ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಷದ ಹುಲಿ ನಾಟಕಕ್ಕೆ ಐದು ಬಹುಮಾನ

Last Updated 26 ಫೆಬ್ರುವರಿ 2012, 19:15 IST
ಅಕ್ಷರ ಗಾತ್ರ

ಬೆಂಗಳೂರು: ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಈಚೆಗೆ ನಡೆದ ಕಾಲೇಜು ನಾಟಕೋತ್ಸವದಲ್ಲಿ `ವೇಷದ ಹುಲಿ~ ನಾಟಕವು ಐದು ವಿಭಾಗಗಳಲ್ಲಿ ಬಹುಮಾನ ಪಡೆಯಿತು.

ನಾಟಕ, ನಟನೆ, ರಂಗಪರಿಕರ, ಸಂಗೀತ ಮತ್ತು ಕಥಾ ವಿಭಾಗದಲ್ಲಿ ಅತ್ಯುತ್ತಮ ನಾಟಕವೆಂಬ ಪ್ರಶಂಸೆಗೆ ಪಾತ್ರವಾಯಿತು.

ವಿಜಯನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕವನ್ನು ರಚಿಸಿದವರು ಎಂ.ಬೈರೇಗೌಡ. ರಾಜಗುರು ಹೊಸಕೋಟಿ ನಿರ್ದೇಶಿಸಿದ್ದರು.

ರೂ 17.91 ಲಕ್ಷ ನಿವ್ವಳ ಲಾಭ

ಹೊಸಕೋಟೆ:  ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು 2010-11ನೇ ಸಾಲಿನಲ್ಲಿ 17.91 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘ ಅಧ್ಯಕ್ಷ ಟಿ.ಸೊಣ್ಣಪ್ಪ ಹೇಳಿದರು.

ಭಾನುವಾರ ನಡೆದ ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಟ್ಟು 4,615 ಸದಸ್ಯರನ್ನು ಹೊಂದಿರುವ ಸಂಘವು 16.78 ಲಕ್ಷ ರೂಪಾಯಿ ಷೇರು ಬಂಡವಾಳ ಹೊಂದಿದೆ ಎಂದರು.

ರಾಜ್ಯದಲ್ಲೇ ಅತ್ಯುತ್ತಮ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಘವು ತನ್ನ ಒಂಬತ್ತು ಶಾಖೆಗಳ ಮೂಲಕ ನಿಯಂತ್ರಿತ ಆಹಾರ ಧಾನ್ಯಗಳ ವಹಿವಾಟು ನಡೆಸುತ್ತಿದೆ. ಅಲ್ಲದೆ, ಮುಖ್ಯ ಸಂಘದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕಿಂಗ್ ವಿಭಾಗ, ದಿನ ನಿತ್ಯದ ಅಗತ್ಯ ವಸ್ತುಗಳ ಮಾರಾಟ ಕೂಡ ಮಾಡುತ್ತಿದೆ. ಸದ್ಯದಲ್ಲೇ ವಿದ್ಯುತ್ ಉಪಕರಣಗಳ ಮಾರಾಟ ಕೂಡ ಪ್ರಾರಂಭಿಸಲು ಕಾರ್ಯಯೋಜನೆ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT