ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವೈಯಕ್ತಿಕ ದ್ವೇಷದಿಂದ ಈಶ್ವರಪ್ಪ ಮೇಲೆ ದೂರು'

Last Updated 26 ಡಿಸೆಂಬರ್ 2012, 6:07 IST
ಅಕ್ಷರ ಗಾತ್ರ

ಹಾಸನ:  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 89ನೇ ಹುಟ್ಟು ಹಬ್ಬದ ಅಂಗವಾಗಿ ಜಿಲ್ಲಾ ಬಿಜೆಪಿಯ ಜಿಲ್ಲಾ ಘಟಕದವರು ಮಂಗಳವಾರ ಸ್ಲೋಬೈಕ್ ರೇಸ್ ಸ್ಪರ್ಧೆ ಆಯೋಜಿಸಿದ್ದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್ ಸ್ಪರ್ಧೆಗೆ ಚಾಲನೆ ನೀಡಿದರು.

ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಭಾನುಪ್ರಕಾಶ್, `ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನೀಡಿರುವ ದೂರಿನ ಆಧಾರದಲ್ಲಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈಶ್ವರಪ್ಪ ನಿರಪರಾಧಿ ಎಂದು ಸಾಬೀತಾದರೆ ದೂರು ನೀಡಿರುವವರಿಗೂ ಕಾನೂನು ರೀತಿ ಶಿಕ್ಷೆಯಾಗಬೇಕು. ಈಶ್ವರಪ್ಪ ಅವರು ಶೀಘ್ರ ಆರೋಪ ಮುಕ್ತರಾಗುತ್ತಾರೆ ಎಂಬ ವಿಶ್ವಾಸವಿದೆ' ಎಂದರು.

ಬೈಕ್ ರೇಸ್ ಸ್ಪರ್ಧೆಯಲ್ಲಿ ಅನೇಕ ಯುವಕರು ಭಾಗವಹಿಸಿ ನಿಧಾನಗತಿ ಬೈಕ್ ರೇಸ್ ನಡೆಸಿದರು.
ಬಿ.ಜೆ.ಪಿ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣೇಗೌಡ, ಹುಡಾ ಅಧ್ಯಕ್ಷ ನವಿಲೆ ಅಣ್ಣಪ್ಪ, ಜಿ.ಪಂ. ಸದಸ್ಯ ಅಮಿತ್ ಶೆಟ್ಟಿ, ಗ್ರಾಮಾಂತರ ಘಟಕದ ಅಧ್ಯಕ್ಷ ಲೋಹಿತ್‌ಗೌಡ ಮುಂತಾದವರು ಹಾಜರಿದ್ದರು.

ಉಚಿತ ಕಾರ್ಯಾಗಾರ ಇಂದು
ಹಾಸನದ ಆದಿಚುಂಚನಗಿರಿ ಶಾಖಾಮಠದ ಬಿಜಿಎಸ್ ಅಧ್ಯಯನ ಕೇಂದ್ರದವರು ಗ್ರಾ.ಪಂ ಅಕೌಂಟ್ ಅಸಿಸ್ಟೆಂಟ್ ಹಾಗೂ ಎಕ್ಸೈಸ್ ಪೊಲೀಸ್ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗಾಗಿ ಉಚಿತ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ.

ಕಾರ್ಯಾಗಾರ ಬುಧವಾರ (ಡಿ.27) ಸಂಜೆ 5 ರಿಂದ ರಾತ್ರಿ 8ಗಂಟೆಯವರೆಗೆ ನಡೆಯುವುದು. ಆಸಕ್ತರು ಪಾಲ್ಗೊಂಡು ಕಾರ್ಯಾಗಾರದ ಲಾಭ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ದೂರವಾಣಿ 9738334784 / 9449852401 ಅಥವಾ 8050839482 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT