ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ತರ್ಕದಿಂದ ರುಜುವಾತಾದ ಬೌದ್ಧಧರ್ಮ

Last Updated 15 ಅಕ್ಟೋಬರ್ 2012, 6:30 IST
ಅಕ್ಷರ ಗಾತ್ರ

ಮೈಸೂರು:: ವೈಜ್ಞಾನಿಕವಾಗಿ ತರ್ಕಕ್ಕೆ ಒಳಗೊಂಡು ಸತ್ಯಾಂಶಗಳು ಬೆಳಕಿಗೆ ಬಂದಿರುವ ಧರ್ಮವೆಂದರೆ ಬೌದ್ಧಧರ್ಮ ಎಂದು ಚಿತ್ರಕಲಾವಿದ ಡಾ. ಸಿ. ಚಂದ್ರಶೇಖರ್ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ಭಾನು ವಾರ 56ನೇ ಧಮ್ಮ ದೀಕ್ಷಾ ದಿನಾಚ ರಣೆ ಅಂಗವಾಗಿ ವಿಶೇಷ ಉಪನ್ಯಾಸ ಹಾಗೂ ಡಾ. ಮ.ನ. ಜವರಯ್ಯ ಅವರ `ಅಂಬೇಡ್ಕರ್ ಚಿಂತನ ಸಾಹಿತ್ಯ ಸಮಗ್ರ ಅಧ್ಯಯನ~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ `ಸಮಕಾಲೀನ ಸಮಾಜಕ್ಕೆ ಬುದ್ಧ ತತ್ವ~ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

`ಬೌದ್ಧಧರ್ಮದಲ್ಲಿ ಬುದ್ಧ ಮಾತ್ರ ವಲ್ಲ, ಎಲ್ಲರೂ ಬುದ್ಧನಾಗುವ ಅಂದರೆ ಜ್ಞಾನಿಯಾಗುವ ಸ್ವಾತಂತ್ರ್ಯ ಇದೆ. ಬುದ್ಧ ತನ್ನ ಅನುಯಾಯಿಯ ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ರೀತಿಯೇ ಇದಕ್ಕೆ ಸಾಕ್ಷಿ. ಬೇರೆ ಧರ್ಮಗಳನ್ನೂ ತಿಳಿದುಕೊಂಡು, ಬೌದ್ಧಧರ್ಮವನ್ನೂ ಆಳವಾಗಿ ಇಳಿದು ನೋಡಿ ನಿರ್ಧರಿಸಿ ಎಂದಿದ್ದರು. ಬುದ್ಧ ಯಾರಿಗೂ ಒತ್ತಾಯಪೂರ್ವಕವಾಗಿ ಧರ್ಮವನ್ನು ಹೇರಲಿಲ್ಲ~ ಎಂದು ಹೇಳಿದರು.

`ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೌದ್ಧಧಮ್ಮ ಸ್ವೀಕರಿಸಿದ ನಂತರ ಸುಮಾರು ಹತ್ತು, ಹದಿನೈದು ವರ್ಷಳವರೆಗೆ ಇದ್ದು, ಅದರ ಬಗ್ಗೆ ಚಿಂತನ ಮಂಥನ ನಡೆದಿದ್ದರೆ ಧಮ್ಮದ ಕುರಿತು ವಿಚಾರಗಳು ಇನ್ನೂ ಗಟ್ಟಿಯಾ ಗುತ್ತಿದ್ದವು~ ಎಂದು ಅಭಿಪ್ರಾಯಪಟ್ಟರು.

`ಪಾಲಿ ಭಾಷೆಯು ಜಾಗತಿಕ ಭಾಷೆಯಾಗಿದ್ದರೆ ಬೌದ್ಧಧರ್ಮವು ಇಡೀ ವಿಶ್ವಮಾನ್ಯವಾಗುತ್ತಿತ್ತು. ಚರಿತ್ರೆಗಳಲ್ಲಿ ಹಲವು ತಪ್ಪುಗಳನ್ನು ನಮಗೆ ಹೇಳಿಕೊಂಡೇ ಬರಲಾಗಿದೆ. ಅದಕ್ಕಾಗಿ ಚರಿತ್ರೆಯನ್ನು ಪುನರ್‌ರಚಿಸುವ ಅಗತ್ಯ ಈಗ ಇದೆ~ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂತೇ ಸಂಘರಖ್ಖಿತ ವಹಿಸಿದ್ದರು. ಕೇಂದ್ರದ ನಿರ್ದೇಶಕ      ಡಾ. ಜೆ. ಸೋಮಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT