ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ಲೇಖಕರ ಸಮಾವೇಶ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಜರಾಜೇಶ್ವರಿ ವೈದ್ಯ ಕಾಲೇಜು ಮತ್ತು ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಜತೆಗೂಡಿ ಶುಕ್ರವಾರ ರಾಜ್ಯ ಮಟ್ಟದ ಕನ್ನಡ ವೈದ್ಯ ಲೇಖಕರ ಸಮಾವೇಶ ಆಯೋಜಿಸಿವೆ.

ಈ ಬಾರಿಯ ವಿಷಯ `ಕನ್ನಡ ವೈದ್ಯ ವಿಜ್ಞಾನ ಸಾಹಿತ್ಯದಲ್ಲಿ ಸೃಷ್ಟಿ ಮತ್ತು ದೃಷ್ಟಿ~.
ಇಲ್ಲಿ ಕನ್ನಡ ವೈದ್ಯ ವಿಜ್ಞಾನದ ಪ್ರಮುಖ ವಿದ್ವಾಂಸರ ಉಪನ್ಯಾಸ, ಉದಯೋನ್ಮುಖ ವೈದ್ಯ ಬರಹಗಾರರಿಗೆ ಲೇಖನ ಕಮ್ಮಟ, ವೈದ್ಯರಿಂದ ಹಾಸ್ಯೋಕ್ತಿ, ನಕ್ಕುನಲಿ, ಹಾಡುಪಾಡುಗಳು, ಆರೋಗ್ಯ ಸಂಸತ್ತಿನಲ್ಲಿ ತಜ್ಞ ವೈದ್ಯರಿಂದ ಪ್ರಶ್ನೋತ್ತರ ಇತ್ಯಾದಿಗಳು ಸಮಾವೇಶದ ವಿಶೇಷ.

ಬೆಳಿಗ್ಗೆ 9.30ಕ್ಕೆ ಉದ್ಘಾಟನೆ
: ಡಾ. ಸಿದ್ದಲಿಂಗಯ್ಯ. ಅಧ್ಯಕ್ಷತೆ: ರಾಜರಾಜೇಶ್ವರಿ  ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸಿ.ಷಣ್ಮುಗಂ. ಅತಿಥಿ: ಡಾ. ಡಿ.ಎಲ್. ರಾಮಚಂದ್ರ. ಕನ್ನಡ

ವೈದ್ಯಕೀಯ ಕೃತಿಗಳ ಲೋಕಾರ್ಪಣೆ: ಡಾ. ಎಚ್.ರಂಗಪ್ಪ, ಡಾ. ಉಷಾ ರಾಮಚಂದ್ರ.
ಬೆಳಿಗ್ಗೆ 11ಕ್ಕೆ ಡಾ. ಸಿ.ಆರ್.ಚಂದ್ರಶೇಖರ್ (ಕನ್ನಡ ವೈದ್ಯ ಸಾಹಿತ್ಯ: ಅಂದು-ಇಂದು-ಮುಂದು, ಅವಲೋಕನ), ಡಾ. ಬಿ.ಸತ್ಯಮೂರ್ತಿ (ಕನ್ನಡ ವೈದ್ಯ ಲೇಖಕರು ಎದುರಿಸುತ್ತಿರುವ ಸಮಸ್ಯೆ) ಅವರಿಂದ ಉಪನ್ಯಾಸ.

ಮಧ್ಯಾಹ್ನ 12ಕ್ಕೆ ಉದಯೋನ್ಮುಖ ವೈದ್ಯ ಬರಹಗಾರರಿಗೆ ಮಾರ್ಗದರ್ಶಿ ಕಮ್ಮಟ. ನಿರ್ವಹಣೆ: ಡಾ. ಆರ್.ಕೆ.ಸರೋಜ. ಕಮ್ಮಟ ಸಮೀಕ್ಷೆ: ಅಂಕಣಕಾರ ನಾಗೇಶ್ ಹೆಗಡೆ.
ನಂತರ ಹಿರಿಯ ನಾಗರಿಕರಿಗಾಗಿ ಆರೋಗ್ಯ ಸಂಪತ್ತು ಕಾರ್ಯಕ್ರಮ. ಅಧ್ಯಕ್ಷತೆ: ಡಾ. ಕೆ.ಎಂ.ಗೋವಿಂದರಾಜು.

ಇದರಲ್ಲಿ ಸಂಸ್ಥೆಯ 12 ತಜ್ಞ ವೈದ್ಯರು ಹಾಗೂ ಪ್ರಾಧ್ಯಾಪಕರಿಂದ ಜನ ಸಾಮಾನ್ಯರ ಆರೋಗ್ಯ ಸಂದೇಹಗಳಿಗೆ  ಉತ್ತರ. ಇದರಲ್ಲಿ ಹಿರಿಯ ನಾಗರಿಕರು ಕೂಡ ಪಾಲ್ಗೊಂಡು ವೈದ್ಯರ ಸಲಹೆ ಪಡೆಯಬಹುದು.

ಮಧ್ಯಾಹ್ನ 3ಕ್ಕೆ ವೈದ್ಯ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಂದ ಹಾಸ್ಯ ಲಾಸ್ಯ, ಹಾಡು ಪಾಡು, ಏಕಪಾತ್ರಾಭಿನಯ ಮತ್ತಿತರ ಮನರಂಜನೆ. ಸಂಜೆ 4ಕ್ಕೆ

ಸಮಾರೋಪ. ಉಪಸ್ಥಿತಿ:
ಡಾ.ಡಿ.ಎಲ್.ರಾಮಚಂದ್ರ, ಡಾ. ಎಚ್.ರಂಗಪ್ಪ, ಡಾ. ಕೆ.ಎಂ.ಗೋವಿಂದ ರಾಜ್.

ಸ್ಥಳ: ರಾಜರಾಜೇಶ್ವರಿ ವೈದ್ಯ ಕಾಲೇಜು, ಕಂಬೀಪುರ, ಮೈಸೂರು ರಸ್ತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT