ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಾಗೆ ಹೆಣ್ಣು ಮಗು

Last Updated 23 ಫೆಬ್ರುವರಿ 2011, 16:30 IST
ಅಕ್ಷರ ಗಾತ್ರ

ಆನೇಕಲ್:  ಕೆಲ ತಿಂಗಳುಗಳಿಂದ ಪ್ರಾಣಿಗಳ ಸರಣಿ ಸಾವಿನಿಂದ ಸೂತಕದ ಕಳೆಯಿಂದ ಕೂಡಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಬುಧವಾರ ‘ಸಂತಾನಾಭಿವೃದ್ಧಿ  ಸಂಭ್ರಮ ! 

ಜೈವಿಕ ಉದ್ಯಾನದ ಹನ್ನೆರಡು ವರ್ಷದ ವೇದಾ ಎಂಬ ಆನೆ ಮಂಗಳವಾರ ರಾತ್ರಿ ಮುದ್ದಾದ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದ್ದೇ ಈ ಸಂಭ್ರಮಕ್ಕೆ ಕಾರಣ. ಮರಿ ಆನೆ 40 ಕೆ.ಜಿ ತೂಕವಿದೆ. ತಾಯಿ, ಮಗು ಆರೋಗ್ಯವಾಗಿವೆ. ಅಮ್ಮನ ಬಾಲ ಹಿಡಿದು ಉದ್ಯಾನದ ತುಂಬಾ ಓಡಾಡುತ್ತಿರುವ ಆನೆ ಮರಿಯನ್ನು ನೋಡುವುದೇ ಒಂದು ಸಂಭ್ರಮ.

ಉದ್ಯಾನದ ಸಂಭ್ರಮಕ್ಕೆ ಕಾರಣಳಾದ ವೇದಾಳಿಗೆ ಅವಲಕ್ಕಿ, ಬ್ರೆಡ್, ತೆಂಗಿನಕಾಯಿ ಹಾಗೂ ವಿಸ್ಕಿ ನೀಡಿ ಸಿಬ್ಬಂದಿ ಬಾಣಂತಿ ಆರೈಕೆ ಮಾಡುತ್ತಿದ್ದಾರೆ. ಬಿಸಿ ನೀರಿನ ಸ್ನಾನ ಮಾಡಿಸುವ ಮೂಲಕ ತಾಯಿ ಹಾಗೂ ಮರಿಯ ಉಪಚಾರ ಮಾಡುತ್ತಿದ್ದಾರೆ.ಉದ್ಯಾನದ ಕಾವಡಿಗಳು ಅತ್ಯಂತ ಜತನದಿಂದ ತಾಯಿ ಮರಿಯ ಆರೈಕೆ ಮಾಡುತ್ತಿದ್ದಾರೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಮಿಲ್ಲೋ ಟ್ಯಾಗೋ ತಿಳಿಸಿದರು.

ಈ ಆನೆ ಮರಿಗೆ ಸೂಕ್ತ ಹೆಸರನ್ನು ಪ್ರಾಣಿ ಪ್ರಿಯರು ಮತ್ತು ಜನರು ಸೂಚಿಸಬಹುದಾಗಿದೆ. ಉತ್ತಮ ಹೆಸರು ಸೂಚಿಸಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು’ ಎಂದು ಅವರು ಮನವಿ ಮಾಡಿದ್ದಾರೆ.. ಸದ್ಯ ಗಾಯತ್ರಿ, ವನಿತಾ, ನಿಸರ್ಗ, ವನಶ್ರೀ ಸೇರಿದಂತೆ ಒಟ್ಟು ಹನ್ನೊಂದು ಮಂದಿ ಗಜಪಡೆಯಿತ್ತು. ಆ ಕುಟುಂಬಕ್ಕೆ 12ನೇ ಸದಸ್ಯರ ಸೇರ್ಪಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT