ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ವೆಚ್ಚ: ಪರಿಹಾರದ ಚೆಕ್ ವಿತರಣೆ

Last Updated 4 ಅಕ್ಟೋಬರ್ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: `ಪದ್ಮನಾಭನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು  ಜಾರಿಗೊಳಿಸಲಾಗುತ್ತಿದೆ. ಹಿರಿಯರ ಸಲಹೆ, ಮಾರ್ಗದರ್ಶನ ಪಡೆದು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು~ ಎಂದು ಸಚಿವ ಆರ್. ಅಶೋಕ ಹೇಳಿದರು.

ಬನಶಂಕರಿ 2ನೇ ಹಂತದಲ್ಲಿರುವ ಶಾಸಕರ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬನಶಂಕರಿ ದೇವಸ್ಥಾನ ವಾರ್ಡ್ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚದ ಪರಿಹಾರ ಧನದ ಚೆಕ್ ವಿತರಿಸಿ ಅವರು ಮಾತನಾಡಿದರು.

`ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಿರಿಯರು ಸಲಹೆ ನೀಡಬೇಕು. ಲೋಪಗಳು ಉಂಟಾದಾಗ ಅದನ್ನು ತಿದ್ದಬೇಕು. ಅವರ ಮಾರ್ಗದರ್ಶನ ಪಡೆದು ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊ ಳ್ಳಲು ಪ್ರಯತ್ನಿಸುವುದಾಗಿ~ ತಿಳಿಸಿದರು.

`ಈ ಭಾಗದ ಸಾಹಿತ್ಯ ಪ್ರಿಯರು ಗ್ರಂಥಾಲಯಕ್ಕಾಗಿ ಜಯನಗರಕ್ಕೆ ಹೋಗಬೇಕಿತ್ತು. ಅವರ ಅನುಕೂಲಕ್ಕಾಗಿ ಶಾಸಕರ ಕಚೇರಿ ಸಮೀಪವೇ ಗ್ರಂಥಾಲಯ ನಿರ್ಮಿಸಲಾಗುವುದು. ಹಾಗೆಯೇ ಯುವಕರಿಗೆಂದು ವ್ಯಾಯಾಮ ಶಾಲೆ ಆರಂಭಿಸಲಾಗುವುದು~ ಎಂದು ಹೇಳಿದರು.

`ಕ್ಷೇತ್ರದ ಮೂರು ಕಡೆಗಳಲ್ಲಿ ವಿಶಾಲವಾದ ಉದ್ಯಾನ ನಿರ್ಮಿಸಲಾಗುತ್ತಿದೆ. ಅರ್ಹ ಬಡ ಜನರ ವೈದ್ಯಕೀಯ ವೆಚ್ಚಕ್ಕಾಗಿ 5,000 ರೂಪಾಯಿಯಿಂದ 70,000 ರೂಪಾಯಿವರೆಗೆ ಪರಿಹಾರ ಧನ ನೀಡಲಾಗುತ್ತಿದೆ~ ಎಂದರು.
ಸ್ಥಳೀಯ ಪಾಲಿಕೆ ಸದಸ್ಯ ಎ.ಎಚ್. ಬಸವರಾಜ್, `ವಾರ್ಡ್ ವ್ಯಾಪ್ತಿಯಲ್ಲಿರುವ ಬಡ ಜನರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಗುತ್ತಿದೆ. ಎಲ್ಲ ವರ್ಗದ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು~ ಎಂದರು.

ಪಾಲಿಕೆ ವತಿಯಿಂದ 45 ಮಂದಿಗೆ ಒಟ್ಟು 9.20 ಲಕ್ಷ ರೂಪಾಯಿ ವೈದ್ಯಕೀಯ ನೆರವು ನೀಡಲಾಯಿತು. ನಿಟ್ಟಿಂಗ್ ತರಬೇತಿ ಪಡೆದ 23 ಮಹಿಳೆಯರಿಗೆ ತಲಾ 600 ರೂಪಾಯಿಯಂತೆ ಒಟ್ಟು 13,800 ರೂಪಾಯಿ ಸಹಾಯ ಧನ ವಿತರಿಸಲಾಯಿತು. ಆರು ಮಂದಿ ಫಲಾನುಭವಿಗಳಿಗೆ ಆಟೊರಿಕ್ಷಾ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT