ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಿಕೆ ಪಕ್ಕದಲ್ಲೇ ಸುಸಜ್ಜಿತ ಮಾಧ್ಯಮ ಕೇಂದ್ರ

Last Updated 10 ಮಾರ್ಚ್ 2011, 12:55 IST
ಅಕ್ಷರ ಗಾತ್ರ

ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನದ ವರದಿ ಮಾಡಲು ಮುಖ್ಯ ವೇದಿಕೆ ಪಕ್ಕದಲ್ಲಿರುವ ಫಿಸಿಯೋಥೆರಪಿ ಕಾಲೇಜಿನಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರ ತೆರೆಯಲಾಗಿದೆ.ಕೇಂದ್ರದಲ್ಲಿ 100 ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಾಧ್ಯಮ ಕೇಂದ್ರದ ಹೊರಗಡೆ ನಿಂತೇ ಮುಖ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.

ದೂರವಾಣಿ, ಫ್ಯಾಕ್ಸ್, ಇಂಟರನೆಟ್, ಝೆರಾಕ್ಸ್ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ. ಫೋಟೋಶಾಪ್, ಪೇಜ್‌ಮೇಕರ್ ಸೇರಿದಂತೆ ಹಲವಾರು ಸಾಫ್ಟ್‌ವೇರ್‌ಗಳನ್ನು ಎಲ್ಲ ಕಂಪ್ಯೂಟರ್‌ಗಳಿಗೆ ಅಳವಡಿಸಲಾಗಿದೆ.

ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಿಗೆ ಇಂತಿಷ್ಟು ಎಂದು ಕಂಪ್ಯೂಟರ್‌ಗಳನ್ನು ನಿಗದಿ ಪಡಿಸಲಾಗಿದ್ದು, ತಾಂತ್ರಿಕ ತೊಂದರೆ ಎದುರಾದರೆ ಸಹಾಯಕ್ಕೆ ನುರಿತ ಸಿಬ್ಬಂದಿಯನ್ನು ಒದಗಿಸಲಾಗಿದೆ.  ಮಾಧ್ಯಮ ಕೇಂದ್ರಕ್ಕೆ ಸತತ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗಿದ್ದು, ದಿನದ 24 ಗಂಟೆಯೂ ಮಾಧ್ಯಮ ಕೇಂದ್ರ ಕಾರ್ಯ ನಿರ್ವಹಿಸಲಿದೆ.

ಜನರು ಕಾತುರದಿಂದ ಕಾಯುತ್ತಿರುವ ಸಮ್ಮೇಳನದ ವರದಿಗಳನ್ನು ಕ್ಷಣ ಮಾತ್ರದಲ್ಲಿ ಬೆಳಗಾವಿಯಿಂದ ಆಯಾ ಪತ್ರಿಕೆಗಳ ಮುಖ್ಯ ಕಚೇರಿಗೆ ಕಳುಹಿಸುವ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ ಎನ್ನುತ್ತಾರೆ ವಾರ್ತಾ ಇಲಾಖೆಯ ಉಪನಿರ್ದೇಶಕ ಬಸವರಾಜ ಕಂಬಿ.

ಸಂಚಾರ ವ್ಯವಸ್ಥೆ; ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ಕಲಾವಿದರ ಸಂಚಾರ ವ್ಯವಸ್ಥೆಗಾಗಿ ವಿವಿಧ ಜಿಲ್ಲೆಗಳಿಂದ ಒಂದು ಸಾವಿರಕ್ಕೂ ಅಧಿಕ ವಾಹನಗಳು ನಗರಕ್ಕೆ ಆಗಮಿಸಿವೆ.
ಧಾರವಾಡ, ಬಾಗಲಕೋಟೆ, ವಿಜಾಪುರ, ಹಾವೇರಿ, ಗದಗ, ಉಡುಪಿ, ಬಳ್ಳಾರಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ವಾಹನಗಳನ್ನು ಸಮ್ಮೇಳನಕ್ಕಾಗಿ ತರಿಸಿಕೊಳ್ಳಲಾಗಿದೆ. ವಾಹನಗಳಿಗೆ ಪ್ರತ್ಯೇಕ ಸಂಖ್ಯೆ ನೀಡಲಾಗುತ್ತಿದ್ದು, ಇಂತಹ ಸಂಖ್ಯೆಯ ವಾಹನ ಇಂತಹ ಅತಿಥಿಗಳಿಗೆ ಎಂದು ನಿಗದಿಪಡಿಸಲಾಗಿದೆ.

ಆ ವಾಹನವು ಸಮ್ಮೇಳನ ಮುಗಿಯುವವರೆಗೂ ಅವರಿಗೆ ಮೀಸಲಾಗಿರಿಸಲಾಗುತ್ತದೆ. ಹೆಚ್ಚುವರಿಯಾಗಿ ವಾಹನಗಳನ್ನು ಕಾಯ್ದಿರಿಸಲಾಗಿದ್ದು, ಅವಶ್ಯ ಬಿದ್ದಲ್ಲಿ ಬಳಸಿಕೊಳ್ಳಲಾಗುತ್ತದೆ.
ಶಾಲಾ, ಕಾಲೇಜುಗಳ 2,00 ವಾಹನಗಳನ್ನು ಸಮ್ಮೇಳನಕ್ಕಾಗಿ ತೆಗೆದುಕೊಳ್ಳಲಾಗಿದೆ. ಆ ಕಾರಣಕ್ಕಾಗಿಯೇ ಸಮ್ಮೇಳನ ಮುಗಿಯುವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಪರ್ಯಾಯ ಸಂಚಾರ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೋರಿಕೊಂಡಿದ್ದಾರೆ.

ಶಾಲಾ ವಾಹನಗಳನ್ನು ಕಲಾವಿದರ ತಂಡಗಳ ಸಂಚಾರಕ್ಕೆ ಬಳಸಲಾಗುತ್ತದೆ. ಪ್ರತಿ ತಂಡಗಳಿಗೆ ವಾಹನಗಳನ್ನು ನೀಡಲಾಗುತ್ತಿದೆ. ಅವರ ವಸತಿ ಸ್ಥಳದಿಂದ ವೇದಿಕೆಗೆ ಹೋಗಲು ಬಳಸಬಹುದಾಗಿದೆ.ಇಷ್ಟೊಂದು ವಾಹನಗಳ ಸಂಚಾರದಿಂದ ನಗರದಲ್ಲಿ ಉಂಟಾಗಬಹುದಾದ ಸಂಚಾರ ಒತ್ತಡವನ್ನು ತಪ್ಪಿಸಲು ಪೊಲೀಸ್ ಇಲಾಖೆ ಕೆಲವೊಂದು ಮಾರ್ಗಗಳ ಬದಲಾವಣೆಗೆ ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT