ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನದಾರರ ಗೋಳು

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ರಾಜ್ಯ ಸರ್ಕಾರವು ಆರ್ಥಿಕವಾಗಿ ದುರ್ಬಲರಾದ  ವಿಧವೆಯರು, ಅಂಗವಿಕಲರು ಹಾಗೂ ವೃದ್ಧರಿಗೆ ಪ್ರತಿ ತಿಂಗಳು ವೇತನ ರೂಪದಲ್ಲಿ ಸ್ವಲ್ಪ ಹಣವನ್ನು ನೀಡುತ್ತಿರುವುದರಿಂದ ಅನೇಕರಿಗೆ ಅನುಕೂಲವಾಗಿದೆ.
 
ಆದರೆ ಕಳೆದ 3-4 ತಿಂಗಳಿಂದ ಈ ವೇತನಗಳನ್ನು ನಿಲ್ಲಿಸಲಾಗಿದೆ. ಅನರ್ಹರು ಈ ವೇತನ ಪಡೆಯುತ್ತಿರುವ ಪ್ರಕರಣಗಳು ಕೆಲವು ಜಿಲ್ಲೆಗಳಲ್ಲಿ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಎಲ್ಲರ ವೇತನ ತಡೆ ಹಿಡಿಯಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅನರ್ಹರಿಗೆ ವೇತನ ಮಂಜೂರು ಮಾಡುವಾಗಲೇ ಎಚ್ಚರವಾಗಿರಬೇಕಾದ ಸರ್ಕಾರ ಈಗ ಕಣ್ಣು ತೆರೆದಿದೆ. `ಎತ್ತಿಗೆ ಜ್ವರ ಬಂತೆಂದು ಎಲ್ಲೆಗೂ ಬರೆ ಎಳೆದರು~ ಎಂಬ ಗಾದೆ ಮಾತಿದೆ. ಅನರ್ಹರನ್ನು ಪತ್ತೆ ಹಚ್ಚುವುದಕ್ಕಾಗಿ ಅರ್ಹರಿಗೆ ವೇತನ ನಿಲ್ಲಿಸುವುದು ಸರಿಯೇ?

ಅನರ್ಹರಿಗೆ ವೇತನ ಕೊಡಲು ಶಿಫಾರಸು ಮಾಡಿದವರು ಮತ್ತು ಮಂಜೂರು ಮಾಡಿದವರು ಅದಕ್ಕೆ ಹೊಣೆ ಅಲ್ಲವೇ? ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ವೃದ್ಧರು ಮತ್ತು ವಿಧವೆಯರಿಗೆ ಸರ್ಕಾರ ಕೊಡುವ ಈ ವೇತನವೇ ಜೀವನಾಧಾರ.

ಔಷಧಿಗೂ ಅದೇ ಆಧಾರ. ಮುಖ್ಯಮಂತ್ರಿಯವರು ಮತ್ತು ಕಂದಾಯ ಸಚಿವರು ಈ ವರ್ಗದ  ವೇತನದಾರರ ಕಷ್ಟಗಳನ್ನು ಅರ್ಥ ಮಾಡಿಕೊಂಡು ತಕ್ಷಣವೇ ವೇತನ ಬಿಡುಗಡೆಗೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT