ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ತಾರತಮ್ಯ ಸರಿಪಡಿಸಲು ಆಗ್ರಹ

Last Updated 10 ಫೆಬ್ರುವರಿ 2011, 8:40 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕೇಂದ್ರ ಸರ್ಕಾರದ ನೌಕರರಿಗೆ ನೀಡುತ್ತಿರುವ ಮಾದರಿ ಯಂತೆ ರಾಜ್ಯ ಸರ್ಕಾರಿ ನೌಕರರಿಗೂ ಸವಲತ್ತು ಕಲ್ಪಿಸಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್. ರಾಚಪ್ಪ ಒತ್ತಾಯಿಸಿದರು. ನಗರದಲ್ಲಿ ಬುಧವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ನಡುವೆ ಅಗಾಧ ವ್ಯತ್ಯಾಸವಿದೆ. ಕೇಂದ್ರ ಸರ್ಕಾರ 6ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸಿದೆ. ದೇಶದ ಬಹುತೇಕ ರಾಜ್ಯ ಸರ್ಕಾರಗಳು ಕೇಂದ್ರದ ಮಾದರಿಯಡಿ ಅಲ್ಲಿನ ನೌಕರರಿಗೆ ಆರ್ಥಿಕ ಸವಲತ್ತು ಕಲ್ಪಿಸಿವೆ. ಇದೇ ಮಾದರಿ ರಾಜ್ಯದಲ್ಲಿಯೂ ಅನುಷ್ಠಾನಗೊಳ್ಳಬೇಕು ಎಂದು ಆಗ್ರಹಿಸಿದರು.

ನಗರ ಪರಿಹಾರ ಮತ್ತು ಮನೆ ಬಾಡಿಗೆ ಭತ್ಯೆ ಹೆಚ್ಚಿಸಬೇಕು. ರಾಜ್ಯ ಸರ್ಕಾ ರದ ಐದನೇ ವೇತನ ಆಯೋಗದ ಅಂತಿಮ ವರದಿಯಲ್ಲಿ ಕೇಂದ್ರದ ಮಾದರಿ ಯನ್ವಯ ರಾಜ್ಯ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ ಪರಿಷ್ಕ ರಣೆಗೆ ಶಿಫಾರಸು ಮಾಡಲಾಗಿದೆ. 2001ರ ಜನಗಣತಿ ಅನ್ವಯ ಕೇಂದ್ರ ಸರ್ಕಾರ ಭತ್ಯೆ ಪರಿಷ್ಕರಿಸಿದೆ. ಈ ಅನ್ವಯ ಭತ್ಯೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. 

ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಎಸ್.ಎಂ. ಮಹದೇವು, ಸಿ. ಸಿದ್ದರಾಜು, ಎಚ್.ವಿ. ನಾಗರಾಜು, ಎಸ್. ರಂಗಸ್ವಾಮಿ, ಚಂದ್ರಶೇಖರ ಹಾಜರಿದ್ದರು.ಕೊಳ್ಳೇಗಾಲ ವರದಿ: ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದ ವೇತನ ಮತ್ತು ಭತ್ಯೆಯನ್ನು ಯಥಾವತ್ತಾಗಿ ಪರಿಷ್ಕರಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಳ್ಳೇಗಾಲ ಶಾಖೆ ಅಧ್ಯಕ್ಷ ಶಿವಣ್ಣ ಒತ್ತಾಯಿಸಿದರು.

ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಬುಧವಾರ ನಡೆದ ಸರ್ಕಾರಿ ನೌಕರರ ಬಹಿರಂಗ ಸಭೆಯಲ್ಲಿ ಮಾತನಾಡಿ ಅವರು, ಸರ್ಕಾರಿ ನೌಕರರು ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು.ಹನೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಸ್ವಾಮಿ, ಕೊಳ್ಳೇಗಾಲ ವಲಯದ ಅಧ್ಯಕ್ಷ ವಾಸು, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೊರೆಸ್ವಾಮಿ, ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷ ನಂಜೇಗೌಡ, ಸಿರಸ್ತೇದಾರ್, ಸಿದ್ದಪ್ಪ ಸಭೆಯಲ್ಲಿ ಮಾತನಾಡಿದರು.

ನೌಕರರ ಸಂಘದ ವತಿಯಿಂದ ಉಪವಿಭಾಗಾಧಿಕಾರಿ ಎ.ಬಿ. ಬಸವರಾಜು ಹಾಗೂ ತಹಶೀಲ್ದಾರ್ ಡಾ ವೆಂಕಟೇಶ್‌ಮೂರ್ತಿ ಮೂಲಕ ಬೇಡಿಕೆಗಳ ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸಲು ಸಲ್ಲಿಸಲಾಯಿತು.ವಿವಿಧ ವೃಂದ ಸಂಘಗಳ ಪದಾಧಿಕಾರಿಗಳಾದ ಲೂರ್ದ್ ಸೆಲ್ವಕುಮ್, ಹೆಚ್.ಆನಂದರಾಜ, ಸಿದ್ದಮಾದಯ್ಯ, ಬಾಲಕೃಷ್ಣೇಗೌಡ, ನಂದಿಬಸವಣ್ಣ, ಎಸ್.ಕೆ. ರಮೇಶ್, ಎಂ. ಬಸವಣ್ಣ, ವೆಂಕಟೇಶ್, ಎಸ್. ಸಿದ್ದಪ್ಪ, ಜಿ. ಮಹಾದೇವಸ್ವಾಮಿ, ಕೆ.ಪಿ.ಶಿವಶಂಕರಪ್ಪ, ಎಸ. ಬಸವರಾಜು, ನಾಗರಾಜು, ಅಬ್ದುಲ್ ವಾಹಬ್, ಚಂದ್ರು, ಸಿದ್ದರಾಜು, ಜೆ. ಬಸವರಾಜು ಹಾಜರಿದ್ದರು.

ಯಳಂದೂರು ವರದಿ: 6ನೇ ವೇತನ ಆಯೋಗದ ವೇತನ ಹಾಗೂ ಭತ್ಯೆಯನ್ನು ಯಥಾವತ್ತಾಗಿ ಪರಿಷ್ಕರಿಸಬೇಕು ಎಂದು ತಾಲ್ಲೂಕು ನೌಕರರ ಸಂಘದ ವತಿಯಿಂದ ಬುಧವಾರ ಮನವಿ ಪತ್ರ ನೀಡಲಾಯಿತು.

ಸರ್ಕಾರ ನೌಕರರನ್ನು ಎಲ್ಲ ಕ್ಷೇತ್ರದಲ್ಲೂ ಬಳಸಿಕೊಳ್ಳುತ್ತಿದೆ. ಬೆಲೆ ಹೆಚ್ಚಾಗುತ್ತಿರುವ ಇಂದಿನ ಯುಗದಲ್ಲಿ ವೇತನ ಪರಿಷ್ಕರಣೆಗೆ ಮುಂದಾಗದಿರುವುದು ಖೇದಕರ ಸಂಗತಿಯಾಗಿದೆ. ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಶಿಕ್ಷಕ ಪಿ.ನಾಗೇಂದ್ರ ತಿಳಿಸಿದರು. ಮನವಿ ಪತ್ರವನ್ನು ನೌಕರ ಸಂಘದ ಅಧ್ಯಕ್ಷ ಎಸ್.ಪ್ರಮೋದ್ ತಹಶೀಲ್ದಾರ್ ಅವರಿಗೆ ಸಲ್ಲಿಸಿದರು. ಪ್ರೊಬೆಷನರಿ ಉಪವಿಭಾಗಾಧಿಕಾರಿ ಜಗದೀಶ್, ನೌಕರರ ಸಂಘದ  ಕಾರ್ಯದರ್ಶಿ ಎ.ಎಸ್.ಮಧುಶಂಕರ್, ಖಜಾಂಚಿ ಗೋವಿಂದರಾಜು, ವಿವಿಧ ಇಲಾಖೆಯ ಸರ್ಕಾರಿ ನೌಕರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT