ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಶಿಷ್ಟ್ಯ ಪೂರ್ಣ ಚಲನಚಿತ್ರೋತ್ಸವ

Last Updated 18 ಸೆಪ್ಟೆಂಬರ್ 2013, 8:30 IST
ಅಕ್ಷರ ಗಾತ್ರ

ಮೈಸೂರು:- ಕನ್ನಡ ನಾಡು ನುಡಿ ಬಿಂಬಿಸುವ, ಕನ್ನಡ ಚಲನಚಿತ್ರ ರಂಗದ ವಿಶಿಷ್ಟತೆ  ಸಾರುವ, ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಕನ್ನಡ ಚಲನಚಿತ್ರಗಳು, ಪ್ರಶಸ್ತಿ  ವಿಜೇತ ಚಿತ್ರಗಳು, ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದ್ದ ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ದಸರಾ ಚಲನಚಿತ್ರೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ಚಲನಚಿತ್ರ ಉಪಸಮಿತಿ ತೀರ್ಮಾನಿಸಿದೆ.

ಚಲನಚಿತ್ರೋತ್ಸವ ಉಪಸಮಿತಿ ಅಧ್ಯಕ್ಷೆ ಮೀನಾ ತೂಗುದೀಪ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ  ವಾರ್ತಾ ಭವನದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

  ಅ.5ರಿಂದ 12 ರವರೆಗೆ ಚಲನಚಿತ್ರೋತ್ಸವ ನಡೆಯಲಿದೆ. 5ರಂದು ಕಲಾಮಂದಿರದಲ್ಲಿ ಚಲನಚಿತ್ರೋತ್ಸವ ಉದ್ಘಾಟನೆ ನೆರವೇರಲಿದೆ. ಸೆನೆಟ್ ಭವನ, ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣ, ನಗರದ ವಿವಿಧ ಚಿತ್ರಮಂದಿರಗಳು, ಜೆ.ಕೆ ಮೈದಾನದಲ್ಲಿಯೂ ಚಲನಚಿತ್ರ ಪ್ರದರ್ಶನ ಆಯೋಜಿಸಲಾಗುವುದು.

ಅ.5ರಿಂದ 10ರವರೆಗೆ ನಗರದ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ  ಏರ್ಪಡಿಸಲಾಗುವುದು.
ಉದ್ಘಾಟನಾ ಸಮಾರಂಭಕ್ಕೆ ಖ್ಯಾತ ನಟ, ನಟಿಯರು, ನಿರ್ದೇಶಕರು, ಇತರ ಗಣ್ಯರನ್ನು ಆಹ್ವಾನಿಸಲು ಸಮಿತಿ ನಿರ್ಧರಿಸಿದೆ.

5 ಚಿತ್ರಮಂದಿರಗಳಲ್ಲಿ 6 ದಿನಗಳ ಕಾಲ ದಿನಕ್ಕೆ 5 ಚಿತ್ರಗಳಂತೆ  ಒಟ್ಟಾರೆ 30 ಚಲನಚಿತ್ರ, ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ 8 ದಿನಗಳ ಕಾಲ ದಿನಕ್ಕೆ  3 ಪ್ರದರ್ಶನದಂತೆ 24 ಸಿನಿಮಾ ಪ್ರದರ್ಶನ. ಸೆನೆಟ್ ಭವನದಲ್ಲಿ ದಿನಕ್ಕೆ 2 ಪ್ರದರ್ಶನದಂತೆ 8 ದಿನಕ್ಕೆ 16 ಸಿನಿಮಾ ಹಾಗೂ ಜೆ.ಕೆ ಮೈದಾನದಲ್ಲಿ  8 ದಿನ ಚಲನಚಿತ್ರ  ಪ್ರದರ್ಶನ  ಆಯೋಜಿಸಲಾಗುವುದು.

  ಚಲನಚಿತ್ರ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ  ಚೇತನ್‌ ರಾಮರಾವ್,  ರೇಣುಕಾ ಪ್ರಸಾದ್ ಹಾಗೂ ಮರಣೋತ್ತರವಾಗಿ ಎಂ.ಪಿ. ಶಂಕರ್, ಅಶ್ವಥ್ , ರತ್ನಾಕರ್, ಮೈಸೂರು ಲೋಕೇಶ್ ಅವರ ಕುಟುಂಬದವರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ.
ಸಮಿತಿಯ ಉಪಾಧ್ಯಕ್ಷ ಚಂದ್ರು, ವಿಶೇಷ ಅಧಿಕಾರಿ ಯೋಗೀಶ್, ಕಾರ್ಯಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಕುಬೇರಪ್ಪ, ಸದಸ್ಯರಾದ ಮಹಮ್ಮದ್ ಅಲಿ, ತುಂಬಲ ಪ್ರಕಾಶ್, ನೀಲಕಂಠ, ಕಾಳೇಗೌಡ, ಎಂ.ಸಿ. ರಮೇಶ್, ರೇಣುಕಾ ಪ್ರಸಾದ್, ಅಮೃತಾ, ಕೆ. ಸುಬ್ರಮಣಿ, ಮೈಸೂರು ಫಿಲ್ಮ್‌ ಸೊಸೈಟಿಯ ಕಾರ್ಯದರ್ಶಿ ಮನು ಇದ್ದರು.

ಪ್ರಾಯೋಜಕರ ಸಹಕಾರ ಅಗತ್ಯ: ಶಿಖಾ
ಮೈಸೂರು:- ದಸರಾ ಮಹೋತ್ಸವ್ಕಕೆ ಖಾಸಗಿ ಕಂಪೆನಿಗಳ ಪ್ರಾಯೋಜಕತ್ವ  ಸಹಕಾರ ಅಗತ್ಯ ಎಂದು ದಸರಾ ವಿಶೇಷಾಧಿಕಾರಿ ಸಿ. ಶಿಖಾ ಅಭಿಪ್ರಾಯ ಪಟ್ಟರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ದಸರಾ ಮಹೋತ್ಸವದ ಪ್ರಾಯೋಜಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

   ಖಾಸಗಿ ಕಂಪೆನಿಗಳವರು ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವವನ್ನು ನೀಡುವ ಮೂಲಕ ದಸರಾ ಮಹೋತ್ಸವವನ್ನು  ಜನಾಕರ್ಷಣೀ ಯವಾಗಿಸಲು ಸಹಕರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮುಡಾ ಆಯುಕ್ತ ಪಾಲಯ್ಯ ಸೇರಿದಂತೆ ಖಾಸಗಿ ಕಂಪೆನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT