ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನದಲ್ಲಿ ತಾರತಮ್ಯ ನಿಲ್ಲಲಿ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿಂದ ಗೌರವಧನದ ಆಧಾರದ ಮೇಲೆ ಅತಿಥಿ ಉಪನ್ಯಾಸಕರನ್ನು ಪ್ರತಿ ವರ್ಷ ಸರ್ಕಾರ ನೇಮಕ ಮಾಡಿಕೊಳ್ಳುತ್ತಾ ಬರುತ್ತಿದೆ.

ಗೌರವ ಧನವನ್ನು ಎಂ.ಎ. ಪದವೀಧರರಿಗೆ ಮಾಸಿಕ 8,000ರೂ. ಹಾಗೂ ನೆಟ್ ಸೆಟ್ ಮತ್ತು ಪಿ.ಎಚ್‌ಡಿ ಆದವರಿಗೆ 10,000 ರೂ. ವೇತನ ಕೊಡುತ್ತಿರುವುದು ಸ್ವಾಗತಾರ್ಹ. ಆದರೆ ಯು.ಜಿ.ಸಿ. ನಿಯಮಾವಳಿಯಂತೆ 2009 ಜುಲೈ 10ರೋಳಗೆ ಎಂ.ಫಿಲ್. ಪದವಿ ಪಡೆ ದವರು ಕೂಡ ಪದವಿ ಕಾಲೇಜಿನ ಉಪನ್ಯಾಸಕ ರಾಗಲು ಅರ್ಹರು ಎಂದು ಯು.ಜಿ.ಸಿ ಪ್ರಕಟಿಸಿದೆ.

ಆದರೆ ಯು.ಜಿ.ಸಿ ನಿಯಮಾವಳಿಯನ್ನು ಗಾಳಿಗೆ ತೂರಿದ ಉನ್ನತ ಶಿಕ್ಷಣ ಇಲಾಖೆ 2009ರವರೆಗೆ ಎಂ.ಫಿಲ್. ಪದವಿ ಪಡೆದ ಪದ ವೀಧರರನ್ನು ಕಡೆಗಣಿಸಿ, ಅನ್ಯಾಯ ಮಾಡಿದೆ. ಎಂ.ಫಿಲ್ ಪದವಿ ಪಡೆದವರು ಎಂ.ಎ. ಪದ ವೀಧರರ ಜೊತೆಗೆ 8000ರೂ. ವೇತನವನ್ನು ಪದವೀಧರರಿಗೆ ತುಂಬಾ ಅನ್ಯಾಯ ಮಾಡಿದಂತಾಗಿದೆ.

ಆದ್ದರಿಂದ ಸರ್ಕಾರವು ಎಂ.ಫಿಲ್ ಪದವೀಧ ರರಿಗೆ ನೆಟ್ ಸೆಟ್ ಪರೀಕ್ಷೆಗಳಿಗೆ ಸಮಾನರೆಂದು ಪರಿಗಣಿಸಿ, 10,000 ರೂ. ವೇತನವನ್ನು ಕೊಡುವಂತೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT