ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬ್ದದ ವೇಗ ಮೀರಿಸುವ ಅಮೆರಿಕದ ಯುದ್ಧವಿಮಾನ

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ):ಒಂದು ತಾಸಿನೊಳಗೆ ವಿಶ್ವದ ಯಾವುದೇ ಭಾಗಕ್ಕೆ ತೆರಳಬಲ್ಲ ಶಬ್ದದ ವೇಗಕ್ಕಿಂತಲೂ 20 ಪಟ್ಟು ಹೆಚ್ಚಿನ ವೇಗದ ಯುದ್ಧ ವಿಮಾನವನ್ನು ಅಮೆರಿಕ ಅಭಿವೃದ್ಧಿಪಡಿಸುತ್ತಿದೆ.ಈ ಯುದ್ಧ ವಿಮಾನ 2016ರ ಹೊತ್ತಿಗೆ ಸಿದ್ಧವಾಗಲಿದೆ ಎಂದು ಅಮೆರಿಕ ಸೇನೆ ಆಶಾಭಾವ ಹೊಂದಿದೆ ಎಂದು ಈ ವಿಮಾನ ತಯಾರಿಸುತ್ತಿರುವ ಅಧಿಕಾರಿಗಳನ್ನು ಉಲ್ಲೇಖಿಸಿ `ಎನ್‌ಬಿಸಿ ನ್ಯೂಸ್~ ವರದಿ ಮಾಡಿದೆ.

ಈ ಯುದ್ಧ ವಿಮಾನವನ್ನು `ಎಕ್ಸ್- ಪ್ಲೇನ್~ ಎಂದು ಕರೆಯಲಾಗುತ್ತಿದ್ದು, ಪ್ರತಿ ಗಂಟೆಗೆ ಅಂದಾಜು 20,900 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ  ಹೊಂದಿದೆ. ಅಮೆರಿಕ ಸರ್ಕಾರಕ್ಕಾಗಿ 30 ವರ್ಷಗಳಿಂದಲೂ ರಹಸ್ಯ ವಿಮಾನಗಳನ್ನು ತಯಾರಿಸುತ್ತಿರುವ ರಕ್ಷಣಾ ಉನ್ನತ ಯೋಜನೆಗಳ ಸಂಶೋಧನೆ ಸಂಸ್ಥೆ (ಡಿಎಆರ್‌ಪಿಎ) ಈ ಅತ್ಯಂತ ವೇಗದ ಯುದ್ಧ ವಿಮಾನ ತಯಾರಿಸುವ ಹೊಣೆ ಹೊತ್ತಿದೆ.

ಶಬ್ದಕ್ಕಿಂತಲೂ ಹೆಚ್ಚಿನ ವೇಗದ ಎರಡು ಯುದ್ಧ ವಿಮಾನಗಳ ಪ್ರಾಯೋಗಿಕ ಪರೀಕ್ಷೆಯನ್ನು ಎರಡು ವರ್ಷಗಳ ಹಿಂದೆಯೇ ಅಮೆರಿಕ ನಡೆಸಿತ್ತು. ಕಳೆದ ವರ್ಷದ ಆಗಸ್ಟ್‌ನಲ್ಲಿ ಪರೀಕ್ಷಿಸಲಾದ ಶಬ್ದಾತೀತ ತಂತ್ರಜ್ಞಾನ ವಾಹಕ (ಎಚ್‌ಟಿವಿ-2) ಬೇಗನೇ ಗುರಿ ತಲುಪಿತ್ತಾದರೂ 9 ನಿಮಿಷಗಳ  ಹೆಚ್ಚುವರಿ ಸಮಯ ಪಡೆದಿತ್ತು.
 
ವಿಶ್ವದ ಯಾವುದೇ ಸ್ಥಳದ ಉದ್ದೇಶಿತ ಗುರಿಯನ್ನು ಒಂದು ಗಂಟೆಯೊಳಗೆ ತಲುಪುವ ಸಾಮರ್ಥ್ಯದ ಎಚ್‌ಟಿವಿ-2 ಅನ್ನು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಸುಧಾರಣೆ ಕಾರ್ಯಕ್ರಮದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT