ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರ ದಲಿತ ಯೋಧರಿಗೆ ನಮನ

Last Updated 2 ಜನವರಿ 2012, 6:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಪೇಶ್ವೆಗಳ ವಿರುದ್ಧ ಭೀಮಾ ಕೋರೆಗಾಂವನಲ್ಲಿ ಹೋರಾಡಿದ ವೀರ ದಲಿತ ಯೋಧರಿಗೆ ಹೊಸ ವರ್ಷದಂದು ನಮನ ಸಲ್ಲಿಸುವುದರ ಜೊತೆಗೆ ಸ್ವಾಭಿಮಾನದ ದಿನವೆಂದು ಆಚರಿಸಲಾಗುತ್ತದೆ~ ಎಂದು ದಲಿತ ನಾಯಕ ಪಿತಾಂಬ್ರಪ್ಪ ಬಿಳಾರ ಹೇಳಿದರು.

ನಗರದ ಸ್ಟೇಷನ್ ರಸ್ತೆಯಲ್ಲಿಯ ಡಾ.ಅಂಬೇಡ್ಕರ್ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು. `ಪೇಶ್ವೆ ಆಡಳಿತದ ವಿರುದ್ಧ ಬಂಡೆದ್ದ ದಲಿತರು ಕೇವಲ 500ರಷ್ಟಿದ್ದರು. ಆದರೆ 30,000ರಷ್ಟಿದ್ದ ಪೇಶ್ವೆ ಸೈನಿಕರ ವಿರುದ್ಧ ಯುದ್ಧದಲ್ಲಿ ಹೋರಾಡಿ 1818ರ ಜನವರಿ 1ರಂದು ವೀರಮರಣ ಹೊಂದಿದರು. ಅವರ ನೆನಪಿಗಾಗಿ ಭೀಮಾ ಕೋರೆಗಾಂವನಲ್ಲಿ ಬ್ರಿಟಿಷರು ಸ್ತೂಪವನ್ನು ಸ್ಥಾಪಿಸಿದರು. ಸ್ತೂಪಕ್ಕೆ ಡಾ. ಅಂಬೇಡ್ಕರ್ ಅವರು ನಮನ ಸಲ್ಲಿಸುತ್ತಿದ್ದರು. ಸಮತಾ ಸೈನಿಕ ದಳವು ಸಹ ಪ್ರತಿ ವರ್ಷ ನಮನ ಸಲ್ಲಿಸುತ್ತಿದೆ~ ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ಸದಾನಂದ ತೇರದಾಳ, ಎಚ್. ಸೋಮಶೇಖರ, ಶ್ರೀಕಾಂತ ತಳಕೇರಿ, ಶಂಕರ ಅಜಿಮನಿ, ಕೃಷ್ಣ ಕಾಂಬಳೆ, ಎಂ. ಮುತ್ತು, ಮಹಾವೀರ ಕಲಾಲ, ಬಸವರಾಜ ಬಮ್ಮನಾಳ, ಪ್ರಕಾಶ ಬೆಂಗಳೂರು, ಎಸ್.ಡಿ. ಬಿಜಾಪುರ, ಶಂಕರ ಬೂದಪ್ಪನವರ, ಮಂಜು ದೇವದುರ್ಗ, ಮಲ್ಲಿಕಾರ್ಜುನ ಬಿಳಾರ, ಬಸವರಾಜ ಗದ್ದಡಕಿ, ಶಿವಮೂರ್ತಿ ಚಲವಾದಿ, ಸುರೇಶ ಪೋಳ, ಎಸ್.ಡಿ. ಪೂಜಾರಿ ಮೊದಲಾದವರು ಭಾಗವಹಿಸಿದ್ದರು.

ಸಮತಾ ಸೈನಿಕ ದಳದ ಜಿಲ್ಲಾ ಸಮಿತಿ ಹಾಗೂ ದಲಿತ ಸಂಘರ್ಷ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಟಾಕಿ ಹಾರಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು. ನಂತರ ಭೀಮಾ ಕೋರೆಗಾಂವದ ಸ್ತೂಪಕ್ಕೆ ನಮನ ಸಲ್ಲಿಸಲು ಪೂನಾಗೆ ರೈಲಿನ ಮೂಲಕ ಅನೇಕರು ತೆರಳಿದರು.

ಧಾರವಾಡದಲ್ಲೂ ನಮನ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ ವಾದ) ವತಿಯಿಂದ ಧಾರವಾಡದಲ್ಲಿಯ ಡಾ.ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ವೀರ ದಲಿತ ಯೋಧರ ವಿಜಯೋತ್ಸವ ಹಾಗೂ ನಮನವನ್ನು ಭಾನುವಾರ ಸಲ್ಲಿಸಲಾಯಿತು.

ನಾರಾಯಣ ಮಾದರ, ಕರಿಯಪ್ಪ ಮಾಳಗಿಮನಿ ಹಾಗೂ ಅಶೋಕ ಭಂಡಾರಿ ಮಾತನಾಡಿದರು. ಬಸವರಾಜ ರಾಮದುರ್ಗ, ಶಿವಾನಂದ ಹೊಂಗಲ, ಸಿಡ್ಲೆಪ್ಪ ಹೆಗಡೆ, ಕರಿಯಪ್ಪ ಮಾಳಗಿಮನಿ, ಶಬ್ಬೀರ ಅತ್ತಾರ, ರಮೇಶ ಮೇದಾರ, ಪರಶುರಾಮ ಬೆಳಗಾಂವ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT