಮೇ 2012, 6:00 IST
ಅಕ್ಷರ ಗಾತ್ರ

ಗೌರಿಬಿದನೂರು: ಪಟ್ಟಣದ 12 ಮತ್ತು 13ನೇ ವಾರ್ಡಿನಲ್ಲಿ ಸಣ್ಣ ಕಾರ್ಖಾನೆಯಿಂದ ವಿಷಕಾರಿ ಅನಿಲ ಹೊರಬರುತ್ತಿದೆ ಎಂದು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಮುಚ್ಚುವಂತೆ ಪುರಸಭೆ ಮುಖ್ಯಾಧಿಕಾರಿ ಖಾಜಾ ಮೊಹಿನುದ್ದೀನ್ ಆದೇಶಿಸಿದರು.

ವಿಷಕಾರಿ ಅನಿಲ ಹೊರಬರುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಖಾಜಾ ಮೊಹಿನುದ್ದೀನ್ ಮತ್ತು ಪರಿಸರ ಇಲಾಖೆ ಎಂಜಿನಿಯರ್ ಸೌಮ್ಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.`ಪರಿಸರ ನಿಯಂತ್ರಣ ಮಂಡಳಿಯಿಂದ ಯಾವುದೇ ಪರವಾನಗಿ ಪಡೆಯದೇ ಇಲ್ಲಿ ಕಾರ್ಖಾನೆ ನಡೆಸಲಾಗುತ್ತಿದೆ.
 
ವಿದ್ಯುತ್ ಉಪಕರಣಗಳನ್ನು ಇಲ್ಲಿ ತಯಾರಿಸಲಾಗುತ್ತಿದ್ದು, ಅಮೋನಿಯಂ ಕ್ಲೊರೈಡ್ ಮತ್ತು ಆಸಿಡ್ ಬಳಸಲಾಗುತ್ತಿದೆ. ರಾಸಾಯನಿಕ ಸಿಂಪಡನೆಗಳಿಂದ ವಾಯು ಮಾಲಿನ್ಯ ಹೆಚ್ಚುತ್ತಿದ್ದು, ತೊಂದರೆಯಾಗುತ್ತಿದೆ. ಇಲ್ಲಿನ ನಿವಾಸಿಗಳು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚರ್ಮ ಸಂಬಂಧಿತ ಕಾಯಿಲೆಗಳಿಂದಲೂ ಬಳಲುತ್ತಿದ್ದಾರೆ~ ಎಂದು ಸಾರ್ವಜನಿಕರು ದೂರಿದರು.

ಕಾರ್ಖಾನೆ ಗುತ್ತಿಗೆದಾರರ ವಿರುದ್ಧ ರಾಜ್ಯ ಪರಿಸರ ಮಾಲಿನ್ಯ ಇಲಾಖೆಗೆ ವರದಿ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಖಾಜಾ ಮೊಹಿನುದ್ದೀನ್ ತಿಳಿಸಿದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ಶಂಕರರೆಡ್ಡಿ, ಹರೀಶ್, ಕೃಷ್ಣ, ವೆಂಕಟೇಶ್, ಅಶ್ವತ್ಥನಾರಾಯಣ ಮತ್ತಿತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT