ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಪಿಂಗ್ ಆಫರ್

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಿಲಯನ್ಸ್ ಟೈಮ್‌ಔಟ್
ಪುಸ್ತಕ, ಸೀಡಿ ಹಾಗೂ ಸ್ಟೆಷನರಿ ವಸ್ತುಗಳನ್ನು ಮಾರಾಟ ಮಾಡುವ ರಿಲಯನ್ಸ್ ಟೈಂ ಔಟ್ ದೀಪಾವಳಿಗಾಗಿ ವಿಶೇಷ ಕೊಡುಗೆ ಪ್ರಕಟಿಸಿದೆ.

1 ಸಾವಿರ ರೂ ಮೌಲ್ಯದ ಖರೀದಿಯೊಂದಿಗೆ 1 ಸಾವಿರ ರೂ ಗಿಫ್ಟ್ ವೋಚರ್‌ಗಳನ್ನು ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಿದೆ. ಇದರ ಜತೆಗೆ ಕ್ಯಾಮಿಲಾ ಪರ್‌ಪ್ಯೂಮ್‌ಗಳನ್ನು ಸಹ ಗೆಲ್ಲಬಹುದು.
ಈ ಕೊಡುಗೆ ಅ.30ರ ವರೆಗೆ ಎಲ್ಲ ರಿಯಲನ್ಸ್ ಟೈಂ ಔಟ್ ಮಳಿಗೆಗಳಲ್ಲಿ ಲಭ್ಯ.

ಗೋದ್ರೇಜ್ ಜೀ. ಒನ್
ದೀಪಾವಳಿ ಹಿನ್ನೆಲೆಯಲ್ಲಿ ಗೋದ್ರೆಜ್ ಅಪ್ಲಯನ್ಸಸ್ ಶಾರುಖ್‌ಖಾನ್ ನಾಯಕರಾಗಿರುವ `ರಾ ಒನ್~ ಜತೆ ಒಪ್ಪಂದ ಮಾಡಿಕೊಂಡಿದ್ದು, `ಜೀ. ಒನ್ ಮೇ ಏಕ್ ಬಾರ್~ ಎಂಬ ಆಫರ್ ನೀಡುತ್ತಿದೆ.  ಇದರಡಿ ಅ.31ರ ವರೆಗೆ ಸ್ಕ್ರಾಚ್ ಕಾರ್ಡ್ ಆಧಾರಿತ ಖಾತ್ರಿ ಕೊಡುಗೆ ದೊರೆಯುತ್ತದೆ.

ಇದರಲ್ಲಿ ನೀವು ಖರೀದಿಸಿದ ವಸ್ತುವಿನ ಪೂರ್ಣ ಬೆಲೆಯನ್ನು ವಾಪಸು ಪಡೆಯಬಹುದು, ಟೈಮೆಕ್ಸ್ ವಾಚ್ ಗೆಲ್ಲಬಹುದು ಅಥವಾ 1000, 500 ಮತ್ತು 200 ರೂಪಾಯಿಗಳ ನಗದು ಬಹುಮಾನ ಪಡೆಯಬಹುದು.
 ಈ ಕೊಡುಗೆ ಫ್ರಿಜ್, ಏರ್‌ಕಂಡೀಷನರ್, ವಾಷಿಂಗ್ ಮಿಷನ್, ಮೈಕ್ರೊವೇವ್ ಓವನ್, ಟೆಲಿವಿಷನ್ ಇತ್ಯಾದಿಗಳಿಗೆ ಅನ್ವಯ.

ಸೋನಿ ಎರಿಕ್ಸನ್
ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸೋನಿ ಎರಿಕ್ಸನ್, ಇದೀಗ ಹಬ್ಬದ ಸಂದರ್ಭದಲ್ಲಿ ಡಬ್ಲ್ಯೂ 8 ವಾಕ್‌ಮ್ಯೋನ್ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. 

ಆಧುನಿಕ ಮನೋಭಾವದ ಯುವಕ ಯುವತಿಯರಿಗೆ ಪ್ರಿಯವಾಗುವ ವಿಭಿನ್ನ ಮಾದರಿಯ ಸಂಗೀತವನ್ನು ಒಳಗೊಂಡ ಈ ಸ್ಮಾರ್ಟ್ ವಾಕ್‌ಮನ್‌ಗೆ ಶೇ 100 ಮನಿ ಬ್ಯಾಕ್ ವಿಶೇಷ ಆರ್ ಕೂಡ ದೊರೆಯಲಿದೆ. ಇದಲ್ಲದೆ ರಿಲಯನ್ಸ್ 3ಜಿ ಸಿಮ್ ಮತ್ತು 2 ತಿಂಗಳ ಪ್ರಿಪೇಡ್ ಅಥವಾ 24 ತಿಂಗಳ ಪೋಸ್ಟ್‌ಪೇಡ್ ಸಂಪರ್ಕ ನೀಡಲಾಗುತ್ತದೆ.

ಗ್ರಾಹಕರು ತಮಗೆ ಬೇಕಾದ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು. 50 ಕ್ಕೂ ಅಧಿಕ ಹಾಡುಗಳು ಮತ್ತು 12 ಪ್ರಿ ಲೋಡೆಡ್ ವಿಡಿಯೊಗಳು ಇದರಲ್ಲಿವೆ ಎನ್ನುತ್ತಾರೆ ಸೋನಿ ಎರಿಕ್ಸನ್ ಇಂಡಿಯಾದ ಮಾರುಕಟ್ಟೆ ಮುಖ್ಯಸ್ಥ ಪ್ರಸೂನ್ ಕುಮಾರ್.

ಟಾಟಾ ಸ್ಕೈ
ದೀಪಾವಳಿ ಹಬ್ಬದ ಅಂಗವಾಗಿ ಟಾಟಾ ಸ್ಕೈ ತನ್ನ ಗ್ರಾಹಕರಿಗೆ ಬೃಹತ್ ಕೊಡುಗೆ ನೀಡುತ್ತಿದೆ. ಇದರಲ್ಲಿ ಎಚ್‌ಡಿ ಬಾಕ್ಸ್‌ನ ಅಳವಡಿಕೆ ಶುಲ್ಕ ಮನ್ನಾ, ಹಬ್ಬಕ್ಕೆ ಮುನ್ನ ಆಕ್ಟಿವೇಟ್ ಮಾಡುವ ಎಲ್ಲ ಎಚ್‌ಡಿ ಬಾಕ್ಸ್‌ಗಳ ಜತೆ 2 ತಿಂಗಳ ಉಚಿತ ಎಚ್‌ಡಿ ಪ್ಯಾಕ್ ಕೊಡುಗೆ, 2 ತಿಂಗಳ ಬೇಸ್ ಪ್ಯಾಕೇಜ್‌ನ ಉಚಿತ ಚಂದಾದಾರಿಕೆ ಸೇರಿದೆ.

ಕ್ರೀಡಾ ಪ್ರೇಮಿಗಳಿಗಾಗಿ ಭಾರತ ಇಂಗ್ಲೆಂಡ್ ಸರಣಿಯ ಏಕದಿನ ಮತ್ತು ಟಿ-20 ಕ್ರಿಕೆಟ್ ಪಂದ್ಯಗಳನ್ನು ಹೈ ಡೆಫಿನಿಷನ್‌ನಲ್ಲಿ ಟಾಟಾ ಸ್ಕೈ ನೀಡುತ್ತಿದೆ. ಈ ವಿಶೇಷ ಕೊಡುಗೆಯು ಟಾಟಾ ಸ್ಕೈ+ಎಚ್‌ಡಿ ಮತ್ತು ಟಾಟಾ ಸ್ಕೈ ಎಚ್‌ಡಿ ಗ್ರಾಹಕರಿಗೆ ಮಾತ್ರ ಲಭ್ಯ.

ಪಿಸ್ತಾಷಿಯೊ
ಪ್ಯಾರಮೌಂಟ್ ಫಾರ್ಮ್ಸನ ಸೊಗಸಾದ ಬಾದಾಮಿ, ಪಿಸ್ತಾ `ಪಿಸ್ತಾಷಿಯೊ~ವನ್ನು ಹಬ್ಬದ ಉಡುಗೊರೆಯಾಗಿ ನೀಡಬಹುದು.

ಕ್ಯಾಲಿಪೋರ್ನಿಯಾದಲ್ಲಿ ಬೆಳೆದ ಈ ಪಿಸ್ತಾ ಕಡಿಮೆ ಕೊಬ್ಬಿನ ಅಂಶ, ಹೆಚ್ಚು ಪೌಷ್ಟಿಕಾಂಶ ಒಳಗೊಂಡಿದೆ. ಹೃದಯವನ್ನು ಆರೋಗ್ಯವಾಗಿಡಲು ಇದು ನೆರವಾಗುತ್ತದೆ.
ಮುಸುಕಿನ ಜೋಳದ ಚಿಪ್ಸ್, ಫ್ರೆಶ್ ಫ್ರೂಟ್ ಚಂಕ್ಸ್ ಸ್ಪ್ರಿಂಕಲ್ಡ್ ಚಿಲ್ಲಿ ಲೈಮ್ ಸಾಲ್ಟ್ ಜತೆಗೆ ಪಿಸ್ತಾ ಸವಿಯುವಾಗ ಸಿಗುವ ಮಜವೇ ಬೇರೆ. ಹಬ್ಬದ ವೇಳೆ ಪ್ರೀತಿ ಪಾತ್ರರಿಗೆ ಪಿಸ್ತಾವನ್ನು ನೀಡಿ ಖುಷಿಯಾಗಿಸುವುದರ ಜತೆಗೆ ಅವರ ಹೃದಯದ ಬಗ್ಗೆಯೂ ಕಾಳಜಿ ವಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT