ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಂಗ್ಯಚಿತ್ರ ಪ್ರದರ್ಶನ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪಶ್ಚಿಮ ಬಂಗಾಳದ ಕಲಾವಿದ ಪರ್ಜನ್ಯ ಸೌ ಅವರು ಚಿಕ್ಕ ವಯಸ್ಸಿನಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ತಳೆದವರು. ಇದೇ ಆಸಕ್ತಿ ಅವರನ್ನು ವ್ಯಂಗ್ಯಚಿತ್ರಕಾರನಾಗಿ ಹೊರಹೊಮ್ಮುವಂತೆ ಮಾಡಿದ್ದು, ಹಲವು ವ್ಯಂಗ್ಯಚಿತ್ರಗಳು ಅವರ ಕೈಯಲ್ಲಿ ಅರಳಿವೆ.

ಕಲೆಯ ಎಲ್ಲಾ ಪ್ರಕಾರಗಳ ಬಗೆಗೂ ಪ್ರೀತಿ ಹೊಂದಿದ್ದ ಪರ್ಜನ್ಯ ಅವರಿಗೆ ಆಧುನಿಕ ಕಲಾ ಮಾಧ್ಯಮಕ್ಕೆ ಒಗ್ಗಿಕೊಳ್ಳುವ ಮನಸ್ಸಿತ್ತು. ಅದರಲ್ಲೂ ತಮ್ಮ ಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಲು ವ್ಯಂಗ್ಯಚಿತ್ರ ಅತಿ ಸೂಕ್ಷ್ಮ ಮಾಧ್ಯಮ ಎಂಬುದನ್ನೂ ಅವರು ಕಂಡುಕೊಂಡರು.  ವ್ಯಂಗ್ಯಚಿತ್ರದಲ್ಲೂ ವಿಭಿನ್ನತೆ ತರಬೇಕೆಂಬ ಉದ್ದೇಶದಿಂದ ಹಲವು ವಸ್ತು ವಿಷಯಗಳನ್ನು ಬಳಸಿಕೊಂಡು ತಮ್ಮ ಕಲ್ಪನೆಗೆ ಗೆರೆಗಳ ಮೂಲಕ ಜೀವ ನೀಡಿದರು.

`ಗ್ಲೋಬಲ್ ವಾರ್ಮಿಂಗ್' ಎಂಬ ಪರಿಕಲ್ಪನೆಯಲ್ಲೂ ಹತ್ತಾರು ವ್ಯಂಗ್ಯ ಚಿತ್ರಗಳನ್ನು ಮೂಡಿಸಿದ್ದಾರೆ. ನಮ್ಮ ಭೂಮಿ ತಾಯಿಯ ಮೇಲಿನ ನಮ್ಮ ಸ್ವೇಚ್ಛಾಚಾರ ವರ್ತನೆ, ಭುವಿಯನ್ನು ಹಾಳುಗೆಡಹುತ್ತಿರುವ ಬಗೆ ಎಲ್ಲವನ್ನೂ ರೇಖೆಗಳ ಮೂಲಕ ಸ್ಪಂದನೆಗೆ ಎಟುಕುವಂತೆ ಮಾಡಿದ್ದಾರೆ.

ಎನ್ವಿರೋಸ್ಪೆಕ್ಟ್ರಾ ಎಂಬ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಸೇರಿ ಅವರು ತಮ್ಮ ವ್ಯಂಗ್ಯಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ  ಪ್ರದರ್ಶನ ನೀಡಿರುವ ಅವರ ಕಲಾ ಪ್ರದರ್ಶನವು ನಗರದಲ್ಲೂ ನಡೆಯಲಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ ಸಹಯೋಗದೊಂದಿಗೆ `ಇಂಪ್ರೆಶನ್ಸ್ ಅಂಡ್ ಎಕ್ಸ್‌ಪ್ರೆಶನ್ಸ್' ಎಂಬ ಶೀರ್ಷಿಕೆಯಲ್ಲಿ ಇವರ ವ್ಯಂಗ್ಯಚಿತ್ರಗಳ ಪ್ರದರ್ಶನ ಏಪ್ರಿಲ್ 6ರಿಂದ ಆರಂಭವಾಗಲಿದ್ದು, ಏಪ್ರಿಲ್ 20ರವರೆಗೂ ಮುಂದುವರೆಯಲಿದೆ.

ಪ್ರದರ್ಶನವನ್ನು ಖ್ಯಾತ ವ್ಯಂಗ್ಯಚಿತ್ರಕಾರ ಪೌಲ್ ಫರ್ನಾಂಡಿಸ್ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 11. ಸ್ಥಳ: ಇಂಡಿಯನ್ ಕಾರ್ಟೂನ್ ಗ್ಯಾಲರಿ, ನಂ.1, ಮಿಡ್‌ಫೋರ್ಡ್ ಹೌಸ್, ಎಂ.ಜಿ.ರಸ್ತೆ, ಕಿಡ್ಸ್‌ಕೆಂಪ್ ಹತ್ತಿರ. ಟ್ರಿನಿಟಿ ಸರ್ಕಲ್. ಪ್ರದರ್ಶನ  ಬೆಳಿಗ್ಗೆ 10 ರಿಂದ ಸಂಜೆ 6ರವರೆಗೂ ಇರುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT