ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಾಪ್ಯದಲ್ಲಿ ಪೋಷಕರನ್ನು ಸಲಹಿ

Last Updated 1 ಅಕ್ಟೋಬರ್ 2012, 7:55 IST
ಅಕ್ಷರ ಗಾತ್ರ

ಮಡಬೂರು(ನರಸಿಂಹರಾಜಪುರ): ವೃದ್ಧಾಶ್ರಮಗಳು ಭಾರತೀಯ ಸಂಸ್ಕೃತಿಯಲ್ಲ. ಯುವಜನಾಂಗ ತಮ್ಮನ್ನು ಸಾಕಿ ಸಲಹಿದ ಪೋಷಕರನ್ನು ವೃದ್ಧಾಪ್ಯದಲ್ಲಿ ಪ್ರೀತಿ ಯಿಂದ ನೋಡಿಕೊಂಡು ಪೋಷಿಸಿ ಎಂದು ವಿಧಾನ ಪರಿಷತ್ ಸದಸ್ಯ ಎಂ.ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕಿನ ಮಡಬೂರು ಗ್ರಾಮದಲ್ಲಿ ಭಾನುವಾರ ನಡೆದ ವೃದ್ಧರು ಮತ್ತು ಅನಾಥಮಕ್ಕಳ ಪಂಚವಟಿ ಸೇವಾ ಕೇಂದ್ರದ ಉದ್ಘಾಟನೆ ಅಂಗವಾಗಿ ನಡೆದ ಸಮಾರಂಭದಲ್ಲಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಸ್ತಾವಿಕ ಮಾತನಾಡಿದ ಪಂಚವಟಿ ಸೇವಾ ಕೇಂದ್ರದ ಅಧ್ಯಕ್ಷ ಡಿ.ಸಿ.ದಿವಾಕರ್, ಕೇಂದ್ರದಲ್ಲಿ ಅನಾಥಮಕ್ಕಳಿಗೆ ಆಶ್ರಯ ನೀಡುವುದರೊಂದಿಗೆ ಬಡಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪಿಸುವ ಕಾರ್ಯಮಾಡುವ ಗುರಿ ಹೊಂದಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ವೃದ್ಧಾಶ್ರಮಗಳಿಗೆ ಯಾರನ್ನು ಒತ್ತಾಯ ವಾಗಿ ಸೇರಿಸುವ ಕೆಲಸವಾಗಬಾರದು ಎಂದರು. ಸಂಸದ ಕೆ.ಜಯಪ್ರಕಾಶ್‌ಹೆಗ್ಡೆ ಮಾತನಾಡಿ, ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಬೆಳೆಸುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.

ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ವಿದ್ಯಾವಂತರು ಸ್ವಾರ್ಥಿಗಳಾಗುತ್ತಿರುವುದರಿಂದ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಹುಟ್ಟು ಮತ್ತು ಸಾವಿನ ನಡುವೆ ಉತ್ತಮ ಕಾರ್ಯ ಮಾಡುವತ್ತ ಗಮನಹರಿ ಸಬೇಕು. ಜೀವನದ ಅವಕಾಶಗಳನ್ನು ಬಳಸಿಕೊಂಡು ಸಾರ್ಥಕತೆ ಹೊಂದ ಬೇಕೆಂದರು.

ವಿಧಾನಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿ, ರಾಜಕೀಯ ನಾಯಕರಾಗುವುದು ಸುಲಭ. ಸಮಾಜ ಕ್ಕೊಸ್ಕರ ದುಡಿದು ನಾಯಕರಾಗುವುದು ಅಪರೂಪದ ಸಂಗತಿಯಾಗಿದೆ. ದುರ್ಬಲ ಮಕ್ಕಳಿಗೆ ಆಸರೆ ನೀಡುವ ಉದ್ದೇಶದಿಂದ ಸೇವಾ ಕೇಂದ್ರ ಸ್ಥಾಪಿಸಿರುವುದು ಶ್ಲಾಘನೀಯ ಕಾರ್ಯ ಎಂದರು.

ಬೆಂಗಳೂರಿನ ಬಿಎಂಆರ್‌ಡಿಎ ಜಂಟಿ ಆಯುಕ್ತ ಎಸ್.ಆರ್.ವೆಂಕಟೇಶ್,ರೋಟರಿ  ಅಧ್ಯಕ್ಷ ಎಚ್.ಟಿ. ಧನಂ ಜಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ನಿರ್ದೇಶಕ ಸುಕೇಶ್, ಎಸ್.ಎಸ್.ಶಾಂತ ಕುಮಾರ್, ನಂದನ್, ನವ್ಯ, ಸೋಮಣ್ಣ ಇದ್ದರು. ಇದೇ ಸಂದರ್ಭದಲ್ಲಿ ಕಟ್ಟಡದ ನಿರ್ಮಾಣಕ್ಕೆ ನೆರವು ನೀಡಿದ ದಾನಿಗಳನ್ನು ಅಭಿನಂದಿಸಲಾಯಿತು.    
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT