ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ಚಿಂತನೆಗೆ ಅಪಚಾರ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಚನ ಸಾಹಿತ್ಯ, ಉಪನಿಷತ್ತು ಮತ್ತು ದಾರ್ಶನಿಕರೆಲ್ಲರೂ ದೇವರು ನಿರಾಕಾರನೆಂದೂ, ಮಾನವೀಯತೆಯೇ ದೈವವೆಂದು ಸಾರಿದರು. ಆದರೆ ರಾಜ್ಯದ ಕೆಲವು ಮಠಗಳಲ್ಲಿ ಕೋಟಿ ಲಿಂಗಗಳು ಮತ್ತು ಬಸವಣ್ಣನವರ ಮೂರ್ತಿಗಳನ್ನು  ಪ್ರತಿಷ್ಠಾಪಿಸಲು ಹೊರಟಿದ್ದಾರೆ.
 
`ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ~ ಎಂದ ಬಸವಣ್ಣವರನ್ನೇ ಸ್ಥಾವರ ಮೂರ್ತಿ ರೂಪದಲ್ಲಿ ಸ್ಥಾಪಿಸುವುದು ಸರಿಯೇ? ಸರ್ಕಾರದಿಂದ ಆರ್ಥಿಕ ನೆರವು ಸಿಗುತ್ತದೆ ಎಂಬ ಕಾರಣಕ್ಕಾಗಿ ಮೂರ್ತಿ ಸ್ಥಾಪನೆಗೆ ಹೊರಟಿದ್ದಾರೆಯೇ?

ಇವು  ಸ್ಥಾವರಕ್ಕೆ ಪ್ರಾಮುಖ್ಯತೆ ನೀಡಿ ಜಂಗ (ಸಮಾಜ, ಕಟ್ಟಕಡೆಯ ಮನುಷ್ಯ)ವನ್ನು ದೂರವಿಡುವ ಪ್ರಯತ್ನಗಳಲ್ಲವೇ?

ಈ ಎಲ್ಲ ಪ್ರಯತ್ನಗಳು ವಚನ ಸಾಹಿತ್ಯಕ್ಕೆ ಎಸಗುವ ಅಪಚಾರವಲ್ಲವೇ?
ರಾಜ್ಯದ ಬಿಜೆಪಿ ಸರ್ಕಾರ ವೋಟುಗಳಿಗಾಗಿ ಈ ಸ್ಥಾವರಗಳ ಸ್ಥಾಪನೆಗೆ ಜನರ ತೆರಿಗೆ ಹಣವನ್ನು ನೀಡುವುದು ಬೇಡ.

ಅನುತ್ಪಾದಕ ಕೆಲಸಗಳಿಗೆ ಹಣ ಪೋಲು ಮಾಡುವ ಬದಲು ಅದನ್ನು ಬಡಜನರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ನೀಡಬಹುದಲ್ಲವೇ? ಮಠಾಧೀಶರು ಈ ಕುರಿತು ಮರು ಪರಿಶೀಲನೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT