ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಸಂಶೋಧನೆ: ಅರಬ್ ನೆರವು

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಂಯುಕ್ತ ಅರಬ್ ಎಮಿರೇಟಸ್‌ನ ಶೇಖ್ ಸೌದ್ ಅವರು ಇಲ್ಲಿನ ಜವಾಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್‌ಸಿಎಎಸ್‌ಆರ್), `ಮೆಟೀರಿಯಲ್ ಸೈನ್ಸ್~ ಕುರಿತು ನಡೆಸುತ್ತಿರುವ ಸಂಶೋಧನೆಗೆ 3.25 ದಶಲಕ್ಷ ಡಾಲರ್ (ಅಂದಾಜು 159 ಕೋಟಿ ರೂಪಾಯಿ) ಹಣಕಾಸಿನ ನೆರವು ನೀಡಲಿದ್ದಾರೆ.

ವಿಜ್ಞಾನಿ ಡಾ.ಸಿ.ಎನ್.ಆರ್. ರಾವ್ ನೇತೃತ್ವದಲ್ಲಿ ಈ ಸಂಶೋಧನೆಗಳು ನಡೆಯುತ್ತಿವೆ. ಆರು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಈ ನೆರವು ಕೇಂದ್ರಕ್ಕೆ ಲಭಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಆಧುನಿಕ ಉಪಕರಣಗಳು, ಸಂಶೋಧನೆಗೆ ಅಗತ್ಯವಿರುವ ರಾಸಾಯನಿಕಗಳು, ಯುವ ವಿಜ್ಞಾನಿಗಳು ಕೈಗೊಂಡಿರುವ ಸಂಶೋಧನೆಗೆ ಪ್ರೋತ್ಸಾಹ ನೀಡಲು ಈ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT