ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆನಿಲ್ಲಾಗೆ ಬೆಲೆ ಇದ್ದರೂ ಫಸಲೇ ಇಲ್ಲ

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಕೊಪ್ಪ: ಒಂದು ಕಾಲದಲ್ಲಿ ಮಲೆನಾಡಿನಲ್ಲಿ ಚಿನ್ನದ ಬೆಳೆ ಎಂದು ಹೆಸರು ಪಡೆದಿದ್ದ ವೆನಿಲ್ಲಾ ಬೆಳೆಗೆ ಈಗ ಧಾರಣೆ ಕೊಂಚ ಏರಿದ್ದರೂ ಫಸಲು ಇಲ್ಲದೆ ಬೆಳೆಗಾರರು ಪರಿತಪಿಸುತ್ತಿದ್ದಾರೆ.

ತಾಲ್ಲೂಕಿನಾದ್ಯಂತ ಹಸಿ ಬೀನ್ಸ್ ಕೊಯ್ಲು ಆರಂಭಗೊಂಡಿದೆ. ಈ ಬಾರಿ ಇಳುವರಿಯೇ ಇಲ್ಲ. ಕಳೆದ ವರ್ಷ ವೆನಿಲ್ಲಾ ಬೀನ್ಸ್ ಕೆ.ಜಿ.ಗೆ ರೂ 40ರಿಂದ 140ರವರೆಗೂ ಇದ್ದಿತು. ಈ ಬಾರಿ ಕೊಯ್ಲು ಸಂದರ್ಭದಲ್ಲೇ ದರ ಏರಿದೆ. ಪ್ರಥಮ ದರ್ಜೆ ವೆನಿಲ್ಲಾರೂ240, ದ್ವಿತೀಯ ದರ್ಜೆ ರೂ120 ಹಾಗೂ ತೃತೀಯ ದರ್ಜೆ ವೆನಿಲ್ಲಾ ರೂ 60ರವರೆಗೂ ಈಗ ಮಾರಾಟವಾಗುತ್ತಿದೆ.

10 ವರ್ಷ ಹಿಂದೆ ರೂ 3000!
ಹತ್ತು ವರ್ಷಗಳ ಹಿಂದೆ ವೆನಿಲ್ಲಾ ಹಸಿ ಬೀನ್ಸ್ ದರವೇರೂ3000ವನ್ನು ದಾಟಿ ಮುನ್ನಡೆದಾಗ ಉತ್ತೇಜಿತರಾದ ಬೆಳೆಗಾರರು ಸಾಲ ಮಾಡಿ ಭಾರಿ ಪ್ರಮಾಣದಲ್ಲಿ ವೆನಿಲ್ಲಾ ಬೆಳೆದಿದ್ದರು. ಆದರೆ ನಂತರದ ದಿನಗಳಲ್ಲಿ ದಿಢೀರ್ ಎಂದು ದರ ಪಾತಾಳಕ್ಕೆ ಇಳಿದಿತ್ತು. ಒಂದೇ ವರ್ಷದಲ್ಲಿ ಕೆ.ಜಿ. ವೆನಿಲ್ಲಾ ದರ ರೂ 50ಕ್ಕೆ ಇಳಿದಾಗ ಬೆಳೆಗಾರರು ಹತಾಶರಾದರು. ವೆನಿಲ್ಲಾ ಕೃಷಿ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡರು. ಹೂವಿನ ಪರಾಗಸ್ಪರ್ಶ ಮಾಡಿದ ಖರ್ಚೂ ಗಿಟ್ಟುವುದಿಲ್ಲ ಎಂದು ಹಲವು ರೈತರು ವೆನಿಲ್ಲಾ ಗಿಡ ಕಿತ್ತುಹಾಕಿದ್ದರು.

ಜಿಲ್ಲೆಯ ಕೆಲವೆಡೆ ಸೊರಗು ರೋಗದಿಂದ ಬಹಳಷ್ಟು ವೆನಿಲ್ಲಾ ಬಳ್ಳಿಗಳು ನಾಶವಾಗಿವೆ. ಉಳಿದಂತೆ ಕೆಲವೆಡೆ ವೆನಿಲ್ಲಾ ಕೃಷಿ ಮುಂದುವರಿಸಿರುವ ಬೆಳೆಗಾರರು, ಈಗ ಧಾರಣೆ ಏರಿಕೆಯಿಂದ ಹರ್ಷಿತರಾಗಿದ್ದಾರೆ. ಆದರೆ, ಹೆಚ್ಚು ಫಸಲು ಇಲ್ಲದೆ ಕೈಹಿಸುಕಿಕೊಳ್ಳುತ್ತಿದ್ದಾರೆ. ದಶಕದ ಹಿಂದೆ ತಾಲ್ಲೂಕಿನಲ್ಲಿ 200 ಟನ್ ಬೆಳೆಯುತ್ತಿದ್ದ ವೆನಿಲ್ಲಾ ಇಂದು ಒಂದು ಟನ್‌ನಷ್ಟು ಉತ್ಪಾದನೆಯೂ ಇಲ್ಲದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT