ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂಘೈ: ಎರಡನೇ ಮಗುವಿಗೆ ಉತ್ತೇಜನ

Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

ಬೀಜಿಂಗ್ (ಪಿಟಿಐ): ಇರುವ ಏಕೈಕ ಮಗುವನ್ನು ಕಳೆದುಕೊಂಡು ನಿರಾಶರಾಗಿರುವ ದಂಪತಿ 2ನೇ ಮಗು ಪಡೆಯಲು ಶಾಂಘೈನ ಕುಟುಂಬ ಯೋಜನೆ ಅಧಿಕಾರಿಗಳು ಇದೀಗ ಉತ್ತೇಜನ ನೀಡಿದ್ದಾರೆ.

ವಾಸ್ತವವಾಗಿ ಒಂದು ದಂಪತಿಗೆ ಒಂದೇ ಮಗು ನಿಯಮ ಇಲ್ಲಿ 1970ರಿಂದಲೇ ಕಡ್ಡಾಯ ಮಾಡಲಾಗಿದ್ದು, ಇದೀಗ ಅಧಿಕಾರಿಗಳ ಈ ಘೋಷಣೆ ಮಗುವಿಲ್ಲದವರ ಬಾಳಲ್ಲಿ ನೆಮ್ಮದಿ ಮೂಡಿಸಿದೆ. ಇರುವ ಏಕೈಕ ಮಗುವನ್ನು ಕಳೆದುಕೊಂಡ ದಂಪತಿಗಳ ಸಂಖ್ಯೆ ಶಾಂಘೈ ನಗರದಲ್ಲಿ ಶೇ 1.2 ಮಾತ್ರ ಇರುವುದಾಗಿ ನಗರಸಭೆಯ ಜನಸಂಖ್ಯೆ, ಕುಟುಂಬ ಯೋಜನಾ ಸಮಿತಿ ನಿರ್ದೇಶಕಿ ಹೂಂಗ್ ಹಾಂಗ್ ತಿಳಿಸಿದರು.

ಈತನಕ ಒಟ್ಟು 7,000 ಕುಟುಂಬಗಳು ತಮಗಿರುವ ಏಕೈಕ ಮಗುವನ್ನು ಕಳೆದುಕೊಂಡಿದ್ದು, ಇದು ಅತ್ಯಂತ ನೋವಿನ ಸಂಗತಿ. ಇಂತಹ ಕುಟುಂಬಗಳ ಬಾಳಲ್ಲಿ ಮತ್ತೆ ಬೆಳಕು ಮೂಡುವಂತಾಗಲು ಹೆಚ್ಚುವರಿ ಮಗು ಪಡೆಯಲು ಅವಕಾಶ ನೀಡಲಾಗಿದೆ. ಬೇರೆ ಕೆಲ ನಗರಗಳಂತೆಯೇ ಶಾಂಘೈ ಸಹ ವೃದ್ಧಾಪ್ಯದ ಸಮಸ್ಯೆಯನ್ನು ಗಂಭೀರವಾಗಿ ಎದುರಿಸುತ್ತಿದೆ ಎಂದು ಹಾಂಗ್ ತಿಳಿಸಿದರು. . ಶಾಂಘೈನಲ್ಲಿ ನೋಂದಾಯಿತ 14.21 ದಶಲಕ್ಷ ಜನಸಂಖ್ಯೆ ಇದ್ದು ಇದರಲ್ಲಿ ಶೇ 24.5 ರಷ್ಟು ಜನ 60 ವರ್ಷ ದಾಟಿದವರೇ ಆಗಿದ್ದಾರೆ ಎಂದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT