ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಮಿಲ್‌ನಲ್ಲಿ ಮತ್ತೊಂದು ಅತ್ಯಾಚಾರ

Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಇತ್ತೀಚೆಗೆ ಮುಂಬೈನಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳಲ್ಲಿ ಕೆಲವರು ಈ ಹಿಂದೆ ತಮ್ಮ ಮೇಲೂ ಅತ್ಯಾಚಾರ ಮಾಡಿದ್ದರು ಎಂದು 19 ವರ್ಷದ ಯುವತಿಯೊಬ್ಬರು ಬಾಂಡುಪ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಜುಲೈ 13ರಂದು ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಯುವತಿ ಹೇಳಿದ್ದಾಗಿ ಡಿಸಿಪಿ ವಿನಾಯಕ್ ದೇಶ್‌ಮುಖ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

`ಘಟನೆ ನಡೆದ ದಿನ ಯುವತಿ ಮಹಾಲಕ್ಷ್ಮಿ ಪ್ರದೇಶಕ್ಕೆ ಹೋಗಿದ್ದರು. ಆಕೆಯ ಜತೆಗೆ ಸ್ನೇಹಿತ ಕೂಡ ಇದ್ದ. ಶಕ್ತಿ ಮಿಲ್ ಪ್ರದೇಶದಲ್ಲಿಯೇ ಈಕೆಯ ಮೇಲೆ ಅತ್ಯಾಚಾರ ನಡೆದಿದೆ. ಈ ಸಂದರ್ಭದಲ್ಲಿ ಸ್ನೇಹಿತನನ್ನು ಕಟ್ಟಿಹಾಕಲಾಗಿತ್ತು' ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣವನ್ನು ಎನ್.ಎಂ.ಜೋಷಿ ಮಾರ್ಗ್ ಠಾಣೆಗೆ ವರ್ಗಾಯಿಸಲಾಗಿದೆ.

`ಆರೋಪಿಗಳ ಸುಳಿವಿಗೆ ಹಲವರನ್ನು ಪ್ರಶ್ನೆಗೊಳಪಡಿಸಲಾಗಿದ್ದು, ಶಂಕಿತನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ' ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT