ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಸೆಂಟ್

Last Updated 26 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಯುರೋಪಿನಲ್ಲಿ ವಾಸಿಸುವ ಬೃಹತ್ ಗಾತ್ರದ, ಪೊದೆ ಕೂದಲಿನ ಕಾಡೆಮ್ಮೆಯನ್ನು ವೈಸೆಂಟ್ ಎಂದು ಕರೆಯಲಾಗುತ್ತದೆ. ಅಮೆರಿಕದ ಕಾಡೆಮ್ಮೆಯಂತೆಯೇ ಕಾಣುವ ಈ ವೈಸೆಂಟ್‌ಗಳು ಅವುಗಳಿಗಿಂತ ಗಾತ್ರದಲ್ಲಿ ದೊಡ್ಡವು. ಅವುಗಳ ತಲೆ ಸಾಮಾನ್ಯ ಗಾತ್ರದಲ್ಲಿದ್ದರೂ, ಕಾಲುಗಳು ಎತ್ತರವಾಗಿರುತ್ತವೆ. ಅವು ಎರಡು ಮೂರು ಮೀಟರ್ ಎತ್ತರ ಬೆಳೆಯುತ್ತವೆ.

ಯುರೋಪಿನ ಕಾಡುಗಳಲ್ಲಿ ಇದಕ್ಕಿಂತಲೂ ದೊಡ್ಡ ವೈಸೆಂಟ್‌ಗಳು ಬದುಕಿದ್ದವು ಎನ್ನಲಾಗುತ್ತದೆ. ಕಾಡು ನಾಶವಾದ ಪರಿಣಾಮ ಅವು ಕಾಣೆಯಾದವು.ಮನುಷ್ಯನ ಆಹಾರದ ದುರಾಸೆಗೆ ಬಲಿಯಾಗಿ ವೈಸೆಂಟ್‌ಗಳ ಸಂಖ್ಯೆ ಕುಂಠಿತವಾಯಿತು. 1900 ಹೊತ್ತಿಗೆ 700 ವೈಸೆಂಟ್‌ಗಳು ಮಾತ್ರ ಬದುಕಿದ್ದವು.ಅವು ಕೂಡ ಪೋಲೆಂಡ್‌ನ ಕಾಡಿನಲ್ಲಿ ಮಾತ್ರ. ಮಹಾಯುದ್ಧದ ಹೆಚ್ಚು ಕಾಳಗ ನಡೆದಿದ್ದು ಪೋಲೆಂಡ್‌ನಲ್ಲಿ. ಆಗ ಸೈನಿಕರು ಆಹಾರಕ್ಕಾಗಿ ಭಾರಿ ಸಂಖ್ಯೆಯಲ್ಲಿ ವೈಸೆಂಟ್‌ಗಳನ್ನು ಕೊಂದರು. ಇದೀಗ ಕೆಲವು ವೈಸೆಂಟ್‌ಗಳನ್ನು ಮೃಗಾಲಯದಲ್ಲಿ ರಕ್ಷಿಸಲಾಗುತ್ತಿದೆ.          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT