ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವರು ಸಂಘಟಿತರಾಗಲು ಸ್ವಾಮೀಜಿ ಸಲಹೆ

Last Updated 11 ಸೆಪ್ಟೆಂಬರ್ 2013, 7:13 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ವೀರಶೈವರು ಸಂಘಟಿತರಾಗದೇ ವಿಛಿದ್ರವಾಗಿ ಹೋದರೆ ನಾಶವಾಗುತ್ತೇವೆ. ಸದ್ಯ ಸರ್ಕಾರದಲ್ಲಿ 70 ಜನ ವೀರಶೈವ ಶಾಸಕರಿದ್ದರೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇದಕ್ಕೆ ನಮ್ಮವರೇ ಕಾರಣರಾಗಿದ್ದಾರೆ ಎಂದು ಜಾಲಹಳ್ಳಿಯ ಬೃಹನ್ಮಠದ ಜಯ ಶಾಂತಲಿಂಗೇಶ್ವರ ಸ್ವಾಮೀಜಿ ವಿಷಾದಿಸಿದರು.


ಅವರು ಸೋಮವಾರ ತಾಲ್ಲೂಕಿನ ಆಲೂರ ಗ್ರಾಮದಲ್ಲಿ ಕಲಬುರ್ಗಿ ಶರಣಬಸವೇಶ್ವರ ಪುರಾಣ ಮಹಾ ಮಂಗಲ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಶರಣರೂ ಸಂಸಾರಸ್ಥರೇ, ಆದರೂ ಅವರು ಸಂಸಾರವನ್ನು  ಮನಸ್ಸಿಗೆ ಹಚ್ಚಿಕೊಳ್ಳದೇ ಪಾರಮಾರ್ಥದತ್ತ ನಡೆದರು. ನಾವು ಗುಡಿ ಗುಂಡಾರ ಗಳಲ್ಲಿ ದೇವರನ್ನು ಹುಡುಕು ತ್ತಿದ್ದೇವೆ, ಆದರೆ ನಮ್ಮ ಅಂತರಾತ್ಮ ದಲ್ಲಿಯೇ ಇರುವ ಪರಮಾತ್ಮನನ್ನು ಗುರುತಿ ಸುತ್ತಿಲ್ಲ ಎಂದವರು ಹೇಳಿದರು.

ಸಾನಿಧ್ಯ ವಹಿಸಿದ್ದ ಕೂಡಲ ಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮಿ ಗಳು ಮಾತನಾಡಿ, ಬಸವಣ್ಣ ಕಾಯಕ ಮಾಡುವ ಜೀವಿಗಳನ್ನು ಗುರುತಿಸಿ ಅವರಿಗೆ ಸಮಾಜದಲ್ಲಿ ಗೌರವದ ಸ್ಥಾನ ನೀಡಿದ. ಮನೆಯೊಳಗಿದ್ದ ಸ್ತ್ರೀಯರಿಗೆ, ಶೋಷಿತರಿಗೆ ಧ್ವನಿಯಾದವರು ಬಸವಣ್ಣ ಎಂದರು.

ರಾಜ್ಯದ 80 ಲಕ್ಷ ಜನರ ಪ್ರತಿನಿಧಿ ಯಾಗಿ ಪಂಚಮಸಾಲಿ ಪೀಠ ಅವರಿಗೆ ಧ್ವನಿ ನೀಡುವ ಕೆಲಸ ಮಾಡುತ್ತಿದೆ.  ಬರುವ ಸೆ.19 ರಂದು ಬಸವ ಪಂಚಮಿ ಯನ್ನು ಕೂಡಲ ಸಂಗಮದಲ್ಲಿ ಆಚರಿ ಸಲಾಗುತ್ತಿದ್ದು, 100 ಕಾಯಕ ಸಮಾಜಗಳನ್ನು ಗೌರವಿಸಲಾಗುವುದು ಎಂದರು.
ವೇದಿಕೆಯಲ್ಲಿ ಪ್ರವಚನಕಾರರಾದ ಹಸ್ಮಕಲ್ಲನ ವೇ.ಮಲ್ಲಿಕಾರ್ಜುನಶಾಸ್ತ್ರಿ ಉಪಸ್ಥಿತರಿದ್ದು, ಪುರಾಣಕ್ಕೆ ಮಹಾ ಮಂಗಲ ಹೇಳಿದರು.

ಕಾರ್ಯಕ್ರಮದಲ್ಲಿ ಗಣ್ಯರಾದ ಶಂಕರಗೌಡ ಹಿರೇ ಗೌಡರ, ಬಿ.ಬಿ.ಪಾಟೀಲ, ಎಚ್.ಬಿ. ಹವಾಲ್ದಾರ, ಸಂಗಣ್ಣ ಹಿರೇಗೌಡರ, ಹಣಮಂತರಾಯ ಕಪನೂರ, ನಾನಾಗೌಡ ಪಾಟೀಲ, ರಾಘವೇಂದ್ರ ಜೋಶಿ, ಎನ್.ವಿ.ಗಾನೇಕರ ಸಿ.ಬಿ. ಬಿರಾದಾರ, ಎನ್.ಜೆ.ಜಗ್ಗಲ, ಕೆ.ಪಿ. ಬಿರಾದಾರ, ಸಂಗಣ್ಣ ಬೋಳಶೆಟ್ಟರ, ಸಂಗಪ್ಪ ಜಗ್ಗಲ, ಜಿ.ಎಸ್.ಬಿರಾದಾರ, ರುದ್ರಪ್ಪ ಕಪನೂರ, ಬಸವರಾಜ ಹಾದಿಮನಿ,  ಎಸ್.ಸಿ. ಚಿಕರಡ್ಡಿ, ಅವರನ್ನು ಸನ್ಮಾನಿಸಲಾಯಿತು.


ಇದಕ್ಕೂ ಮೊದಲು ಕಲಬುರ್ಗಿ ಶರಣ ಬಸವೇಶ್ವರ ಹಾಗೂ ಮಾರು ತೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಿತು. ನೂರಾರು ಮಹಿಳೆಯರು ಪೂರ್ಣ ಕುಂಭ ಹೊತ್ತು ಶರಣರ ವಚನ ಗಳನ್ನು ಹೇಳುತ್ತ ಮೆರವಣಿಗೆಯಲ್ಲಿ ನಡೆದರು. ಮಂಗಲೋತ್ಸವದಲ್ಲಿ ಗಣ್ಯರಾದ ವೇ. ಸಂಗಯ್ಯ ಗಣಾಚಾರಿ, ಎಸ್.ಐ.ಗೂಳಿ, ಮುತ್ತಿನಶೆಟ್ಟಿ ಗೂಳಿ, ಐ.ಎಸ್. ಬಿರಾದಾರ, ಪಾಲ್ಗೊಂಡಿದ್ದರು. ಮಲ್ಲಿಕಾರ್ಜುನ ಹಿರೇಗೌಡರ ಸ್ವಾಗತಿಸಿದರು. ಜಿ.ಎಚ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂಟಪ್ಪ ಎಸ್.ಗೂಳಿ ನಿರೂಪಿಸಿದರು. ಎಸ್.ಡಿ. ಕಪನೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT