ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶಹಾಪುರ: ಬಯೋ ಡೈಜೆಸ್ಟ್ ಶೌಚಾಲಯ'

Last Updated 5 ಸೆಪ್ಟೆಂಬರ್ 2013, 6:32 IST
ಅಕ್ಷರ ಗಾತ್ರ

ಕೆಂಭಾವಿ: ಸಮೀಪದ ಗುತ್ತಿ ಬಸವೇಶ್ವರ ರಸ್ತೆಯಲ್ಲಿ ಪ್ರಾರಂಭಗೊಂಡಿರುವ ಸುರಪುರ-ಹುನಗುಂದ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಶಾಸಕ ಗುರು ಪಾಟೀಲ ಈಚೆಗೆ ಪರಿಶೀಲಿಸಿದರು.

ತ್ವರಿತಗತಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಿದ ಅವರು, ರಸ್ತೆ ತುಂಬಾ ಹಾಳಾಗಿದೆ. ಬೇಗ ಕಾಮಗಾರಿ ಮಾಡುವುದರಿಂದ ಜನರಿಗೆ ಅನುಕೂಲವಾಗುತ್ತದೆ ಎಂದು ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಶೌಚಾಲಯ ಅತ್ಯವಶ್ಯವಾಗಿದ್ದು, ಹೊಸ ಮಾದರಿಯಲ್ಲಿ ಶೌಚಾಲಯ ನಿರ್ಮಿಸುವ ಚಿಂತನೆ ನಡೆದಿದೆ.

ಗಡಿಭಾಗದ ಸೇನಾಪಡೆಯಲ್ಲಿ ಅಳವಡಿಸಲಾಗಿರುವ ಬಯೋ ಡೈಜಿಸ್ಟ್ ಶೌಚಾಲಯಗಳನ್ನು ಡಿಆರ್‌ಡಿಇ ಸಂಶೋಧನೆ ನಡೆಸಿದೆ. ಕೇಂದ್ರ ಸರ್ಕಾರ ಈ ಶೌಚಾಲಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಸೇನೆಯಲ್ಲಿ ಇದನ್ನು ಬಳಸಲಾಗುತ್ತಿದ್ದು, ಪರಿಸರ ಸ್ನೇಹಿ ಶೌಚಾಲಯ ಇದಾಗಿದೆ. ಈ ಶೌಚಾಲಯಗಳಲ್ಲಿ ಗಟ್ಟಿ ಪದಾರ್ಥವನ್ನು ಗ್ಯಾಸ್ ಮಾಡಿ, ಹೊರಹಾಕುವುದರ ಜೊತೆಗೆ ಕೇವಲ ನೀರನ್ನು ಮಾತ್ರ ಹೊರ ಬಿಡುತ್ತದೆ.

ಇದರಿಂದ ಪರಿಸರ ಕೂಡಾ ಕಲುಷಿತಗೊಳ್ಳುವುದಿಲ್ಲ. ಇದನ್ನು ಸಾರ್ವಜನಿಕರಿಗಾಗಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಅಳವಡಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಮೊದಲಿಗೆ ಪ್ರಾಯೋಗಿಕವಾಗಿ ಶಹಾಪುರ ಪುರಸಭೆ ವ್ಯಾಪ್ತಿಯಲ್ಲಿ ಅಳವಡಿಸಲಾಗುವುದು. ನಂತರ ದಿನಗಳಲ್ಲಿ ಕ್ಷೇತ್ರದಾದ್ಯಂತ ವಿಸ್ತರಿಸಲಾಗುವುದು.

ಈಗಾಗಲೇ ಎರಡು ಶೌಚಾಲಯಗಳನ್ನು ಖರೀದಿಸಲಾಗಿದೆ ಎಂದು ತಿಳಿಸಿದರು.
ಎಚ್.ಕೆ.ಡಿ.ಬಿ ಮತ್ತು ಶಾಸಕರ ಅನುದಾನದಲ್ಲಿ ರೂ. 20 ಲಕ್ಷ, ಪುರಸಭೆಯಿಂದ ರೂ.30 ಲಕ್ಷ ವೆಚ್ಚದ ಕ್ರಿಯಾಯೋಜನೆ ಸಿದ್ದಗೊಳಿಸಲಾಗುತ್ತಿದೆ. ಶೀಘ್ರ ಹೊಸ ಮಾದರಿಯ ಶೌಚಾಲಯಗಳು ಬರಲಿವೆ ಎಂದು ಹೇಳಿದರು.

ರಾಜ್ಯದಲ್ಲಿಯೇ ಸಾರ್ವಜನಿಕರಿಗೆ ಬಯೋ ಡೈಜಿಸ್ಟ್ ಶೌಚಾಲಯ ಅಳವಡಿಸುತ್ತಿರುವುದು, ಶಹಾಪುರ ಮತಕ್ಷೇತ್ರದಲ್ಲಿ ಮೊದಲು. ಈ ಬಗ್ಗೆ ಹೈದರಾಬಾದ್‌ಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಯನ್ನು ಪರಿಶೀಲಿಸಿ ಬಂದಿದ್ದು, ಕ್ಷೇತ್ರದ ಜನತೆಗೆ ಇದರಿಂದ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕರು ಉತ್ತಮವಾಗಿ ಬಳಸಿಕೊಂಡಲ್ಲಿ ಇದೊಂದು ಉತ್ತಮ ಯೋಜನೆಯ ಜೊತೆಗೆ ಈ ಭಾಗದ ಮಹಿಳೆಯರಿಗೆ ಅನುಕೂಲವಾಗಲಿದೆ. ಸಾರ್ವಜನಿಕರ ಸಹಕಾರವೂ ಅವಶ್ಯಕ ಎಂದು ಹೇಳಿದರು.

ಲಾಲ್ ಅಹಮದ್ ಖುರೇಶಿ, ಹೃತೀಕ್, ಸುರೇಶ ಸೊನ್ನದ, ನಾಡರೆಡ್ಡಿ ಧರಿ, ಸುಭಾಷ ಮ್ಯೋಗೇರಿ, ತಾಹೇರ ಹುಸೇನ್ ಖಾಜಿ, ರವಿಂದ್ರ, ಕಲೀಮ್ ಎಸ್.ಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT