ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರಮಠ ನಿರ್ಮಾಣಕ್ಕೆ ಶಂಕುಸ್ಥಾಪನೆ

Last Updated 14 ಸೆಪ್ಟೆಂಬರ್ 2011, 5:25 IST
ಅಕ್ಷರ ಗಾತ್ರ

ವಿಜಾಪುರ: ನಗರದ ಬಾಗಲಕೋಟೆ ರಸ್ತೆಯ ವಜ್ರ ಹನುಮಾನ ಬಡಾವಣೆಯಲ್ಲಿ ಶಂಕರಮಠ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಶಂಕುಸ್ಥಾಪನೆ ನೆರವೇರಿಸಿದ ಶ್ರೀ ಶೃಂಗೇರಿ ಶಾರದಾ ಪೀಠದ ಮುಖ್ಯ ಆಡಳಿತಾಧಿಕಾರಿ ಪದ್ಮಶ್ರೀ ಆರ್. ಗೌರಿಶಂಕರ, ನಿಯೋಜಿತ ಮಠಕ್ಕೆ ಅವಶ್ಯವಿರುವ ಸಕಲ ಸಹಕಾರ ನೀಡುವ ಭರವಸೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭೀಮಾಶಂಕರ ಹದನೂರ, ಮಠದ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ಧನ ಸಹಾಯ ನೀಡುವುದಾಗಿ ಹೇಳಿದರು

ಮಠದ ನಿವೇಶನದಲ್ಲಿ ಕೊಳವೆ ಬಾವಿ ಕೊರೆಸಲು ನೆರವಾದ ವಿನೋದ ಬಾಗಾಯತಪಾಟೀಲ ದಂಪತಿಯನ್ನು ಸನ್ಮಾನಿಸಲಾಯಿತು. ವಿಷ್ಣುಪಂತ ಉಪಾಧ್ಯೆ ಆಶೀರ್ವಚನ ನೀಡಿದರು.

ಶಂಕರ ಸೇವಾ ಸಮಿತಿ ಖಚಾಂಚಿ ದತ್ತಾತ್ರೇಯ ಇನಾಮದಾರ, ಸಮಿತಿ ಅಧ್ಯಕ್ಷ ಗಂಗಾಧರ ದೇಶಪಾಂಡೆ ಮಾತನಾಡಿದರು.

ಪತ್ರಕರ್ತ ಗೋಪಾಲ ನಾಯಕ,  ಗಣ್ಯರಾದ ಚಂದ್ರಕಾಂತ ಸೊಲ್ಲಾಪುರಕರ, ಟಂಕಸಾಲಿ, ಡಾ. ಥೊಬ್ಬಿ ಹಾಗೂ ಡಾ.ಮುಂಡೇವಾಡಿ,  ಜೆ.ಎಚ್. ಕುಲಕರ್ಣಿ,  ಭೀಮಸೇನ್‌ರಾವ ಅಳವಂಡಿಕರ, ಸಮಿತಿ ಸದಸ್ಯರಾದ ದಿವಾಕರ, ಶಂಕರ ಕುಲಕರ್ಣಿ, ಹನುಮಂತ ವೈದ್ಯ ಮುಂತಾದವರು ಉಪಸ್ಥಿತರಿದ್ದರು.
ಸತ್ಯನಾರಾಯಣ ಸಿದ್ದಾಂತಿ ವಂದಿಸಿದರು. ಉಮೇಶ ದಿಕ್ಷೀತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT