ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದನೆ ಮೀರಿ ಸಾಧನೆ ಮಾಡಿದವರು

Last Updated 19 ಜೂನ್ 2015, 15:22 IST
ಅಕ್ಷರ ಗಾತ್ರ


ನೂರು ವೇದನೆಗಳ ನಡುವೆ ಒಂದು ಸಾಧನೆಯಾಗಬೇಕು. ಆ ಸಾಧನೆ ದೇಶಕ್ಕೆ ಹೆಮ್ಮೆ ಮೂಡಿಸುವಂತಿರಬೇಕು. ಸಂಪ್ರ ದಾಯಸ್ಥ ಕುಟುಂಬದಲ್ಲಿ ಮನೆ ಬಿಟ್ಟು ಹೊರಬರುವುದೇ ಅತಿ ದೊಡ್ಡ ತಪ್ಪು ಎನ್ನುವ ವಾತಾವರಣ ಇಂದಿಗೂ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕೆಲವು ನಗರ ಪ್ರದೇಶಗಳಲ್ಲಿಯೂ ಇದೆ.

ತಾನು, ತನ್ನ ಮನೆ, ಕುಟುಂಬ, ಮಕ್ಕಳು, ಪತಿರಾಯ ಹೀಗೆ ಸಾಮಾಜಿಕ ಚೌಕಟ್ಟಿನ ಮಧ್ಯೆ ಜೀವನವನ್ನು ಕಳೆದುಬಿಡುವ ಕೋಟ್ಯಂತರ ಹೆಣ್ಣುಮಕ್ಕಳು ನಮ್ಮ ಮುಂದೆ ಇದ್ದಾರೆ. ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ ಪೋಷಣೆ ಮಾಡುವುದರ ಜೊತೆಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಸಾಧನೆ ಮಾಡುವ ಮನಸ್ಸು, ಮನಸ್ಥಿತಿ ಇರುವುದು ತೀರಾ ಅಪರೂಪ. ಇವೆಲ್ಲ ಸಂಕಷ್ಟಗಳನ್ನು ಮೀರಿ ಮಹಿಳೆ ಇತ್ತೀಚಿಗೆ ಎಲ್ಲ ರಂಗಗಳಲ್ಲಿಯೂ ಸಾಧನೆ ಮಾಡು ತ್ತಿದ್ದಾಳೆ. ಆ ಸಾಧನೆಗೆ ಹಗಲಿರುಳು ಎನ್ನದೇ ಶ್ರಮಪಟ್ಟಿರುತ್ತಾಳೆ. ಶ್ರಮಕ್ಕೆ ಕೆಲಸಲ ಪ್ರತಿಫಲ ಸಿಗುವುದಿಲ್ಲ.
 
ಸಿಕ್ಕರೂ ಅದು ನಾಲ್ಕು ಗೋಡೆಯ ಮಧ್ಯೆ ಮಾತ್ರ ಮೀಸಲಾಗಿರುತ್ತದೆ. ಆದರೆ ಈ ಸಲದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಸಾಧನೆ ಗಮನಾರ್ಹವಾದದ್ದು. ಅದರಲ್ಲೂ ವಿಶೇಷವಾಗಿ ಗೃಹಿಣಿಯರ ಸಾಧನೆ ಮೆಚ್ಚವಂತದ್ದು. ಮಹಿಳೆಯರು ಕಾಮನ್‌ವೆಲ್ತ್‌ನಲ್ಲಿ ಪದಕ ಗೆಲ್ಲುವ ಮೂಲಕ ಮನೆಯಲ್ಲಿನ ಒತ್ತಡ, ಕೌಟುಂಬಿಕ ಬಂಧನಗಳನ್ನು ಮೀರಿ ಸಾಧನೆ ಮಾಡಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಭಾವಿ ಅಥ್ಲೀಟ್‌ಗಳಿಗೂ ಮಾರ್ಗದರ್ಶಕ ರಾಗಿದ್ದಾರೆ.

ಅಪ್ಪಟ ಗ್ರಾಮೀಣ ಪ್ರತಿಭೆ ಕರ್ನಾಟಕದ ಆಶ್ವಿನಿ ಚಿದಾನಂದ ಅಕ್ಕುಂಜಿ, ಅಶ್ವಿನಿ ಪೊನ್ನಪ್ಪ ಅವರ ಸಾಧನೆ ರಾಜ್ಯದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟ ದಲ್ಲಿ ಮಿಂಚುವಂತೆ ಮಾಡಿದೆ. ವಿವಾಹಿತೆ ಯಾಗಿದ್ದರೂ ಮನೆಯ ಜವಬ್ದಾರಿಗಳ ನ್ನೆಲ್ಲಾ ನಿರ್ವಹಿಸಿ ರಾಜಸ್ತಾನದ ಕೃಷ್ಣ ಪೂನಿಯಾ ಚಿನ್ನದ ಪದಕ ಗೆದ್ದಿದ್ದಾರೆ. ಹೈದಾರಾಬಾದ್‌ನ ಸಾನಿಯಾ ಮಿರ್ಜಾ ಕೂಡಾ ಬೆಳ್ಳಿ ಪದಕವನ್ನು ತಮ್ಮ ಮುಡಿಗೇರಿ ಸಿಕೊಂಡಿದ್ದಾರೆ.ಗೃಹಿಣಿಯಾಗಿದ್ದರೂ ತಮ್ಮ ವೈಯಕ್ತಿಕ ಬದುಕಿನಲ್ಲಿ ಸಾಧನೆ ತೋರಿ ಇವರು ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಆಸ್ಟ್ರೇಲಿಯಾದ ಜರೆಡ್ ಟ್ಯಾಲೆಂಟ್ ಮತ್ತು ಕ್ಲ್ಯಾರಿ ಟ್ಯಾಲೆಂಟ್ ದಂಪತಿ 20 ಕಿ. ಮೀ. ನಡಿಗೆ ಸ್ಪರ್ಧೆಯಲ್ಲಿ ಚಿನ್ನ ಮತ್ತು ರಜತ ಪದಕವನ್ನು ಪಡೆದಿರುವುದು ದಂಪತಿ ಪರಸ್ಪರ ಸಹಕಾರದಿಂದ ಜೀವನ ಸಾಗಿಸಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ.

ಈ ಸಲದ ಕ್ರೀಡಾಕೂಟದಲ್ಲಿ ಭಾರತ ಮಹಿಳೆಯರು ಮಾಡಿದ ಸಾಧನೆ ದೇಶದ ಯುವತಿಯರಿಗೆ ಆದರ್ಶವಾಗಲಿ. ಮುಂಬರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಮಹಿಳೆಯರು ದೇಶಕ್ಕೆ ಹೆಚ್ಚು ಪದಕ ತಂದು ಕೊಡಲಿ. ಬಹುತೇಕ ಹೆಣ್ಣುಮಕ್ಕಳಲ್ಲಿ ಮನೆ ಮಾಡಿರುವ ‘ಕುಟುಂಬ ನಿರ್ವಹಣೆಯೊಂದೇ ನಮ್ಮ ಜವಾಬ್ದಾರಿ’ ಎನ್ನುವ ಮನೋಭಾವ ದೂರವಾಗಲಿ ಎನ್ನುವ ಹಾರೈಕೆಯೊಂದಿಗೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT