ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಕಳಶ ರಥಯಾತ್ರೆಗೆ ಅದ್ದೂರಿ ಸ್ವಾಗತ

Last Updated 12 ಸೆಪ್ಟೆಂಬರ್ 2011, 9:20 IST
ಅಕ್ಷರ ಗಾತ್ರ

ಯಾದಗಿರಿ: ಪಂ. ಶ್ರೀರಾಮ ಶರ್ಮಾ ಆಚಾರ್ಯ ಅವರ ಜನ್ಮಶತಾಬ್ದಿ ಅಂಗವಾಗಿ ಹರಿದ್ವಾರದಿಂದ ಆರಂಭವಾಗಿರುವ ಶಕ್ತಿ ಕಳಶ ರಥಯಾತ್ರೆಯು ಭಾನುವಾರ ನಗರಕ್ಕೆ ಆಗಮಿಸಿತು.

ಇಲ್ಲಿಯ ಮೈಲಾಪುರ ಅಗಸಿಯಲ್ಲಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿದ ನಗರದ ನಾಗರಿಕರು, ಪೂರ್ಣಕುಂಭ ಮೆರವಣಿಗೆಯೊಂದಿಗೆ ಇಲ್ಲಿಯ ಮಹಾವೀರ ಭವನಕ್ಕೆ ಕರೆತಂದರು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಪಂ. ಪರಮಾನಂದ ದ್ವಿವೇದಿ, ಧರ್ಮೇಂದ್ರ ಶರ್ಮಾ, ಸುಗನಸಿಂಗ್, ಪಿಯೂಷ್ ಶರ್ಮಾ, ಶೋಭಾ ಪುರೋಹಿತ ಅವರು, ಶಕ್ತಿ ಕಳಶ ರಥಯಾತ್ರೆಯ ಮಹತ್ವ ಹಾಗೂ ಗಾಯತ್ರಿ ಮಂತ್ರವನ್ನು ನಿತ್ಯ ಪಠಿಸುವುದರಿಂದ ಮಾನವನಿಗೆ ಶಾಂತಿ, ಸುಖ, ನೆಮ್ಮದಿ ಸಿಗುವುದಲ್ಲದೇ, ದೇಶದಲ್ಲಿಯೂ ಶಾಂತಿ ನೆಲೆಸುತ್ತದೆ ಎಂದು ಹೇಳಿದರು.

ಪಂ. ಶ್ರೀರಾಮ ಶರ್ಮಾ ಅವರ ತಪೋ ಮತ್ತು ಆದರ್ಶ ಜೀವನದ ಬಗ್ಗೆ ವಿವರಿಸಿದ ಅವರು, ಗುರುಗಳು ತೋರಿದ ದಾರಿಯಲ್ಲಿ ಮುನ್ನಡೆಯುವಂತೆ ಸಲಹೆ ಮಾಡಿದರು. ನವೆಂಬರ್ 10 ರವರೆಗೆ ಹರಿದ್ವಾರದಲ್ಲಿ ನಡೆಯಲಿರುವ 1551 ಕುಂಭ ಯಜ್ಞದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಹನುಮಾನದಾಸ ಮುಂದಡಾ, ಬದ್ರಿ ನಾರಾಯಣ ಭಟ್ಟಡ, ಹನುಮಾನದಾಸ ಜಿತಾನಿ, ಹರಿಕಿಷನ್ ಜೋಶಿ, ದಯಾರಾಮ ದಾಯಿಮ, ಕಾಂತಿಲಾಲ ದೋಖಾ, ವಿಜಯ ಭಟ್ಟಡ, ಅಶೋಕ ಖಂಡೇವಾಲ, ಮುರಲಿ ಭಂಗ, ಜಗದೀಶ ಪಂಡಿತ, ಶ್ಯಾಮಸುಂದರ ಭಟ್ಟಡ, ವಿಜಯ ಭಟ್ಟಡ, ಅಯ್ಯಣ್ಣ ಹುಂಡೇಕಾರ, ವಿ.ಸಿ. ರೆಡ್ಡಿ, ವಿಶ್ವನಾಥ ಸಿರವಾರ, ರಾಜು ಯೆಂದೆ, ನೂರಂದಪ್ಪ ಲೇವಡಿ, ನಾಗೇಂದ್ರ ಜಾಜಿ, ಬಸವಂತರಾಯ ಮಾಲಿಪಾಟೀಲ, ಸುಭಾಷ ಅಯ್ಯಾರಕರ, ರಾಚಣ್ಣಗೌಡ ಮೋಸಂಬಿ, ಸಿದ್ಧಪ್ಪ ಹೊಟ್ಟಿ, ರುಕ್ಮಯ್ಯ ಕಟ್ಟಿಮನಿ, ಲಕ್ಷ್ಮಿನಾರಾಯಣ, ಪಾಂಡುರಂಗ ನವಲೆ, ಬಸವರಾಜ ಮೋಟ್ನಳ್ಳಿ, ಹನುಮಂತರಾವ ಯೆಂದೆ, ನಾರಾಯಣರಾ ಯೆಂದೆ, ಮಲ್ಲಣ್ಣ ಆನೂರ, ವೆಂಕಟರಾವ ಜಾಡೆ, ಹನುಮಾನ ಗೌರ, ಅರವಿಂದ ಆಶಾರ, ಸಂಗಣ್ಣ ಚಟ್ನಳ್ಳಿ, ಚಂದ್ರು ಯಲ್ಹೇರಿ, ಮಹಿಳೆಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT