ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶರಣ ತತ್ವದ ಸಾರವೇ ಮಾರ್ಕ್ಸ್ ಸಿದ್ಧಾಂತ'

ಪ್ರಗತಿಪರ ರೈತ ಬಾಬುರಾವ್ ಪಾಟೀಲ ಹೇಳಿಕೆ
Last Updated 8 ಡಿಸೆಂಬರ್ 2012, 6:37 IST
ಅಕ್ಷರ ಗಾತ್ರ

ಚಿಂಚೋಳಿ: `ವರ್ಗರಹಿತ, ವರ್ಣರಹಿತ ಹಾಗೂ ಲಿಂಗ ತಾರತಮ್ಯ ಮುಕ್ತ ಸಮಾನತೆಯ ನವ ಸಮಾಜ ನಿರ್ಮಾಣಕ್ಕೆ 12ನೇ ಶತಮಾನದ ಕ್ರಾಂತಿಪುರುಷ ಬಸವೇಶ್ವರರ ನೇತೃತ್ವದಲ್ಲಿ ಬಸವಾದಿ ಶರಣರು ಬೊಧಿಸಿದ ತತ್ವದ ಸಾರವೇ ಕಾರ್ಲ್‌ಮಾರ್ಕ್ಸ್‌ರ ಸಮಾಜವಾದ ಸಿದ್ಧಾಂತವಾಗಿದೆ' ಎಂದು ಪ್ರಗತಿಪರ ರೈತ ಬಾಬುರಾವ್ ಪಾಟೀಲ ಹೇಳಿದ್ದಾರೆ.

ಅವರು, ಶುಕ್ರವಾರ ಇಲ್ಲಿನ ಸಿ.ಬಿ. ಪಾಟೀಲ ಪದವಿ ಕಾಲೇಜಿನಲ್ಲಿ ಗುಲ್ಬರ್ಗದ ವಿಶ್ವಜ್ಯೋತಿ ಪ್ರತಿಷ್ಠಾನ ಹಮ್ಮಿಕೊಂಡ ಶರಣಕಿರಣ ಸಾರುವ ಉದ್ದೇಶದ `ವಿಶ್ವಜ್ಯೋತಿ ಯಾತ್ರೆ'ಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
`ಮನುಕುಲದ ಉದ್ಧಾರಕ್ಕಾಗಿ ಬಸವಾದಿ ಶರಣರು ಸಾರಿದ ಸಿದ್ಧಾಂತ ಪ್ರಚಾರಗೊಳ್ಳಲಿಲ್ಲ. ಆದರೆ ಕಾರ್ಲ್‌ಮಾರ್ಕ್ಸ್‌ಗೆ ಮಾಧ್ಯಮಗಳ ದೆಸೆಯಿಂದ ವ್ಯಾಪಕ ಪ್ರಚಾರ ದೊರಕಿತು' ಎಂದ ಅವರು, `ಬಸವಣ್ಣನವರ ಚಳವಳಿ ಬಹುಕಾಲ ಮುಂದುವರೆಯಲಿಲ್ಲ' ಎಂದು ವಿಷಾದಿಸಿದರು.

ಹಿರಿಯ ಸಾಹಿತಿ ಡಾ. ಕಾಶಿನಾಥ ಅಂಬಲಗಿ ಮಾತನಾಡಿ, `ಶರಣರ ಚಳವಳಿ ಶೋಷಿತರ ಚಳವಳಿಯಾಗಿತ್ತು. ಕೆಳವರ್ಗದವರು, ದಲಿತರು ಹಾಗೂ ಉಪೇಕ್ಷೆಗೆ ಗುರಿಯಾದವರೇ ಹೆಚ್ಚಾಗಿ ಚಳವಳಿಯಲ್ಲಿ ಪಾಲ್ಗೊಂಡಿದ್ದರು' ಎಂದರು. ಪ್ರಗತಿಪರ ಚಿಂತಕ ಪ್ರೋ. ಆರ್.ಕೆ ಹುಡಗಿ ಮಾತನಾಡಿ, `12ನೇ ಶತಮಾನದ ಅನುಭವ ಮಂಟಪ ಜಾತ್ಯತೀತ ಸಂಸತ್ತಾಗಿತ್ತು' ಎಂದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಬಾಷೀತ್, ಪ್ರಾಚಾರ್ಯ ಡಾ. ಶಿವರಾಜ ಕುಲ್ಕರ್ಣಿ, ವೀರಶೈವ ಸಮಾಜದ ಅಧ್ಯಕ್ಷ ವಿಶ್ವನಾಥ ಪಾಟೀಲ, ಉಪಾಧ್ಯಕ್ಷ ಚಿತ್ರಶೇಖರ ಪಾಟೀಲ, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಶಾಮರಾವ್ ಕೊರವಿ, ಜಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ಉಪಸ್ಥಿತರಿದ್ದರು.

ಪ್ರಾಚಾರ್ಯೆ ಡಾ. ವಿಜಯಲಕ್ಷ್ಮೀ ಕೋಸಗಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿ `ವಿಶ್ವಜ್ಯೋತಿ ಯಾತ್ರೆ'ಗೆ ಜಿಲ್ಲೆಯ ತುಂಬಾ ವ್ಯಾಪಕ ಬೆಂಬಲ ದೊರಕಿದ್ದರಿಂದ ಇದನ್ನು, ಯಾದಗಿರಿ ಜಿಲ್ಲೆಗೂ ವಿಸ್ತರಿಸುವುದಾಗಿ ತಿಳಿಸಿದರು.

ಉಪನ್ಯಾಸಕ ಮಲ್ಲಿಕಾರ್ಜುನ ಪಾಲಾಮೂರು ಸ್ವಾಗತಿಸಿದರು. ಕೆ.ಗಿರಿಮಲ್ಲಪ್ಪ ನಿರೂಪಿಸಿದರು. ಬಸವರಾಜ ಬಿರಾದಾರ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT