ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಯಕ್ಕೊಂದು ವಿ.ವಿ ಏಕೆ?

ಅಕ್ಷರ ಗಾತ್ರ

ಇತ್ತೀಚೆಗೆ ವಿಷಯಕ್ಕೊಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಪ್ರವೃತ್ತಿ ಜಾಸ್ತಿಯಾಗಿದೆ.ಈ ಮೊದಲು ತೋಟಗಾರಿಕೆ, ಪಶು, ಆರೋಗ್ಯ, ಶಿಕ್ಷಣ, ತಾಂತ್ರಿಕ ಶಿಕ್ಷಣ, ಸಂಗೀತ, ಕಾನೂನು, ಕನ್ನಡ ಮತ್ತು ಸಂಸ್ಕೃತ ವಿಶ್ವವಿದ್ಯಾನಿಲಯಗಳಿರಲಿಲ್ಲ.ವಿಶ್ವವಿದ್ಯಾನಿಲಯದ ಕಲ್ಪನೆಯನ್ನೇ ನಮ್ಮ ರಾಜಕಾರಣಿಗಳು ಹಾಗೂ ಶಿಕ್ಷಣ ತಜ್ಞರೆಂಬುವರು ಮರೆತಂತೆ ಕಾಣುತ್ತದೆ.

ವಿಶ್ವವಿದ್ಯಾನಿಲಯವೆಂದರೆ ವಿಶ್ವದ ಎಲ್ಲ ಜ್ಞಾನ ಶಾಖೆಗಳ ಅಧ್ಯಯನ ಕೇಂದ್ರ, ವಿಶ್ವದ ಎಲ್ಲ ಜ್ಞಾನ ಶಾಖೆಗಳೂ ಇತರ ಪರಿಧಿಗೆ ಬರುತ್ತವೆ. ಒಂದು ವಿಶ್ವವಿದ್ಯಾನಿಲಯದಲ್ಲಿ ಎಲ್ಲ ವಿಭಾಗಗಳೂ ಇರುತ್ತವೆ.

ಜಾನಪದ ವಿಶ್ವವಿದ್ಯಾನಿಲಯವೆಂದರೇನು? ಇದರ ವಿಷಯ ವ್ಯಾಪ್ತಿ ಏನು? ಇದೇ ಮುಂತಾದ ವಿಷಯಗಳ ಅರಿವಿಲ್ಲದೆ ಸ್ಥಾಪಿತವಾಗುವ `ಜಾನಪದ ವಿಶ್ವವಿದ್ಯಾನಿಲಯ~ದ ಆಶೆ ಅದು ಹೇಗೆ ಪೂರೈಸುತ್ತಾರೋ ಆ ದೇವರೇ ಬಲ್ಲ!

ಹೊಸ ವಿಶ್ವವಿದ್ಯಾನಿಲಯ ಸ್ಥಾಪಿಸುವದರಿಂದ ಬಹಳವೆಂದರೆ: ಒಬ್ಬ ಕುಲಪತಿ, ಕುಲಸಚಿವ, ಪ್ರಾಧ್ಯಾಪಕರು ಹಾಗೂ ಕೆಲವು ಶಿಕ್ಷಕರನ್ನು ಮತ್ತು ಒಂದು ಹೊಸ ಕ್ಯಾಂಪಸ್ಸು ಸೃಷ್ಟಿಸಬಹುದೇ ಹೊರತು, ಕೆಲವು ಹೊಸ ನೌಕರಿಗಳನ್ನು ಸೃಷ್ಟಿಸಬಹುದೇ ಹೊರತು ಮತ್ತೆ ಏನನ್ನೂ ಹೊಸದನ್ನು ಮಾಡಲು ಸಾಧ್ಯವಿಲ್ಲ.

ಕುಟ್ಟುವ, ಬೀಸುವ, ಹಂತಿಯ ಹಾಡುಗಳನ್ನು ಇನ್ನು ಸೃಷ್ಟಿಸಲು ಸಾಧ್ಯವಿಲ್ಲ. ಕುಟ್ಟುವ ಮಶಿನ್ ಬಂದಿದೆ. ಬೀಸುವ ಗಿರಣಿ ಬಂದಿವೆ, ಒಕ್ಕುವ ಮಶಿನ್ ಬಂದಿವೆ ಎತ್ತುಗಳ ಬದಲು ಈಗ ಟ್ರಾಕ್ಟರ್ ಬಂದಿವೆ.

ಜಾನಪದ ಎಲ್ಲಿ ಬೆಳೆಯುತ್ತಿದೆ? ಬಹಳವೆಂದರೆ ಈಗಿರುವ ವಿಶ್ವವಿದ್ಯಾನಿಲಯಗಳಲ್ಲಿಯೇ ಒಂದು ವಿಭಾಗವನ್ನು ಹೊಂದಬಹುದಾದ ಈ ವಿಷಯಕ್ಕೇಕೆ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯ?
 
ಬಹಳವೆಂದರೆ ಈ ಜಾನಪದ ಪರಿಕರಗಳನ್ನು ಒಂದು `ವಸ್ತು ಸಂಗ್ರಹಾಲಯ~ದಲ್ಲಿ ಜತನವಾಗಿಡಬಹುದಲ್ಲದೆ, ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸುವುದಲ್ಲ. ಈಗ ಹೊಸ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದಕ್ಕಿಂತ, ಇದ್ದ ವಿಶ್ವವಿದ್ಯಾನಿಲಯಗಳ ಗುಣಮಟ್ಟ ಹೆಚ್ಚಿಗೆ ಮಾಡಲಿ ಎಂದು ಆಶಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT