ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಪರಿಷ್ಕರಣೆಗೆ ಒತ್ತಾಯ

Last Updated 10 ಫೆಬ್ರುವರಿ 2011, 7:30 IST
ಅಕ್ಷರ ಗಾತ್ರ

ಮಂಡ್ಯ: ಕೇಂದ್ರ ಸರ್ಕಾರಕ್ಕೆ ಸರಿ ಸಮಾನವಾಗಿ ವೇತನ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಬುಧವಾರ ಜಿಲ್ಲೆಯ ವಿವಿಧೆಡೆ ಪ್ರತಿಭಟನಾ ಮೆರವಣಿಗೆ ನಡೆಸಿದರು.ಕಾವೇರಿ ವನದಲ್ಲಿ ಇರುವ ವಿಶ್ವೇಶ್ವರಯ್ಯ ಪ್ರತಿಮೆಯ ಬಳಿಯಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ನೌಕರರು ಅಲ್ಲಿ ಬೇಡಿಕೆ ಕುರಿತ ಮನವಿಯನ್ನು ಅರ್ಪಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪುಟ್ಟಮಾದಯ್ಯ ಮನವಿ ಸ್ವೀಕರಿಸಿದರು.

ಕೇಂದ್ರ  ಸರ್ಕಾರದ ವೇತನ ಆಯೋಗದ ಶಿಫಾರಸುಗಳನ್ನು ಕೆಲ ರಾಜ್ಯಗಳು ಅಂಗೀಕರಿಸಿವೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರವೂ ಕೂಡಾ ಶಿಫಾರಸುಗಳನ್ನು ಅಂಗೀಕರಿಸಬೆಕು ಎಂದು ಆಗ್ರಹಪಡಿಸಿದರು.ಕೇಂದ್ರ ಸರ್ಕಾರಿ ನೌಕರರಿಗೆ ಇರುವಂತೆ ರಾಜ್ಯ ಸರ್ಕಾರಿ ನೌಕರರಿಗೂ 6ನೇ ವೇತನ ಆಯೋಗದ ವೇತನ ಮತ್ತು ಭತ್ಯೆಗಳನ್ನು ಜಾರಿಗೊಳಿಸಬೇಕು, ಮನೆ ಬಾಡಿಗೆ ಮತ್ತು ನಗರ ಪರಿಹಾರ ಭತ್ಯೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಅಪ್ಪಾಜಿ, ಕಾರ್ಯದರ್ಶಿ ಎಚ್.ಎಸ್. ಗಿರೀಶ್ ಮತ್ತಿತರ ಪದಾಧಿಕಾರಿಗಳು ಪ್ರತಿಭಟನೆ ಮುಂಚೂಣಿಯಲ್ಲಿದ್ದರು.

ಶ್ರೀರಂಗಪಟ್ಟಣ ವರದಿ: 6ನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಬುಧವಾರ ಪಟ್ಟಣದ ಮಿನಿ ವಿಧಾನಸೌಧದ ಎದುರು ಪ್ರತಿಭಟನಾ ಧರಣಿ ನಡೆಸಿದರು.ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಬಲ್ಲೇನಹಳ್ಳಿ ಶಂಕರ್ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಅರುಳ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಉಪಾಧ್ಯಕ್ಷ ಡಿ.ಎಸ್.ರಾಮಮಮೂರ್ತಿ, ಸೋಮಶೇಖರ್, ನಾಗೇಂದ್ರು, ಜಯರಾಂ, ಶ್ರಿನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್, ಮಂಜುಳಾ ರಮೇಶ್, ಶಿರಸ್ತೇದಾರ್ ಬಸವರಾಜು, ಪದ್ಮಮ್ಮ, ಸಹಾಯಕ ಕೃಷಿ ನಿರ್ದೇಶಕಿ ಎಚ್.ಎನ್. ಮಮತಾ, ನೇತ್ರಾವತಿ, ರಾಮಕೃಷ್ಣೇಗೌಡ, ಕೆಆರ್‌ಎಸ್ ಚಂದ್ರು, ಪಿಎಂಎಸ್ ಗೌಡ, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗು, ಶಿವಮ್ಮ, ಸ್ವಾಮಿಶೆಟ್ಟಿ, ಸಬ್ ರಿಜಿಸ್ಟ್ರಾರ್ ಹಂಸವೇಣಿ, ಡಾ.ಆನಂದ್, ಪ್ರಾಂಶುಪಾಲ ನಂಜುಂಡಸ್ವಾಮಿ, ಪ್ರಶಾಂತ್, ಆರ್‌ಐ ಸಿದ್ದಪ್ಪ, ಆಡಳಿತ ವೈದ್ಯಾಧಿಕಾರಿ ಡಾ.ಕೆ.ಬಿ.ಶಿವಕುಮಾರ್, ದೈಹಿಕ ಶಿಕ್ಷಣ ಪರಿವೀಕ್ಷಕ ವೀರೇಶ್ ಲಿಂಬಿಕಾಯಿ, ಶಿವರಾಜು ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಮದ್ದೂರು ವರದಿ: 6ನೇ ವೇತನ ಆಯೋಗ ರಚನೆ ಹಾಗೂ ಯಥಾವತ್ ಜಾರಿಗೆ ಆಗ್ರಹಿಸಿ ಪಟ್ಟಣದ ತಾಲ್ಲೂಕು ಕಚೇರಿ ಎದುರು ಸರ್ಕಾರಿ ನೌಕರರ ಸಂಘದ ಸದಸ್ಯರು ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಚಂದ್ರಶೇಖರಯ್ಯ ಅವರ ಮೂಲಕ ಮನವಿ ಸಲ್ಲಿಸಿದರು. ತಾಲ್ಲೂಕು ಕಚೇರಿ ಎದುರು ಸಂಘದ ಅಧ್ಯಕ್ಷ ಸಿ.ರಾಜು ಅವರ ನೇತೃತ್ವದಲ್ಲಿ ಬಹಿರಂಗ ಸಭೆ ನಡೆಸಿದ ನೌಕರರು, ಕೇಂದ್ರ ಸರ್ಕಾರದ ನೌಕರರಿಗೆ ನೀಡಲಾಗಿರುವ ಮನೆ ಬಾಡಿಗೆ, ನಗರ ಪರಿಹಾರ ಭತ್ಯೆಗಳನ್ನು ಯಥಾವತ್ ಮಂಜೂರು ಸೇರಿದಂತೆ ಸ್ಪಷ್ಟ ವರ್ಗಾವಣೆ ಕಾಯ್ದೆ ಹಾಗೂ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ನಗದು ರಹಿತ ಚಿಕಿತ್ಸೆ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ನಾರಾಯಣ್, ಗೌರವಾಧ್ಯಕ್ಷ ವಿ.ಎಂ. ಶಿವಕುಮಾರ್, ಕಾರ್ಯದರ್ಶಿ ಎ.ಸಿ. ರವಿಕುಮಾರ್, ಖಜಾಂಚಿ ಕೆ.ಎನ್.ಕರುಣ, ರಾಜ್ಯ ಪರಿಷತ್ ಸದಸ್ಯ ಎನ್.ಕೆ.ತಮ್ಮೇಗೌಡ, ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ಬಿ.ಎನ್.ಮರೀಗೌಡ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ರವೀಶ್, ಕಾರ್ಯದರ್ಶಿ ಶಿವರಾಂ, ಖಜಾಂಚಿ ಕೆಂಚೇಗೌಡ, ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಚಿದಾನಂದಮೂರ್ತಿ, ಆರೋಗ್ಯ ಇಲಾಖೆ ನೌಕರರ ಸಂಘದ ಕಾರ್ಯದರ್ಶಿ ಡಿ.ಎಚ್.ಪುಟ್ಟರಾಮು, ಇಂಜಿನಿಯರ್ ಸಂಘದ ಅಧ್ಯಕ್ಷ ಎಂ.ಸಂಪಂತ್‌ಕುಮಾರ್, ಅಂಗವಿಕಲರ ಸಂಘದ ಅಧ್ಯಕ್ಷ ಶ್ರೀನಿವಾಸ್, ಗೋಪಾಲ್, ರವೀಂದ್ರ, ಎಸ್.ಆರ್.ರವಿ, ಕೆ.ಎಂ.ಶ್ರೀನಿವಾಸಯ್ಯ, ಶಿವಮಾದಯ್ಯ, ಬಿ.ಜಿ.ನಾಗರಾಜು, ಅಂದಾನಿಗೌಡ, ಎಂ.ರಾಜೇಂದ್ರ, ಎಂ.ಸಿ.ಶಿವಾನಂದ, ಮಂಜುನಾಥ್, ದೇವರಾಜು, ಪೂರ್ಣಚಂದ್ರ ಸೇರಿದಂತೆ ವಿವಿಧ ಇಲಾಖೆಗಳ ನೂರಾರು ನೌಕರರು ಪಾಲ್ಗೊಂಡಿದ್ದರು.

ಪಾಂಡವಪುರ ವರದಿ: ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದ ವೇತನ ಹಾಗೂ ಭತ್ಯೆಗಳನ್ನು ಯಥವತ್ತಾಗಿ ಪರಿಷ್ಕರಿಸುವಂತೆ ಒತ್ತಾಯಿಸಿ ಸರ್ಕಾರಿ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು. ಪಟ್ಟಣದ 5 ದೀಪ ವೃತ್ತದಲ್ಲಿ ಮಧ್ಯಾಹ್ನ ಜಮಾಯಿಸಿದ ನೂರಾರು ಸರ್ಕಾರಿ ನೌಕರರು ಮೆರವಣಿಗೆ ಹೊರಟು ಘೋಷಣೆ ಕೂಗುತ್ತಾ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು.

ಪ್ರತಿಭಟನೆಯ ನೇತೃತ್ವವನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಹರೀಶ್ ಕಾರ್ಯದರ್ಶಿ ಕೆ. ಚಂದ್ರಶೇಖರ್, ಖಜಾಂಚಿ ಗಿರೀಶ್ ಮತ್ತು ರಾಜ್ಯ ಪರಿಷತ್ ಸದಸ್ಯ ರಮೇಶ್ ವಹಿಸಿದ್ದರು.ಕೃಷ್ಣರಾಜಪೇಟೆ ವರದಿ : ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಸರ್ಕಾರದ ನೌಕರರಿಗೆ ಸಮನಾದ ವೇತನ ಪರಿಷ್ಕರಣೆ ಆಗಬೇಕು ಎಂದು ಒತ್ತಾಯಿಸಿ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಬುಧವಾರ ಧರಣಿ ನಡೆಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಜಯರಾಮು ನೇತೃತ್ವದಲ್ಲಿ ನೌಕರರು ಪಟ್ಟಣದ ಮಿನಿ ವಿಧಾನಸೌಧದ ಎದುರು ಬುಧವಾರ ಬೆಳಿಗ್ಗೆ ಧರಣಿ ಆರಂಭಿಸಿದರು.
ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಶಿರಸ್ತೇದಾರ್ ಸುರೇಶ್ ಅವರಿಗೆ ಸಲ್ಲಿಸಿದರು.ಸಂಘದ ಗೌರವಾಧ್ಯಕ್ಷ ಹೆಚ್.ಈ. ಪುಟ್ಟವೀರೇಗೌಡ, ಉಪಾಧ್ಯಕ್ಷ ಮಲ್ಲಿಕಾರ್ಜುನ್, ರಾಜ್ಯ ಪರಿಷತ್ ಸದಸ್ಯ ಡಿ.ರಮೇಶ್, ಕಾರ್ಯದರ್ಶಿ ಎಸ್.ಈ. ಚನ್ನರಾಜು ಸೇರಿದಂತೆ ವಿವಿಧ ಇಲಾಖೆಗಳ ನೌಕರರ ಸಂಘಗಳ ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT