ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಮಠ ನಿರ್ಲಕ್ಷಿಸಿಲ್ಲ: ಆಂಜನೇಯ

Last Updated 20 ಡಿಸೆಂಬರ್ 2013, 6:30 IST
ಅಕ್ಷರ ಗಾತ್ರ

ಕೂಡ್ಲಿಗಿ: ‘ಹಿಂದಿನ ಸರ್ಕಾರಗಳು ರೂಪಿಸಿದ ನೀತಿ, ನಿಯಮಗಳಂತೆ ಅನುದಾನವನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ.  ಯಾವುದೇ ವೀರಶೈವ ಮಠ ಮಾನ್ಯಗಳನ್ನು ನಿರ್ಲಕ್ಷಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.

ಅವರು ತಾಲ್ಲೂಕಿನ ಉಜ್ಜಿನಿ ಪೀಠದಲ್ಲಿ ಈಚೆಗೆ ಮರುಳ ಸಿದ್ಧೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಠ ಮಾನ್ಯಗಳಿಗೆ ಅನುದಾನ ನೀಡುವುದನ್ನು ಯಾವುದೇ ಹಂತ ದಲ್ಲೂ ಕೈಬಿಟ್ಟಿಲ್ಲ. ಆದರೂ ಈ ಬಗ್ಗೆ ವಿರೋಧಪಕ್ಷಗಳು ಅನಗತ್ಯ ಅಪಪ್ರಚಾರ ಮಾಡುತ್ತಿವೆ. ಈ ಸಲದ ಬಜೆಟ್‌ನಲ್ಲಿ ಯಾವ ಮಠಗಳಿಗೆ ತಾರ ತಮ್ಯ ಮಾಡದೆ ಅನುದಾನ ಹಂಚಿಕೆ ಮಾಡಲಾಗಿದೆ. ಧಾರ್ಮಿಕ ಸಂಸ್ಥೆಗಳಿಗೆ ನೀಡಲಾಗುವ ಅನುದಾನ ದುರುಪ ಯೋಗವಾಗದಂತೆ ಕೆಲ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಈ ಧೋರಣೆ ಬಿಟ್ಟರೆ ಅನುದಾನ ನಿಲುಗಡೆ ಧೋರಣೆ ಅನುಸರಿಸಿಲ್ಲ ಎಂದರು.

ಹಿಂದಿನ ಬಿಜೆಪಿ ಸರ್ಕಾರದ ಬಜೆಟ್‌ ನಲ್ಲಿ ಉಜ್ಜಿನಿ ಪೀಠದ ಅಭಿವೃದ್ಧಿಗೆ ₨ ೨ ಕೋಟಿ ಮೀಸಲಿರಿಸಿತ್ತು. ಈ ಅನುದಾನ ಬಳಕೆ ಪ್ರಕ್ರಿಯೆಗೆ ತಾಂತ್ರಿಕ ಮತ್ತು ಆಡಳಿತಾತ್ಮಕ ಅಡಚಣೆ ಕಂಡುಬಂದ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆ ಗೊಳ್ಳಲು ವಿಳಂಬವಾಗಿದೆ. ಇದನ್ನು ಹೊರತುಪಡಿಸಿ ಅನುದಾನವನ್ನು ಯಾವುದೇ ಹಂತದಲ್ಲಿ ವಾಪಾಸ್ ಪಡೆಯುವ ಪ್ರಮೇಯ ಇಲ್ಲ. ಉಜ್ಜಿನಿ ಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬಡ ಮತ್ತು ಹಿಂದುಳಿದ ವರ್ಗದವರ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಹಾಸ್ಟೆಲ್‌ನ್ನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.

ಉಜ್ಜಿನಿ ಪೀಠದ ಸಿದ್ಧಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಪೀಠವು ಅನ್ನ, ಅರಿವು, ಅಕ್ಷರಕ್ಕೆ ಅದ್ಯತೆ ನೀಡುವ ನಿಟ್ಟಿನಲ್ಲಿ ಶೈಕ್ಷಣಿಕ ಪ್ರಗತಿ ನೆಲೆಯಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಎಲ್ಲ ಸಮುದಾ ಯದವರ ಬದುಕು ಹಸನಾಗಬೇಕೆಂಬ ಆಶಯದಂತೆ ಪೀಠ ಮುನ್ನಡೆದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT