ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಪರಿಷ್ಕರಣೆ: ಸಿಬ್ಬಂದಿ ನಿರೀಕ್ಷೆ

Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕಾರ್ಪೊರೇಟ್ ಕಂಪೆನಿಗಳ ಹಿರಿಯ ಉದ್ಯೋಗಿಗಳಿಗೆ ಸಿಹಿಸುದ್ದಿ. 2008ಕ್ಕಿಂತ ಮೊದಲು ಉದ್ಯೋಗಕ್ಕೆ ನೇಮಕಗೊಂಡವರು ಈ ವರ್ಷ ವೇತನದಲ್ಲಿ ಶೇ 6ರರಿಂದ ಶೇ 15ರಷ್ಟು ಹೆಚ್ಚಳ ಪಡೆಯುವರು ಎಂದು ಉದ್ಯೋಗ ಮಾಹಿತಿ ತಾಣ `ಹೆಡ್ ಹ್ಯಾನ್ಕೊಸ್ ಡಾಟ್ ಕಾಂ' ಹೇಳಿದೆ.

ಕೆಲವು ಕಂಪೆನಿಗಳು ಈಗಾಗಲೇ ಪ್ರಸಕ್ತ ಸಾಲಿನ ವೇತನ ಪರಿಷ್ಕರಣೆ ಆರಂಭಿಸಿವೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 46ರಷ್ಟು ಸಿಬ್ಬಂದಿ ತಮ್ಮ ವೇತನ ಶೇ 6ರಿಂದ 15ರಷ್ಟು ಏರಿಕೆ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶೇ 19ರಷ್ಟು ಉದ್ಯೋಗಿಗಳು ಈ ಬಾರಿ ವೇತನ ಶೇ 15ಕ್ಕಿಂತಲೂ ಹೆಚ್ಚಬಹುದು ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ. ಶೇ 35ರಷ್ಟು ನೌಕರರು ತಮ್ಮ ಕಂಪೆನಿ ಏನಿದ್ದರೂ ಶೇ 5ರೊಳಗಷ್ಟೇ ವೇತನ ಪರಿಷ್ಕರಿಸಲಿದೆ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.

ವೇತನ ಪರಿಷ್ಕರಣೆ ನಂತರ ಕೆಲಸ ಬಿಟ್ಟು ಹೋಗುವವರ ಮತ್ತು ಕಂಪೆನಿ ಬದಲಿಸುವವರ ಸಂಖ್ಯೆ ಹೆಚ್ಚಿರುತ್ತದೆ.  ಅನೇಕರು ಹೊಸ ಉದ್ಯೋಗ, ಅವಕಾಶ ಹುಡುಕಿಕೊಳ್ಳುತ್ತಾರೆ. ಹಾಗಾಗಿ ಕಂಪೆನಿಗಳಿಗೆ ಮಾರ್ಚ್, ಏಪ್ರಿಲ್ ಸವಾಲಿನ ಸಮಯ ಎಂಬುದು `ಹೆಡ್ ಹ್ಯಾನ್ಕೊಸ್' ತಾಣದ `ಸಿಇಒ' ಉದಯ್ ಸೋಧಿ ಅವರ ವಿಶ್ಲೇಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT