ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರ್ಮಿಳಾ ಮಾಂಡ್ರೆ ಯುವಸಾಧಕಿ

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬಾಲಿವುಡ್ನ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ಅವರ ಸಿನಿಮಾ ಶಾಲೆ ವಿಸ್ಲಿಂಗ್ ವುಡ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯು ನಟಿ ಶರ್ಮಿಳಾ ಮಾಂಡ್ರೆ ಸೇರಿದಂತೆ ಬೆಂಗಳೂರಿನ ಯುವ ಸಾಧಕರನ್ನು ಇತ್ತೀಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತ್ಕರಿಸಿತು.

ನಗರದ ಮದರ್ ಟೇಕ್ಲಾ ಸಭಾಂಗಣದಲ್ಲಿ ‘ನಮ್ಮ ಮಾಧ್ಯಮ’ ಕುರಿತು ಹಮ್ಮಿಕೊಂಡಿದ್ದ ಚರ್ಚಾಗೋಷ್ಠಿಯಲ್ಲಿ ಶರ್ಮಿಳಾ ಮಾಂಡ್ರೆ, ಆರ್‌ಜೆ ಡ್ಯಾನಿಷ್,  ನಿರ್ದೇಶಕ ಸಾಜಿದ್ ಖಾನ್ ಮತ್ತು ಲೇಖಕ ಶೋಮ್‌ಪ್ರಕಾಶ್ ಸಿನ್ಹಾ ರಾಯ್ ಅವರನ್ನು ಸನ್ಮಾನಿಸಲಾಯಿತು. ಸಿನಿಮಾ, ಮಾಧ್ಯಮ ಮತ್ತು ಫ್ಯಾಷನ್ ರಂಗದ ಕುರಿತು ಈ ಚರ್ಚಾಗೋಷ್ಠಿಯನ್ನು ನಡೆಸಲಾಗಿತ್ತು.

ಸಂಪಾದಕಿ ಪ್ರಿಯದರ್ಶಿನಿ ನಂದಿ, ಸ್ನಿಪಲ್ ಅನಿಮೇಷನ್ ಸ್ಟುಡಿಯೋದ  ಸ್ವಾತಿ ರಾವ್, ಫ್ಯಾಷನ್ ಡಿಸೈನರ್ ಶಿಲ್ಪಿ ಚೌಧರಿ ಸೇರಿದಂತೆ ಈ ಕ್ಷೇತ್ರಗಳ ತಜ್ಞರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಮುಕ್ತಾ ಆರ್ಟ್ಸ್ ಸಂಸ್ಥೆಯ ಉಪ ನಿರ್ದೇಶಕ ರಾಹುಲ್ ಪುರಿ ರಾಯ್ ಗೋಷ್ಠಿಯನ್ನು ನಡೆಸಿಕೊಟ್ಟರು. ನಗರದ ವಿವಿಧ ಕಾಲೇಜುಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಫೋಟೋಗ್ರಫಿ, ಕಿರುಚಿತ್ರ ಮತ್ತು ಚಲನಚಿತ್ರಗಳ ಕುರಿತಂತೆ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿತ್ತು. ೩೫ ಸಾವಿರ ರೂಪಾಯಿ ಮೊತ್ತದ ಬಹುಮಾನಗಳನ್ನು ವಿತರಿಸಲಾಯಿತು.

ಮುಂಬೈನಲ್ಲಿರುವ ವಿಸ್ಲಿಂಗ್ ವುಡ್ ಇಂಟರ್‌ನ್ಯಾಷನಲ್ ಸಂಸ್ಥೆ ಇನ್‌ಸ್ಪಿರೇಷನ್ ಹೆಸರಿನಡಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಪಟ್ಟಣಗಳಲ್ಲಿ ಈ ಚರ್ಚಾಗೋಷ್ಠಿಗಳನ್ನು ಹಮ್ಮಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಚಲನಚಿತ್ರ, ಫ್ಯಾಷನ್ ಮತ್ತು ಮಾಧ್ಯಮ ಜಗತ್ತು ಹೇಗಿರಬಹುದು, ಹೇಗಿರಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿದೆ. ವಿದ್ಯಾರ್ಥಿಗಳನ್ನು ಅದಕ್ಕಾಗಿ ಸಜ್ಜುಗೊಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT