ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಜೀವನ ರೂಪಿಸಿಕೊಳ್ಳಿ

Last Updated 3 ಫೆಬ್ರುವರಿ 2011, 7:10 IST
ಅಕ್ಷರ ಗಾತ್ರ

ರಾಯಬಾಗ: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಪೂರ್ಣ ಜ್ಞಾನ ಪಡೆದು ಮುಂದಿನ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಬೆಳಗಾವಿ ವಿಭಾಗದ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕಿ ಸಾಧನಾ ಪೋಟೆ ಹೇಳಿದ್ದಾರೆ.ಬುಧವಾರ ಇಲ್ಲಿಯ ಶ್ರೀ ರೇಣುಕಾ ಶುಗರ್ಸ್‌ನ ರಾಯಬಾಗ ಪಾಲಿಟೆಕ್ನಿಕ್‌ದಲ್ಲಿ ಕೊನೆಯ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯ ಹಾಗೂ ಡಿಪ್ಲೋಮಾ ನಂತರದ ಉದ್ಯೋಗಾವಕಾಶಗಳ ಬಗ್ಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ, ಯಶಸ್ಸಿಗಾಗಿ ಅಡ್ಡ ಹಾದಿ ಹಿಡಿಯದೆ ಜವಾಬ್ದಾರಿಯುತ ವಾಗಿ ಕಲಿಯುವ ಮನಸ್ಸು ಮಾಡಬೇಕು. ತಮ್ಮ ಮನಸ್ಸಿನಲ್ಲಿನ ಹುಚ್ಚುಕಲ್ಪನೆಗಳನ್ನು ಬಿಟ್ಟು  ಮುಂದೇನಾಗಬೇಕೆಂಬ ಗುರಿ ಇಟ್ಟುಕೊಂಡು ಆ ಗುರಿ ಮುಟ್ಟುವ ದಾರಿಯಲ್ಲಿ ಹೋಗುವಂತೆ ಹೇಳಿದರು.ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಡುವಂತೆ ಸಲಹೆ ನೀಡಿ ವೃತ್ತಿಕೌಶಲ್ಯ ಹಾಗೂ ಸಮಯದ ಪರಿಪಾಲನೆ ಬಗ್ಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಯಬಾಗ ಸಕ್ಕರೆ ಕಾರ್ಖಾನೆಯ ಜನರಲ್ ಮ್ಯಾನೇಜರ್  ಜ್ಞಾನೇಶ್ವರ ಸಾಳುಂಕೆ, ಶ್ರೀ ರೇಣುಕಾ ಶುಗರ್ ಇಂಡಸ್ಟ್ರೀಜ್ ಜಗತ್ತಿನಲ್ಲಿಯೇ ಅತಿ ದೊಡ್ಡದಾಗಿದೆ. ರಾಯಬಾಗ ಪಾಲಿಟೆಕ್ನಿಕ್‌ದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಒಳ್ಳೆಯ ಅವಕಾಶಗಳನ್ನು ಕಲ್ಪಿಸಿ ನೂತನ ವೃತ್ತಿ ತರಬೇತಿ ಕೋರ್ಸ್‌ಗಳನ್ನು ಪ್ರಾರಂಭಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಆಡಳಿತ ಜನರಲ್ ಮ್ಯಾನೇಜರ್ ಪ್ರಶಾಂತ ಬಡಾಳೆ ಮುಖ್ಯ ಅತಿಥಿಗಳಾಗಿದ್ದರು. ಪ್ರಾಚಾರ್ಯ ಡಾ.ಎಂ.ಎಸ್. ಮಗದುಮ್ ಉಪಸ್ಥಿತರಿದ್ದರು.ಶ್ರೀ ರೇಣುಕಾ ಶುಗರ್ಸ್ ಮಾಲೀಕೆ ವಿದ್ಯಾ ಮುರಕುಂಬಿಯವರಿಗೆ ವಿಜಾಪುರದ ಮಹಿಳಾ ವಿಶ್ವವಿದ್ಯಾಲಯ ನೀಡಿದ ಡಾಕ್ಟರೇಟ್ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.ದೀಪಕ ದತ್ತೆವಾಡಿ ಸ್ವಾಗತಿಸಿ, ನಿರೂಪಿಸಿದರು. ಎಸ್.ವಿ. ದೇಸಾಯಿ ಪರಿಚಯಿಸಿದರು. ಆರ್.ಎ. ರೇವಣಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT