ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಂಗ್ಯಗಿರಿ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವ್ಯಂಗ್ಯಗಿರಿ (ವ್ಯಂಗ್ಯಚಿತ್ರಗಳ ಸಂಕಲನ)
ರಚನೆ: ವಿ.ಆರ್.ಸಿ. ಶೇಖರ್, ಪು: 112; ಬೆ: ರೂ. 80; ಪ್ರ: ನಿರಂತರ, ನಂ. 39/2-3, ಶೃಂಗಗಿರಿ~, 5ನೇ ಕ್ರಾಸ್, ಸುಪ್ರಜಾ ನಗರ, ಕೋಣನಕುಂಟೆ,
ಬೆಂಗಳೂರು- 560 062.

ನಾಲ್ಕು ದಶಕಗಳಿಂದ ನಿರಂತರವಾಗಿ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿರುವ ವಿ.ಆರ್. ಸಿ.ಶೇಖರ್, ತಮ್ಮ ಆಯ್ದ ಚಿತ್ರಗಳನ್ನು `ವ್ಯಂಗ್ಯಗಿರಿ~ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟಿಸಿದ್ದಾರೆ.
 
ಈ ಅಂಕುಡೊಂಕು ಚಿತ್ರಗಳು ಕಲಾವಿದರ ಬೆಳವಣಿಗೆಯ ದಾರಿಯ ಹಲವು ಮಜಲುಗಳ ಸಂಕಲನ ಆಗಿರುವಂತೆಯೇ, ಸಮಕಾಲೀನ ಬದುಕಿನ ಹಲವು ಸಂಗತಿಗಳಿಗೆ ಸೃಜನಶೀಲ ಕಲಾವಿದನೊಬ್ಬನ ಸ್ಪಂದನವೂ ಆಗಿದೆ. ಇಲ್ಲಿನ 102 ಚಿತ್ರಗಳು ಶೇಖರ್ ಅವರ ರೇಖೆಗಳ ಜೀವಂತಿಕೆಗೆ ಸಾಕ್ಷಿಯಾಗಿರುವಂತೆಯೇ ಅವರೊಳಗಿನ ಒಬ್ಬ ಸಮಾಜ ವಿಜ್ಞಾನದ ವಿದ್ಯಾರ್ಥಿಯ ಒಳನೋಟಗಳಿಗೂ ಉದಾಹರಣೆಯಂತಿವೆ.

ಶೇಖರ್ ಅವರ ಬಗ್ಗೆ ಮತ್ತು `ವ್ಯಂಗ್ಯಗಿರಿ~ ಕೃತಿಯ ಬಗ್ಗೆ ಕಲಾವಿಮರ್ಶಕರಾದ ಎಚ್.ಎ.ಅನಿಲ್‌ಕುಮಾರ್ ಬರೆದಿರುವುದು ಹೀಗೆ:
`ಶೇಖರ್ ಅವರ ವ್ಯಂಗ್ಯಚಿತ್ರಗಳಲ್ಲಿ ಗಾಂಭೀರ್ಯವಿದೆ. ಗಂಭೀರ ಶೃಂಗೇರಿಯ ನಿಸರ್ಗ ಚಿತ್ರಗಳಲ್ಲೂ ಆಹ್ಲಾದವಿದೆ. ಚಿತ್ರಕಲೆ ಕಲಿಸುವ ಇವರ ವ್ಯಕ್ತಿತ್ವದಲ್ಲಿ ಒಂದು ಲಯವಿದೆ.

ಇಂತಹ ನವೋದಯದ ಅಪರೂಪದ ವ್ಯಕ್ತಿತ್ವ ಮತ್ತು ಅವರ ಸೃಷ್ಟಿ ನಮಗೆ ಲಭ್ಯವಿರುವುದು ಒಂದು ಬೆಚ್ಚನೆಯ ಭಾವವನ್ನು ಉದ್ದೀಪಿಸುತ್ತದೆ. ಕನ್ನಡದಲ್ಲಿ ವ್ಯಂಗ್ಯಚಿತ್ರಗಳನ್ನೇ ಪ್ರಮುಖವಾಗಿಸಿಕೊಂಡು ಪ್ರಕಟವಾದ ಪುಸ್ತಕಗಳು ತೀರ ಅಪರೂಪವಾಗಿರುವ ಹಿನ್ನೆಲೆಯಲ್ಲಿ ಕಲಾವಿದ, ವ್ಯಂಗ್ಯಚಿತ್ರಕಾರ ಹಾಗೂ ಕಲಾ ಉಪನ್ಯಾಸಕ ವಿ.ಆರ್.ಸಿ.ಶೇಖರರ ಈ ಚಿತ್ರ-ಪುಸ್ತಕ ಸ್ವಾಗತಾರ್ಹ~.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT