ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಮುಡಿ ಉತ್ಸವ: ಭದ್ರತೆ ಪರಿಶೀಲನೆ

Last Updated 21 ಫೆಬ್ರುವರಿ 2011, 8:35 IST
ಅಕ್ಷರ ಗಾತ್ರ

ಮೇಲುಕೋಟೆ: ಮಾ.15ರಂದು ನಡೆಯುವ ಪ್ರಸಿದ್ಧ ಚೆಲುವರಾಯಸ್ವಾಮಿಯ ವೈರಮುಡಿ ಉತ್ಸವಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಪೊಲೀಸ್ ಭದ್ರೆತೆ ನೀಡಲಾಗುತ್ತದೆ ಎಂದು ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೋಸ್ ತಿಳಿಸಿದರು.ವೈರಮುಡಿ ಉತ್ಸವ ಉಸ್ತುವಾರಿ ಹೊಂದಿರುವ ಅವರು ಮೇಲುಕೋಟೆಗೆ ಭಾನುವಾರ ಬೇಟಿ ನೀಡಿ ಭದ್ರತಾ ವ್ಯವಸ್ಥೆಗಳ ಪರಿಶೀಲಿಸಿ ನಡೆಸಿದರು.

‘ರಾಜಕೀಯ ಹಸ್ತಕ್ಷೇಪ ಇಲ್ಲದಂತೆ ಸಂಚಾರ ವ್ಯವಸ್ಥೆ ನಿರ್ವಹಿಸುವ ಸಲುವಾಗಿ ಮಳವಳ್ಳಿ ಹಾಗೂ ಮೈಸೂರಿನಿಂದ ಸಂಚಾರ ಪೊಲೀಸ್ ಪಡೆ ಕರೆಸಲಾಗುತ್ತದೆ.ವೈರಮುಡಿ ಉತ್ಸವಕ್ಕೆ ಕಳೆದ ಸಲಕ್ಕಿಂತ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ದೇವಾಲಯದ ಸಿಬ್ಬಂದಿಗಳಿಗೆ ಯಾವುದೇ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಲು ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ದೇವಾಲಯ ಪ್ರವೇಶ ದ್ವಾರದ ಮುಂದೆ ನಿಯೋಜಿಸಲಾಗುತ್ತದೆ.ವೈರಮುಡಿ ಉತ್ಸವ ಮೆರವಣಿಗೆ ಬಂದೋಬಸ್ತ್‌ಗೆ ಪ್ರತ್ಯೇಕ ಸಿಬ್ಬಂದಿ ಒದಗಿಸಲಾಗುತ್ತದೆ’ ಎಂದು  ತಿಳಿಸಿದರು.

ಪಾರ್ಕಿಂಗ್ ವ್ಯವಸ್ಥೆ: ಕಣಿವೆ, ಪ್ರವಾಸಿ ಬಂಗಲೆ, ಜಕ್ಕನಹಳ್ಳಿ ಕ್ರಾಸ್, ಬಸ್ ನಿಲ್ದಾಣದ ಬಳಿ ಬ್ಯಾರಕೇಡ್ ಅಳವಡಿಸಲಾಗುತ್ತದೆ. ಆಸ್ಪತ್ರೆ ಮುಂಭಾಗ, ಯದುಶೈಲಾ ಪ್ರೌಢಶಾಲಾ, ಗುರುಶನೇಶ್ಚರ ಪಾಲಿಟೆಕ್ನಿಕ್ ಮೈದಾನ ಹಾಗೂ ಖಾಸಗಿ ಜಮೀನುಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಐ.ಬಿ.ಮೈದಾನ, ಕೆಎಸ್‌ಆರ್‌ಟಿ. ಸಿ.ಬಸ್‌ಗಳಿಗೆ ಹೆಚ್ಚುವರಿ ನಿಲ್ದಾಣ ಮಾಡಲಾ ಗುತ್ತದೆ ಎಂದರು

ಕಲ್ಯಾಣಿ ಬಳಿ ಮಹಿಳೆಯರಿಗೆ ಮುಜುಗರ ಆಗುವುದನ್ನು ತಪ್ಪಿಸಲು ವ್ಯವಸ್ಥಿತ  ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಕಲ್ಯಾಣಿಯ ಬಳಿ ಮಾಂಸ ಬೇಯಿಸುವುದನ್ನು ತಡೆ ಗಟ್ಟಲು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗು ವುದು ಎಂದು ಅವರು ವಿವರಿಸಿದರು. ಪಾಂಡವಪುರ ಪ್ರಬಾರಿ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ, ಮೇಲುಕೋಟೆ ಪೊಲೀಸ್ ಠಾಣೆಯ ಎಸ್.ಐ.ಲಕ್ಷ್ಮೀನಾರಾಯಣ, ಅಹೋಬಲಮಠದ ವ್ಯವಸ್ಥಾಪಕ ಶಶಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT