ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಚಿಕಿತ್ಸಾ ಘಟಕ ಉದ್ಘಾಟನೆ

Last Updated 5 ಜನವರಿ 2014, 20:32 IST
ಅಕ್ಷರ ಗಾತ್ರ

ಬೆಂಗಳೂರು: ದಿ ಸ್ಟೇಟ್‌ ಆಫ್‌ ಆರ್ಟ್‌ ಸೂಪರ್ ಸ್ಪೆಷಾಲಿಟಿ ಸಕಾರ್‌ ಆಸ್ಪತ್ರೆ­ಯಲ್ಲಿನ  ಸಂಯೋಜಿತ ಶಸ್ತ್ರಚಿಕಿತ್ಸಾ ಘಟಕ­ಗಳನ್ನು ಬಯೋಕಾನ್‌ ವ್ಯವ­ಸ್ಥಾಪಕ ನಿರ್ದೇಶಕಿ ಕಿರಣ್‌ ಮಜುಂದಾರ್ ಉದ್ಘಾಟಿಸಿದರು.

ಕಿರ್ಲೋಸ್ಕರ್, ಟೊಯೊಟಾ, ಸೀಕಾಮ್ ಆಸ್ಪತ್ರೆ  ಸೇರಿದಂತೆ  ಹಲವು ಸಮೂಹ ಸಂಸ್ಥೆಗಳ ಪಾಲುದಾರಿಕೆ­ಯಲ್ಲಿ ಸಕಾರ್ ಆಸ್ಪತ್ರೆ ಸೇವೆ ಸಲ್ಲಿಸುತ್ತಿದೆ. ಉದ್ಘಾಟನೆಯ ನಂತರ ಮಾತನಾಡಿದ ಕಿರಣ್‌ ಮಜುಂದಾರ್,  ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಉತ್ಕಷ್ಟ ಗುಣಮಟ್ಟದ ಆರೋಗ್ಯ ಸೇವೆ ಒದಗಿ­ಸುವಲ್ಲಿ ಸಕಾರ್ ಹೊಸ ಯೋಜನೆ­ಗಳನ್ನು ರೂಪಿಸಿಕೊಂಡಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಾದ್ಯಂತ ಇತರೆ ಶಾಖೆಗಳನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದೆ ಎಂದ ಅವರು,  ಜಪಾನ್‌ನಲ್ಲಿ ತರಬೇತಿ ಪಡೆದಿರುವ ನುರಿತ ಶುಶ್ರೂಷಕರಿದ್ದು, ಉತ್ತಮ ಸೇವೆ ಇದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT