ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಶಿಕ್ಷಣ ಶುಲ್ಕ: ವರದಿ ನಂತರ ನಿರ್ಧಾರ

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಶುಲ್ಕ ನಿಗದಿ ಮತ್ತು  ಮೇಲ್ವಿಚಾರಣಾ ಸಮಿತಿಗಳು ವರದಿ ನೀಡಿದ ನಂತ­ರವೇ ಮುಂದಿನ ಪ್ರಕ್ರಿಯೆ­ಗಳಿಗೆ ಚಾಲನೆ ನೀಡ­ಲಾಗು­ವುದು ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಸ್ಪಷ್ಟ­ಪಡಿಸಿದರು.

ಮಂಗಳವಾರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ಜನತಾದರ್ಶನ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಿತಿಗಳು ಇದುವರೆಗೆ ವರದಿ ನೀಡದಿದ್ದರೂ ಅನಗತ್ಯ ಗೊಂದಲ ಸೃಷ್ಟಿಸಲಾಗಿದೆ. ಕೇವಲ ಊಹಾಪೋಹಗಳ ಆಧಾರದ ಮೇಲೆ ಶುಲ್ಕ ಮತ್ತು ಪ್ರವೇಶಾತಿ ಕುರಿತು ಚರ್ಚಿಸಲಾಗುತ್ತಿದೆ. ಈ ಎರಡೂ ಸಮಿತಿಗಳಿಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿ ಸಲಾಗಿದೆ. ಈ ಸಮಿತಿಗಳಿಂದ ವರದಿ ಪಡೆದ ನಂತರ ಚರ್ಚೆ ನಡೆಸಿ ಕಾನೂನು ಪ್ರಕಾರ ಮುಂದಿನ ಕ್ರಮ ಜರುಗಿಸ ಲಾಗುವುದು. ಆದ್ದರಿಂದ ತಕ್ಷಣಕ್ಕೆ ಯಾವುದೇ ರೀತಿ ತೀರ್ಮಾನಕ್ಕೂ ಬರಬಾರದು ಎಂದು ತಿಳಿಸಿದರು.

ಇನ್ನೊಂದು ಸುದ್ದಿ
* ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾರಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT