ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯ ಸಂದೇಶ ನೀಡಿದ ಜೈನಧರ್ಮ

Last Updated 21 ಸೆಪ್ಟೆಂಬರ್ 2013, 6:57 IST
ಅಕ್ಷರ ಗಾತ್ರ

ಗದಗ:  ಸಹಬಾಳ್ವೆ, ಸಹನೆ, ಅಹಿಂಸಾ ಸಂದೇಶವನ್ನು ಜಗತ್ತಿಗೆ ಕೊಡುಗೆ­ಯಾಗಿ  ನೀಡಿದ ಕೀರ್ತಿ ಜೈನ ಧರ್ಮ­ಕ್ಕೆ ಸಲು್ಲತ್ತದೆ ಎಂದು ಗದಗ ಬೆಟಗೇರಿ ನಗರಸಭೆ  ಮಾಜಿ ಅಧ್ಯಕ್ಷ ಎಲ್.ಡಿ.­ಚಂದಾ­ವರಿ ಅಭಿ­ಪ್ರಾಯ­ಪಟ್ಟರು.

ರಾಜೀವಗಾಂಧಿ ನಗರದ ಈಶ್ವರ ದೇವಸಾ್ಥನದಲ್ಲಿ ಜಿಲ್ಲಾ ಜೈನ ಬಾಂಧವರ ಹಾಗೂ ಜೈನೇತರ­ರೊಂದಿಗೆ  ನಡೆದ ದಶಲಕ್ಷ ಪರ್ವದ ಸಾಮೂಹಿಕ ಕ್ಷಮಾವಳಿ ಉದಾ್ಘಟಿಸಿ ಮಾತನಾಡಿದರು. ವ್ಯಸನ ಮುಕ್ತ ಬದುಕು ನಮ್ಮದಾಗಲು ಅಹಿಂಸೆ, ಶಾಂತಿ ಸಮನ್ವಯತೆ ಅವಶ್ಯಕತೆ ಇದ್ದು, ಸರ್ವಧರ್ಮಗಳು ಬಿತ್ತುವ ಸಾರವು ಒಂದೆಯಾಗಿದೆ ಎಂದರು.

ಪ್ರೊ.ಆರ್.ಎಸ್.ಕಲ್ಲನಗೌಡರ ಮಾತನಾಡಿ, ಬದುಕಿನ ಅರಿಷಡ್ವರ್ಗ­ಗಳನ್ನು ಧ್ಯಾನ, ತಪಸ್ಸು, ಯೋಗ, ಸತ್ಸಂಗಳಿಂದ ಗೆಲ್ಲಬಹುದು. ಇಂದು ಜಗತ್ತನ್ನು ಹಿಂಸೆಯು ಅಲ್ಲಾಡಿಸು­ತ್ತಿದ್ದು, ಶಾಂತಿ ಮಂತ್ರ ಪಠಿಸ­ಬೇಕಾಗಿದೆ. ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದರು.

ಶಿರಡಿ ಸತ್ಸಂಗ ಸಮಿತಿ ಅಧ್ಯಕ್ಷ ಐ.ಕೆ.­ಬಲೂಚಗಿ ಮಾತನಾಡಿ, ಕೋಪ ತಾಪ­ಗಳಿಗೆ  ಬಲಿಯಾಗದೆ ಮನಸ್ಸನ್ನು ಶುದ್ಧೀ­­ಕರಿಸಬೇಕು ಎಂದರು. ಶಿಕ್ಷಕಿ ಕವಿತಾ ದಂಡಿನ, ನಗರಸಭಾ ಸದಸ್ಯ ಅನಿಲ್‌ ಶಿಂಗಟಾಲಕೇರಿ, ಡಾ.­ಅಪ್ಪಣ್ಣ ಹಂಜೆ, ಚನ್ನಬಸವ ಅಕ್ಕಿ, ಎನ್.ಎಂ.ಪಾಟೀಲ ಜಿ.ಬಿ.ಕಂಕ್ರಿ, ಸತ್ಯಪ್ಪ ಕೋಲಕಾರ, ದ್ರಾಕ್ಷಾಯಣಿ ಮಾಲಗಿತ್­ತಿಮಠ, ಸಿದ್ದಪ್ಪ ಇಟಗಿ, ಬಸವರಾಜ ಬ್ಯಾಹಟ್ಟಿ, ಎಂ.ಬಿ.­ಕೊಳವಾರ, ಬಸವ­ರಾಜ ಕಡೇಮನಿ, ಸೋಮನ­ಗೌಡ್ರ,  ವೆಂಕಟೇಶ, ರಾಜು, ­ಮುಳಗುಂದ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT