ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಣ್ಣ ಮಡಿವಾಳರಿಗೆ ಸಾಹಿತಿಗಳ ಅಭಿನಂದನೆ

Last Updated 17 ಫೆಬ್ರುವರಿ 2012, 9:20 IST
ಅಕ್ಷರ ಗಾತ್ರ

ಹಾವೇರಿ: ಪ್ರಪ್ರಥಮ ಬಾರಿಗೆ ನೀಡಲಾದ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿಗೆ ಪಾತ್ರರಾದ ವೀರಣ್ಣ ಮಡಿವಾಳರ ಅವರಿಗೆ ಹಾವೇರಿ ಜಿಲ್ಲೆಯ ಸಾಹಿತಿಗಳು ಮತ್ತು ಕಲಾವಿದರು ಹರ್ಷ ವ್ಯಕ್ತಪಡಿಸಿ ಅಭಿನಂಧಿಸಿದ್ದಾರೆ.

ಸವಣೂರ ತಾಲ್ಲೂಕಿನ ಮೆಳ್ಳಾಗಟ್ಟಿ ಪ್ಲಾಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕಳೆದ ವರ್ಷ ಬೆಳಗಾವಿ ಜಿಲ್ಲೆಗೆ ವರ್ಗಾವಣೆಯಾದ ವೀರಣ್ಣ ಮಡಿವಾಳರ ಹಾವೇರಿ ಜಿಲ್ಲೆಯ ಸಾಂಸ್ಕೃತಿಕ ವಲಯದಲ್ಲಿ ಬೆಳೆದ ಪ್ರತಿಭಾವಂತ ಕವಿಯಾಗಿದ್ದಾರೆ.

`ನೆಲದ ಕರುಣೆಯ ದನಿ~ ಕವನ ಸಂಕಲನವನ್ನು ಪ್ರಕಟಿಸಿ ದಲಿತ ಬಂಡಾಯ ಕಾವ್ಯದ ನಂತರ ಹೊಸ ಅನುಭವ ಭಾಷಿಕೆಯನ್ನು ಪ್ರಕಟಿಸಿದ ಅವರ ಸಾಧನೆ ಅಮೋಘವಾದುದು ಎಂದು ಸಾಹಿತಿಗಳ ವಲಯ ಬಣ್ಣಿಸಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾರುತಿ ಶಿಡ್ಲಾಪುರ, ಚುಟುಕು ಸಾಹಿತ್ಯ ಪರಿಷತ್ತಿನ ಶ್ರೀಮತಿ ಸಂಕಮ್ಮ ಸಂಕಣ್ಣನವರ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತಗೌಡ ಗೊಲ್ಲರ, ಎಸ್. ಆರ್. ಹಿರೇಮಠ, ಮಕ್ಕಳ ಸಾಹಿತ್ಯ ವೇದಿಕೆಯ ಗಂಗಾಧರ ನಂದಿ, ರಾಜ್ಯ ಬಿ.ಜೆ.ವಿ.ಎಸ್. ಉಪಾಧ್ಯಕ್ಷ ರೇಣುಕಾ ಗುಡಿಮನಿ, ಜಿಲ್ಲಾ ಅಧ್ಯಕ್ಷ ಬಸವರಾಜಪ್ಪ ಅಭಿನಂದಿಸಿದ್ದಾರೆ.


ಹಿರಿ-ಕಿರಿ ಸಾಹಿತಿಗಳಾದ ಸತೀಶ ಕುಲಕರ್ಣಿ, ಡಾ.ಟಿ.ಎಂ. ಭಾಸ್ಕರ, ಪ್ರೊ. ಕೋರಗಲ ಲವೀರುಪಾಕ್ಷಪ್ಪ, ಬಿ.ಶ್ರೀನಿವಾಸ, ಡಾ. ಮುದೆನೂರ ನಿಂಗಪ್ಪ, ಪ್ರೊ. ಶ್ರೀಶೈಲ ಹುದ್ದಾರ, ಗಿರಿಜಾ ದುರ್ಗದಮಠ, ಮಾಲತೇಶ ಅಂಗೂರ, ರಾಜು ನದಾಫ, ಪರಿಮಳ ಜೈನ, ಉದಯ ನಾಸಿಕ, ರಾಜು ಪೇಟಕರ, ಕಲಾವಿದ ಟಿ. ಬಿ. ಸೊಲಬಕ್ಕನವರ, ಹಾವನೂರ ಪ್ರತಿಷ್ಠಾನದ ವಿರೂಪಾಕ್ಷ ಹಾವನೂರ, ವಾರಂಬಳ್ಳಿ ಪ್ರತಿಷ್ಠಾನದ ವಿಶ್ವನಾಥ ವಾರಂಬಳ್ಳಿ, ಯುವ ಸಾಹಿತ್ಯ ವೇದಿಕೆಯ ವಸಂತ ಕಡತಿ, ಕೃಷ್ಣಾ ಜವಳಿ, ಗುಡ್ಡಪ್ಪ ಚಟ್ಟಮ್ಮನವರ, ಜಿ. ಎಂ. ಕುಲಕರ್ಣಿ ಮುಂತಾದವರು ಅಬಿನಂಧಿಸಿದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್. ಬಿ. ಕೊಡ್ಲಿಯವರು ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ಬೇರೆ ಕಡೆಗೆ ಸೇವೆ ಸಲ್ಲಿಸುತ್ತಿರುವ ವೀರಣ್ಣವರ ಸಾಧನೆ ಅಭಿನಂದನಾರ್ಹ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT