ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ನೀರು ಬಳಕೆ: ವಿಚಾರ ಸಂಕಿರಣ

Last Updated 14 ಅಕ್ಟೋಬರ್ 2011, 4:55 IST
ಅಕ್ಷರ ಗಾತ್ರ

ಕುರುಗೋಡು: ಇಲ್ಲಿಗೆ ಸಮೀಪದ ವದ್ದಟ್ಟಿ ಗ್ರಾಮದಲ್ಲಿ ಭಗೀರಥ ಸ್ವ ಸಹಾಯ ಸಂಘ ಧಾರವಾಡ, ಸ್ಥಳೀಯ ವಿವಿಧ ನೀರು ಬಳಕೆದಾರರ ಸಂಘ ಸಂಯುಕ್ತವಾಗಿ ಕೃಷಿಯಲ್ಲಿ ವೈಜ್ಞಾನಿಕ ನೀರು ಬಳಕೆ ವಿಚಾರ ಸಂಕಿರಣ ಇತ್ತೀಚೆಗೆ ನಡೆಯಿತು.

ಸಹಕಾರಿ ಸಂಘದ ಸಹಾಯಕ ನಿಬಂಧಕ ಎಸ್‌ಆರ್.ಗುಳಗಣ್ಣನವರ್ ಸಂಕಿರಣ ಉದ್ಘಾಟಿಸಿ, ಹೆಚ್ಚು ನೀರು ಬಳಕೆಯಿಂದ ಇಳುವರಿ ಹೆಚ್ಚುತ್ತದೆ ಎಂಬುದು ಕೇವಲ ಭ್ರಮೆ. ಕೃಷಿಯಲ್ಲಿ ನೀರನ್ನು ವೈಜ್ಞಾನಿಕವಾಗಿ ಬಳಕೆ ಬಗ್ಗೆ ರೈತರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಸಹಕಾರಿ ತಜ್ಞ ಎಂ.ಜಿ.ಪಾಟೀಲ್ ಮಾತನಾಡಿ, ರೈತರ ವೈಯುಕ್ತಿಕ ಬದುಕು ಮತ್ತು ಕೃಷಿ ಚಟುವಟಿಯಲ್ಲಿನ ಸಹಕಾರ ಮಹತ್ವ ವಿವಿರಿಸಿದರು. ಕೃಷಿ ತಜ್ಞ ಎಲ್.ಜಿ. ಪಾಟೀಲ್ ಆಧುನಿಕ ಕೃಷಿ ಬಗ್ಗೆ ವಿವರಿಸಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ವೈ. ನಾರಾಯಣರೆಡ್ಡಿ ಸಂಕಿರಣ ಅಧ್ಯಕ್ಷತೆ ವಹಿಸಿದ್ದರು.

ಚೌಡಕಿ ಗಾದಿಲಿಂಗಪ್ಪ, ಜಿ. ಯರ‌್ರಿ ಸ್ವಾಮಿ, ಕೆ. ಹನುಮಂತರೆಡ್ಡಿ ದಿವಾಕರ ಮತ್ತಿತರರು ಉಪಸ್ಥಿತರಿದ್ದರು.
ವಿಚಾರ ಸಂಕಿರಣದಲ್ಲಿ ಮದಿರೆ, ಬಾಹನಹಟ್ಟಿ, ಕೋಳೂರು ಗ್ರಾಮದ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT